Skip to main content

3470. ಚಂದ್ರನ ಮೇಲೆ ಇಳಿದ ಮೊದಲ ಮಾನವ

#ಚಂದ್ರನ_ಮೇಲೆ_ಮಾನವ_ಇಳಿದ_ಕ್ಷಣಗಳ

#ಚಂದ್ರಯಾನದ_ರೇಡಿಯೋ_ವೀಕ್ಷಕ_ವಿವರಣೆ_ಕೇಳಿದ_ನೆನಪು.

#ಬಿದನೂರು_ನಗರದ_ದೇವಗಂಗೆಯ_ದೊಡ್ಡಮ್ಮನ_ಮನೆಯಲ್ಲಿ.

#ಅವಾಗ_ಮಾನವ_ಚಂದ್ರನ_ಮೇಲೆ_ಇಳಿದ_ಸುದ್ದಿ_ನಂಬಲಾರದ_ದಿನಗಳು.

#ಚಂದ್ರನ_ಮೇಲೆ_ಅಮೇರಿಕಾ_ದ್ವಜ_ಸ್ಪಷ್ಟವಾಗಿ_ಕಾಣುವಂತೆ_ಪೋಟೋ_ಎಡಿಟ್_ಮಾಡಿದ್ದರು.


#Neelarmstrong #Moon #BBC #Aldrin #Appolo11 #NASA 

    ಮೊನ್ನೆ ಪೂರ್ಣ ಚಂದ್ರಗ್ರಹಣ ಸಂಭವಿಸಿದಾಗ ಚಂದ್ರನನ್ನು ದಿಟ್ಟಿಸಿ ನೋಡುವಾಗ ನೆನಪಾಗಿದ್ದು... ಚಂದ್ರಲೋಕಕ್ಕೆ ಮೊದಲ ಮಾನವ ಹೆಜ್ಜೆ ಊರಿದ ಕ್ಷಣಗಳನ್ನ ಬಿಬಿಸಿ ರೇಡಿಯೋ ಕಾಮೆಂಟರಿ ನನ್ನ ಬಾಲ್ಯದಲ್ಲಿ ಕೇಳಿದ್ದು.

 #ಅವತ್ತು_20_ಜುಲೈ_1969
  ಭಾರತೀಯ ಕಾಲಮಾನ ರಾತ್ರಿ 1.47 ಕ್ಕೆ ನೀಲ್ ಆಮ್೯ ಸ್ಟ್ರಾ೦ಗ್ ಚಂದ್ರನ ಮೇಲೆ ಮೊದಲ ಹೆಜ್ಜೆ ಊರಿದ ಮೊದಲ ಮಾನವ.

    ಇವರನ್ನ ಚಂದ್ರಲೋಕಕ್ಕೆ ಕರೆದೊಯ್ದ ಅಂತರಿಕ್ಷ ನೌಕೆ ಅಪೋಲೋ 11 ಆದರೆ ಅವತ್ತು ನನ್ನ ವಯಸ್ಸು 4  ವಷ೯ 5 ತಿಂಗಳು 14 ದಿನ ನನಗೆ ಇದೆಲ್ಲ ಮಾಹಿತಿ ಅವತ್ತು ಇರಲಿಲ್ಲ.

  ಬಿದನೂರು ನಗರದ ದೇವಗಂಗೆ ನನ್ನ ತಾಯಿ ತವರೂರೂ, ನನ್ನ ದೊಡ್ಡಮ್ಮನ ಮನೆ. 

   ಅವತ್ತು ನಾವೆಲ್ಲ ನಮ್ಮ ತಾಯಿಯೊ೦ದಿಗೆ ಅಲ್ಲಿದ್ದೆವು, ಈ ಮೊದಲ ಮಾನವ ಚಂದ್ರಯಾನದ ಬಗ್ಗೆ ತಿಳಿಯಲೆಂದೆ ನಮ್ಮಣ್ಣ ನಾಗರಾಜ್ ನಮ್ಮ ಆನಂದಪುರದ ಯಡೇಹಳ್ಳಿಯ ಮನೆಯಿಂದ ರೇಡಿಯೋ ತಂದಿದ್ದ.

  ದೇವಗಂಗೆಯ ದೊಡ್ಡಮ್ಮನ ಮನೆಯ ಎತ್ತರದ ಕಟಾ೦ಜನದಲ್ಲಿ ( ವಿದ್ಯುತ್ ಸಂಪಕ೯ ಇಲ್ಲದ ಆ ದಿನಗಳಲ್ಲಿ) ನಡು ರಾತ್ರಿ ನಮಗೆ ಅಥ೯ ಆಗದ ಇಂಗ್ಲೀಷ್ ಭಾಷೆಯ BBC ವೀಕ್ಷಕ ವಿವರಣೆ ಕೇಳುತ್ತಾ ನಮ್ಮಣ್ಣ ವಿಜಯೋತ್ಸವದ ಕೇಕೆ ಹಾಕಿ ನಮಗೆಲ್ಲ ಚಂದ್ರನ ಮೇಲೆ ಮನುಷ್ಯ ಇಳಿದ ಅಂದಾಗ ನಂಬಲು ಸಾಧ್ಯವೇ ಆಗಲಿಲ್ಲ.

