#ಶಿವಮೊಗ್ಗ_ಜಿಲ್ಲೆಯ_ಹಿರಿಯ_ಗೌರವಾನ್ವಿತರು
#ಕಡಿದಾಳು_ಶಾಮಣ್ಣ_ಮತ್ತು_ಪಿ_ಪುಟ್ಟಯ್ಯ
#ಮೊನ್ನೆ_ಕಡಿದಾಳುಶಾಮಣ್ಣರ_ಮನೆಗೆ_ಹೋಗಿ_ಅವರ_ಆರೋಗ್ಯ_ವಿಚಾರಿಸಿದ_ಪುಟ್ಟಯ್ಯನವರು
#ಈ_ನೆನಪಿನ_ಚಿತ್ರ_ಸೆರೆಹಿಡಿದು_ಕಳಿಸಿದ_ಮಿತ್ರರು_ಅಯನೂರು_ಬೆಲ್ಲದಪ್ರಕಾಶ್
#Kadidalshamanna #PPuttaia #Samajvadi #Shivamogga #Mysore #Tejaswi #kuvempu #Raithasanga
ಕಡಿದಾಳು ಶಾಮಣ್ಣ ಮತ್ತು ಪಿ.ಪುಟಯ್ಯ ಇವರಿಬ್ಬರೂ ಶಿವಮೊಗ್ಗ ಜಿಲ್ಲೆಯ ಹಿರಿಯ ಗೌರವಾನ್ವಿತರು.
ಇವರಿಬ್ಬರ ಈಗಿನ ವಯಸ್ಸು 86 ಅಥವ 87 ಇರಬೇಕು ಇತ್ತೀಚೆಗೆ ಕಡಿದಾಳು ಶಾಮಣ್ಣ ತುಂಬಾ ಬಳಲಿದಂತೆ ಕಾಣುತ್ತಾರೆ.
ಮೊನ್ನೆ ಇವರಿಬ್ಬರ ಸ್ಮರಣೀಯ ಭೇಟಿಯ ಪರಸ್ಪರ ಆರೋಗ್ಯ ವಿಚಾರಣೆಯ ಫೋಟೋ ಸೆರೆಹಿಡಿದು ಕಳಿಸಿದವರು ಶಿವಮೊಗ್ಗದ ಹಿರಿಯ ಮಿತ್ರರಾದ ಅಯನೂರು ಬೆಲ್ಲದ ಪ್ರಕಾಶ್.
ಇವರಿಬ್ಬರೂ ಸಮ ವಯಸ್ಕರು ಮೈಸೂರಿನಲ್ಲಿ ವ್ಯಾಸಂಗದಲ್ಲಿ ಜೊತೆಯಾದವರು ಶ್ಯಾಮಣ್ಣ ಮಹಾರಾಜ ಕಾಲೇಜಿನಲ್ಲಿ ಮತ್ತು ಪುಟ್ಟಯ್ಯ ಯುವರಾಜ ಕಾಲೇಜಿನಲ್ಲಿ.
ಸಮಾಜವಾದಿ ಯುವ ಜನ ಸಭಾ ಮತ್ತು ಕನ್ನಡ ಯುವಜನ ಸಭಾದ ಮೂಲಕ ರಾಜ್ಯದ್ಯಾದಂತ ಜನಜಾಗೃತಿ ಮಾಡಿದವರು.
ಇವರಿಬ್ಬರೂ ಪ್ರೊಪೆಸರ್ ನಂಜುಂಡ ಸ್ವಾಮಿ, ಅವರ ತಂದೆ ಮಹಾಂತರ ಮತ್ತು
ಅವರ ಗೆಳೆಯರಾದ ನಾಗರಾಜ್ ವಕೀಲರ ಹಾಗೂ ತೇಜಸ್ವಿ, ಕೆ.ವಿ.ಸುಬ್ಬಣ್ಣ, ಸ್ವಾಮಿ ರಾವ್, ಕೆ.ಹೆಚ್.ಶ್ರೀನಿವಾಸ್, ಕೋಣಂದೂರು ಲಿಂಗಪ್ಪ, ಕೋಣಂದೂರು ವೆಂಕಪ್ಪ ಗೌಡರ ಗೆಳೆಯರು.
