Blog number 1297. ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗದ ಅರಸಾಳು ರೈಲು ನಿಲ್ದಾಣವನ್ನು ಮಾಲ್ಗುಡಿ ಅರಸಾಳು ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ ಇಲ್ಲಿ ಮಾಲ್ಗುಡಿ ಡೇಸ್ ಮ್ಯೂಸಿಯಂ ಕೂಡ ಇದೆ, ರೈಲ್ವೆ ಇಲಾಖೆ ಪ್ರಸಿದ್ಧ ಸಾಹಿತಿ ಆರ್ .ಕೆ . ನಾರಾಯಣರ ಪ್ರಸಿದ್ಧ ಕೃತಿ ಮಾಲ್ಗುಡಿ ಡೇಸ್ ಇಲ್ಲಿ ಶಂಕರ್ ನಾಗ್ ದೂರದರ್ಶನಕ್ಕಾಗಿ ಚಿತ್ರಿಕರಣ ಮಾಡಿದ ಸವಿ ನೆನಪಿಗಾಗಿ ಇದನ್ನು ನಿರ್ಮಿಸಿದೆ.
ಅರಸಾಳು ರೈಲು ನಿಲ್ದಾಣ ಇನ್ನು ಮುಂದೆ ಮಾಲ್ಗುಡಿ ರೈಲು ನಿಲ್ದಾಣ ಅರಸಾಳು ಎಂಬ ಸಣ್ಣ ಹಳ್ಳಿ ಶಿವಮೊಗ್ಗ ಹೊಸನಗರ ಮಧ್ಯದ ದಟ್ಟ ಅರಣ್ಯದಲ್ಲಿದೆ, ಸ್ವಾತಂತ್ರ ಪೂವ೯ದಲ್ಲಿ ಜೋಗ ಜಲಪಾತ ಸಂಪಕಿ೯ಸಲು ರೈಲು ಮಾಗ೯ ನಿಮಾ೯ಣ ಪ್ರಾರಂಭವಾದಾಗ ಅರಸಾಳು ರೈಲು ನಿಲ್ದಾಣದ ಪ್ರಸ್ತಾಪ ಇರಲಿಲ್ಲ. ಮೂಡುಕೊಪ್ಪ (ನಂತರ ರಿಪ್ಪನ್ ಪೇಟೆ ಎ೦ಬ ಹೆಸರಾಯಿತು) ರೈಲು ನಿಲ್ದಾಣ ಪ್ರಸ್ತಾವನೆಯಲ್ಲಿ ಸೇರಿತ್ತು, ಅಲ್ಲಿಂದ ಆನಂದಪುರಂ, ಸಾಗರ, ತಾಳಗುಪ್ಪ ರೈಲು ಮಾಗ೯ದ ಯೋಜನೆ ಅದು ಆಗಿತ್ತು. ರೈಲು ಮಾರ್ಗದ ಸರ್ವೆ ಪರಿಶೀಲನೆಗೆ ಬ್ರಿಟಿಷ್ ಅಧಿಕಾರಿಗಳು ಇಲ್ಲಿಗೆ ಬಂದಾಗ ಈ ಭಾಗದ ಪ್ರಮುಖರೆಲ್ಲ ಸೇರಿ ಅವರನ್ನು ಸನ್ಮಾನಿಸಿ ಅವರಿಗೆ ಸುಮಾರು 50 ವಷ೯ದ ಹಿಂದೆ ವೈಸ್ ರಾಯ್ ಆಗಿದ್ದ ಲಾರ್ಡ್ ರಿಪ್ಪನ್ (ಅಧಿಕಾರಾವಧಿ1880-1884) ಈ ಊರಿನಲ್ಲಿ ಶಿಕಾರಿಗಾಗಿ ತಂಗಿದ್ದ ಸವಿ ನೆನಪಿಗಾಗಿ ಲಾಡ್೯ ರಿಪ್ಪನ್ ರ ಹೆಸರನ್ನ ಚಿರಸ್ಥಾಯಿಗೊಳಿಸಲು ತಮ್ಮ ಮೂಡುಕೊಪ್ಪ ಎಂಬ ಹಳ್ಳಿಗೆ ರಿಪ್ಪನ್ ಪೇಟೆ ಎಂದು ನಾಮಕರಣ ಮಾಡಿರುವುದಾಗಿ ತಿಳಿಸಿದಾಗ ರೈಲ್ವೆ ಕಾಮಗಾರಿ ಉಸ್ತ ವಾರಿಯ ಬ್ರಿಟೀಷ್ಅಧಿಕಾರಿಗಳು ಸಂಪ್ರೀತರಾಗುತ್ತಾರೆ ಈ ರೀತಿ ಅಧಿಕಾರಿಗಳನ್ನು ಒಲೈಸಿ ಊರ ಪ್ರಮುಖರು ಒಂದು ಮನವಿ ನೀಡುತ್ತಾರೆ ಅದೇನೆಂದರೆ ತಮ್ಮ ಊರಿಗೆ ಯಾವುದೇ ಕಾರಣಕ್...