#ಚಂದ್ರನ_ಮೇಲೆ_ಮಾನವ_ಇಳಿದ_ಕ್ಷಣಗಳ #ಚಂದ್ರಯಾನದ_ರೇಡಿಯೋ_ವೀಕ್ಷಕ_ವಿವರಣೆ_ಕೇಳಿದ_ನೆನಪು. #ಬಿದನೂರು_ನಗರದ_ದೇವಗಂಗೆಯ_ದೊಡ್ಡಮ್ಮನ_ಮನೆಯಲ್ಲಿ. #ಅವಾಗ_ಮಾನವ_ಚಂದ್ರನ_ಮೇಲೆ_ಇಳಿದ_ಸುದ್ದಿ_ನಂಬಲಾರದ_ದಿನಗಳು. #ಚಂದ್ರನ_ಮೇಲೆ_ಅಮೇರಿಕಾ_ದ್ವಜ_ಸ್ಪಷ್ಟವಾಗಿ_ಕಾಣುವಂತೆ_ಪೋಟೋ_ಎಡಿಟ್_ಮಾಡಿದ್ದರು. #Neelarmstrong #Moon #BBC #Aldrin #Appolo11 #NASA ಮೊನ್ನೆ ಪೂರ್ಣ ಚಂದ್ರಗ್ರಹಣ ಸಂಭವಿಸಿದಾಗ ಚಂದ್ರನನ್ನು ದಿಟ್ಟಿಸಿ ನೋಡುವಾಗ ನೆನಪಾಗಿದ್ದು... ಚಂದ್ರಲೋಕಕ್ಕೆ ಮೊದಲ ಮಾನವ ಹೆಜ್ಜೆ ಊರಿದ ಕ್ಷಣಗಳನ್ನ ಬಿಬಿಸಿ ರೇಡಿಯೋ ಕಾಮೆಂಟರಿ ನನ್ನ ಬಾಲ್ಯದಲ್ಲಿ ಕೇಳಿದ್ದು. #ಅವತ್ತು_20_ಜುಲೈ_1969 ಭಾರತೀಯ ಕಾಲಮಾನ ರಾತ್ರಿ 1.47 ಕ್ಕೆ ನೀಲ್ ಆಮ್೯ ಸ್ಟ್ರಾ೦ಗ್ ಚಂದ್ರನ ಮೇಲೆ ಮೊದಲ ಹೆಜ್ಜೆ ಊರಿದ ಮೊದಲ ಮಾನವ. ಇವರನ್ನ ಚಂದ್ರಲೋಕಕ್ಕೆ ಕರೆದೊಯ್ದ ಅಂತರಿಕ್ಷ ನೌಕೆ ಅಪೋಲೋ 11 ಆದರೆ ಅವತ್ತು ನನ್ನ ವಯಸ್ಸು 4 ವಷ೯ 5 ತಿಂಗಳು 14 ದಿನ ನನಗೆ ಇದೆಲ್ಲ ಮಾಹಿತಿ ಅವತ್ತು ಇರಲಿಲ್ಲ. ಬಿದನೂರು ನಗರದ ದೇವಗಂಗೆ ನನ್ನ ತಾಯಿ ತವರೂರೂ, ನನ್ನ ದೊಡ್ಡಮ್ಮನ ಮನೆ. ಅವತ್ತು ನಾವೆಲ್ಲ ನಮ್ಮ ತಾಯಿಯೊ೦ದಿಗೆ ಅಲ್ಲಿದ್ದೆವು, ಈ ಮೊದಲ ಮಾನವ ಚಂದ್ರಯಾನದ ಬಗ್ಗೆ ತಿಳಿಯಲೆಂದೆ ನಮ್ಮಣ್ಣ ನಾಗರಾಜ್ ನಮ್ಮ ಆನಂದಪುರದ ಯಡೇಹಳ್ಳಿಯ ಮನೆಯಿಂದ ರೇಡಿಯೋ ತಂದಿದ್ದ....