    ಸ್ವಲ್ಪ ಹೊತ್ತಲ್ಲಿ ಬಿದನೂರು ನಗರ ಅಂದರೆ ಅಲ್ಲಿನ ಪೇಟೆಗೆ ಹೋಗಿದ್ದ #ದೇವಗಂಗೆಯ_ಯುವ_ಪಡೆ ಮಾರ್ಗ ಮಧ್ಯೆನಮ್ಮ ದೊಡ್ಡಣ್ಣ ಮಂಜುನಾಥಣ್ಣನ ಮನೆಗೆ ತಲುಪಿಸಿ ಹೋಗಲು ಬಂದಿತ್ತು.

 ಅವರಲ್ಲಿ ದೇವಗಂಗೆಯ #ಪಕೀರಣ್ಣ, #ಜಗ್ಗಣ್ಣ ಮತ್ತು #ಚಂದ್ರಶೆಟ್ಟರ ನೆನಪಿದೆ, ಅವರೆಲ್ಲ ಆಗಿನ ದೇವಗಂಗೆಯ ಯುವ ಪಡೆ ಅವರಿಗೆ ನಾವೆಲ್ಲ ಸರಿ ರಾತ್ರಿಯಲ್ಲೂ ಮಲಗದೆ ರೇಡಿಯೋ ಆಲಿಸುವುದು ನೋಡಿ ಅಚ್ಚರಿ ಆಯಿತು.

 ನಮ್ಮಣ್ಣ ಅವರಿಗೆ ಚಂದ್ರನ ಮೇಲೆ #ನೀಲ್_ಆರ್ಮಸ್ಟ್ರಾ೦ಗ್ ಇಳಿದ ಸುದ್ದಿ ಹೇಳಿದಾಗ ನನಗೆ ಇವತ್ತೂ ನೆನಪಿದೆ, ಆ ಯುವ ಪಡೆ ಇದನ್ನ ನಂಬಲೇ ಇಲ್ಲ.

  "ಇದೆಲ್ಲಾ ಸುಳ್ಳು..... ಚಂದ್ರಲೋಕ ಅಂದರೆ ದೇವರ ಲೋಕ...ಅಲ್ಲಿ ಮನುಷ್ಯ ಹೋಗಲು ಸಾಧ್ಯವೇ ಇಲ್ಲ..  ಅಂತ ಅವರೆಲ್ಲ ವಾದಿಸಿದ್ದು!?...

    ಆ ಕಾಲದಲ್ಲಿ ನಮ್ಮಲ್ಲಿ ಮಾತ್ರ ಅಲ್ಲ ಇಡೀ ವಿಶ್ವದಲ್ಲೇ ಮನುಷ್ಯ ಚಂದ್ರನಲ್ಲಿ ಇಳಿದದ್ದು ನಂಬದ ಕಾಲ ಅದು. 

    ಅವರೆಲ್ಲ ಅವರವರ ಮನೆಗೆ ಹೋದ ನಂತರ ಬೆಳಗಾದಾಗ 2ನೇ ವ್ಯಕ್ತಿ #ಆಲ್ಡ್ರೀನ್ ಚ೦ದ್ರನ ಮೇಲೆ ಇಳಿದರೆಂದು ನಮಗೆ ಬುದ್ಧಿ ಬಂದ ಮೇಲೆ ಎಷ್ಟೋ ವರ್ಷದ ನಂತರ ಗೊತ್ತಾಯಿತು.

     ಇವತ್ತಿಗೂ ಅನೇಕರು ಚಂದ್ರನ ಮೇಲೆ ಗಾಳಿ ಇಲ್ಲ ಅಮೇರಿಕಾ ಧ್ವಜ ಹೇಗೆ ಹಾರುತ್ತಿದೆ ಅದರಲ್ಲಿ ಎಂದು ಚಂದ್ರಯಾನದ ಬಗ್ಗೆ ನಾಸಾ ಸಂಸ್ಥೆಯನ್ನೇ ಪ್ರಶ್ನೆ ಮಾಡುವವರೂ ಇದ್ದಾರೆ!.

  ಧ್ವಜ ಹಾರುವುದಿಲ್ಲ ಅಲ್ಲಿ ನಿವಾ೯ತ ಪ್ರದೇಶ ಎಂದು ಪ್ರಾಥಮಿಕ ಜ್ಞಾನ ಇರುವ ವಿಜ್ನಾನಿಗಳು ಧ್ವಜ ಸ್ಪಷ್ಟವಾಗಿ ಕಾಣಲು ಬೇರೆ ಫೋಟೋ ವ್ಯವಸ್ಥೆ ಮಾಡಿದ್ದಾರೆಂದು ಹೇಳುತ್ತಾರೆ.

    ಮೊದಲ ಚಂದ್ರಯಾನ ಆಗಿ 56 ವರ್ಷಗಳು ಆದರೂ ಈ ಬಗ್ಗೆ ಚರ್ಚೆಗಳು ಗೂಗಲ್ ನಲ್ಲಿ ನೋಡ ಬಹುದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...