Skip to main content

Posts

Showing posts with the label Ripponpet major city of Hosanagara taluk shimoga district previous name was MUDUKOPPA renamed after British Viceroy Lord Rippon stayed here for Hunting

Blog number 2002. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮೂಡುಕೊಪ್ಪದಲ್ಲಿ ಬ್ರಿಟೀಶ್ ವೈಸ್ ರಾಯ್ ಲಾರ್ಡ್ ರಿಪ್ಪನ್ ಶಿಕಾರಿಗಾಗಿ ತಂಗಿದ್ದರಿಂದ ಅವರ ಸ್ಮರಣೆಗಾಗಿ ಮೂಡುಕೊಪ್ಪ ರಿಪ್ಪನ್ ಪೇಟೆ ಆಯಿತು

#ರಿಪ್ಪನ್_ಪೇಟೆ_ನಾಮಕರಣಕ್ಕೆ_ಕಾರಣ #ದೊಡ್ಡಿನಕೊಪ್ಪ_ಮೂಲ_ಹೆಸರಿನ_ಹಳ್ಳಿ_ರಿಪ್ಪನ್_ಪೇಟೆ_ಆದ_ಕಥೆ #ಲಾರ್ಡ್_ರಿಪ್ಪನ್_ಸ್ಮರಣೆಯ_ರಿಪ್ಪನ್_ಪೇಟೆ_ಸಮೀಪದ #ಅರಸಾಳು_ರೈಲು_ನಿಲ್ದಾಣದ_ಹೆಸರು #ಆರ್_ಕೆ_ನಾರಾಯಣರ_ಸ್ಮರಣೆಯ_ಮಾಲ್ಗುಡಿ_ರೈಲು_ನಿಲ್ದಾಣ. #ಇಲ್ಲಿ_ಶಂಕರ್_ನಾಗ್_ದೂರದರ್ಶನಕ್ಕಾಗಿ_ಮಾಲ್ಗುಡಿ_ಡೇಸ್_ಚಿತ್ರಿಕರಣ_ಮಾಡಿದ್ದರು.     ನಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಗೆ ಈ ಹೆಸರು ಬರಲು ಕಾರಣ ಏನು?.... ಈ ಬಗ್ಗೆ ಸ್ಥಳೀಯರು ಹೇಳುತ್ತಿದ್ದಿದ್ದು ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಮತ್ತು ರೈಲು ನಿಲ್ದಾಣ ಈ ಊರಿಗೆ ಬಂದರೆ ಪ್ಲೇಗ್ ಬರುತ್ತದೆ ಎಂಬ ಭಯದಿಂದ ತಮ್ಮ ಊರಿಗೆ ರೈಲು ಮಾರ್ಗ ಮತ್ತು ರೈಲು ನಿಲ್ದಾಣ ನಿರಾಕರಿಸಿ ಆಗ ಸ್ಥಳಕ್ಕೆ ಬಂದ ಲಾಡ್೯ ರಿಪ್ಪನ್ ಗೆ  ಮನವಿ ಮಾಡಿ ಅವರ ಹೆಸರನ್ನು ಅವರ ಬೇಟಿಯ ಸ್ಮರಣೆಗಾಗಿ ಇಟ್ಟಿದ್ದರು ಎನ್ನುವುದು.   ಇದನ್ನು ನಾನು ಅನೇಕ ಹಿರಿಯರಿಂದ ಕೇಳಿದ್ದೆ... ಈಗಿನ ತಲೆಮಾರಿನವರೂ ಅದನ್ನೆ ಪುನರುಚ್ಚಿಸುತ್ತಾರೆ....ಮೂಲ ಈ ಪ್ರದೇಶದ ಹೆಸರು ದೊಡ್ಡಿನಕೊಪ್ಪ.    ನಾನು ಕೂಡ ನನ್ನ ಕೆಲವು ಲೇಖನಗಳಲ್ಲಿ ಹೀಗೆ ಬರೆದಿದ್ದೆ.... ಆದರೆ ಪತ್ರಕರ್ತ ಮಿತ್ರರಾದ #ಡಿ_ಪಿ_ಸತೀಶ್ ಒಂದು ಅಂಶ ಗುರುತಿಸಿದರು, ಲಾರ್ಡ್ ರಿಪ್ಪನ್ ಅಧಿಕಾರವದಿ ಬದುಕಿದ ಕಾಲಾವಧಿ ಮತ್ತು ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗದ ಕಾಮಗಾರಿಗೆ ಸುಮಾರು...