Skip to main content

Posts

Showing posts with the label History of Bhimeshwara temple of Sagar taluk

2065. ಸಾಗರ ತಾಲೂಕಿನ ಬೀಮೇಶ್ವರದ ಇತಿಹಾಸ ನೋಡಿ

#ಶಿವಮೊಗ್ಗ_ಜಿಲ್ಲೆ_ಮತ್ತು_ಭಟ್ಕಳ_ಅಂಚಿನ_ದಟ್ಟ_ಅರಣ್ಯದ_ಕಲ್ಲು_ಬೆಟ್ಟದ_ಮೇಲಿನ #ಬೀಮೇಶ್ವರ_ದೇವಸ್ಥಾನದ_ಇತಿಹಾಸ_ನಮಗೆ_ಗೊತ್ತಿಲ್ಲ #ನಾಗವಳ್ಳಿಯ_ದೇವಗಾರು_ಎಂಬ_ಹಳ್ಳಿಗೆ_1998ರಲ್ಲಿ_ಹೋಗುವಾಗ #ಕೋಗಾರಿನಲ್ಲಿ_ಬಂಡುಮನೆ_ಚಿದಂಬರ_ರಾಯರು_ಬೀಮೇಶ್ವರ_ಜಾತ್ರೆ_ಆಹ್ವಾನ_ಪತ್ರಿಕೆ_ನೀಡಿದ್ದರು #ಶಿವರಾತ್ರಿ_ಜಾತ್ರೆಗೆ_ಕೆಲವು_ದಿನದ_ಮೊದಲೇ_ಈ_ಮಾಗ೯ರಲ್ಲಿದ್ದರಿಂದ_ಮರುದಿನ #ಬೀಮೇಶ್ವರ_ದರ್ಶನ_ಮಾಡಿ_ತುಮರಿಗೆ_ಹೋಗುವುದೆಂದು_ತೀರ್ಮಾನಿಸಿದ್ದೆ. https://youtu.be/UG0WD0492Tw?feature=shared    ಈ ಮಾರ್ಗದಲ್ಲಿ 1985 ರಿಂದ ಸಂಚರಿಸುತ್ತಿದ್ದರೂ ಬೀಮೇಶ್ವರ ದೇವಾಲಯದ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಇದ್ದರೂ 1998ರವರೆಗೆ ಅಲ್ಲಿಗೆ ನಾನು ಹೋಗಿರಲಿಲ್ಲ ಕಾರಣ ದಟ್ಟ ಅರಣ್ಯ ವಿಪರೀತ ಮಳೆ ಮತ್ತು ರಸ್ತೆ ಸರಿ ಇಲ್ಲ ಎಂಬ ಕಾರಣ ಹಾಗೂ ಸಮಯ.    1998ರಲ್ಲಿ ಸಾಗರ ತಾಲೂಕಿನ ಕೊನೆಯ ಊರಾದ ನಾಗವಳ್ಳಿಗೆ ಹೋಗಿ ಅಲ್ಲಿಂದ ಬಲಕ್ಕೆ ತಿರುಗಿ ದೇವಗಾರು ಎಂಬ ಹಳ್ಳಿಗೆ ಹೋಗುವ ಮಾರ್ಗದಲ್ಲಿ ಕೋಗಾರು ವೃತ್ತದಲ್ಲಿ ಬೀಮೇಶ್ವರ ದೇವಾಲಯದ ದರ್ಮದರ್ಶಿಗಳಾದ ಬಂಡು ಮನೆ ಚಿದಂಬರ ರಾಯರು ಮತ್ತು ಸಮಿತಿಯವರ ಭೇಟಿ ಆಗಿತ್ತು.   ಅವರು ಆ ವರ್ಷದ ಶಿವರಾತ್ರಿಯಂದು ಭೀಮೇಶ್ವರ ಜಾತ್ರೆಯ ಆಹ್ವಾನ ಪತ್ರಿಕೆ ನೀಡಿದ್ದರು ಬಹುಶಃ ಅದು ಜಾತ್ರೆ ಪ್ರಾರಂಬಿಸಿದ ಮೊದಲ ವರ್ಷವೊ ಏನೊ ಮರೆತಿದ್ದೇನೆ ಅವರು ಅಲ್ಲಿಗೆ ರಸ್ತೆ ಸರಿ ಮಾಡಿಸಿದ ವಿಚ...