ಆ ಕಾಲದ ಈ ತಂಡ ಕರ್ನಾಟಕ ರಾಜ್ಯಕ್ಕೆ ನೀಡಿದ ವೈಚಾರಿಕ ಕೊಡುಗೆ, ಜನಪರ ಹೋರಾಟ ಹಾಗೂ ಸಂಘಟನೆ ಸುವರ್ಣಾಕ್ಷರದಲ್ಲಿ ಬರೆದಿಡುವಂತದ್ದು.
80 ಮತ್ತು 90ರ ದಶಕದಲ್ಲಿ ಶಿವಮೊಗ್ಗದ ನೆಹರು ರಸ್ತೆಯ ಎರಡನೆ ತಿರುವಿನಲ್ಲಿದ್ದ ಪುಟ್ಟಯ್ಯನವರ #ಪ್ರಕೃತಿ_ಮುದ್ರಣಾಲಯ ಮತ್ತು ಅವರ ಉದಯವಾಣಿ ತರಂಗ ಪತ್ರಿಕೆ ಕಾರ್ಯಾಲಯ ಶಿವಮೊಗ್ಗ ಜಿಲ್ಲೆಯ ಅನುಭವ ಮಂಟಪ ಎಂದೇ ಹೆಸರಾಗಿತ್ತು.
ಅಲ್ಲಿ ಜಿಲ್ಲೆಯ ವಿಚಾರವಾದಿಗಳು, ಬರಹಗಾರರು, ಪತ್ರಕರ್ತರು, ಸಾಹಿತಿಗಳು, ಹೊರಟಗಾರರು ಮತ್ತು ಸಾಹಿತಿಗಳ ಸಂಗಮ ಆಗುತ್ತಿತು.
ಅಲ್ಲಿ ಆಗಾಗ್ಗೆ ದಿಡೀರನೆ ಗಡ್ಡದಾರಿ ಹಸಿರು ಶಾಲಿನ, ಜುಬ್ಬಾ ಪೈಜಾಮು ಮತ್ತು ಬಗಲು ಚೀಲದಾರಿ ಕಡಿದಾಳು ಶಾಮಣ್ಣ ಹಾಜರಾಗಿ ಹಾಗೇ ಮಾಯ ಆಗುತ್ತಿದ್ದರು.
1995- 2000 ಇಸವಿಯ ಅವಿಬಿಜಿತ ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ #ರೈತ_ಸಂಘದಿಂದ_ಸಿದ್ಧಪ್ಪ ಎಂಬ ಸಜ್ಜನರು ಮಿತಭಾಷಿಗಳು ನಮ್ಮ ಜೊತೆ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು.
ಅವರ ಮುಖಾಂತರ ಕಡಿದಾಳು ಶಾಮಣ್ಣ ಅವರ ಕ್ಷೇತ್ರದ ಒಂದು ಸಮಸ್ಯೆ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಾತಾಡಲು ಹೇಳಿದ್ದರಂತೆ ಆದರೆ ಆ ಸಬ್ಜೆಕ್ಟ್ ಸಿದ್ದಪ್ಪರಿಗೆ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಂಡಿಸಲು ಸಾಧ್ಯವಾಗದ ಬಗ್ಗೆ ಕಡಿದಾಳು ಶ್ಯಾಮಣ್ಣ ಬೆಂಕಿ ಆಗಿದ್ದರು.
ಪುಟ್ಟಯ್ಯನವರು ಶಾಮಣ್ಣರಿಗೆ ನನ್ನ ಬಗ್ಗೆ ತಿಳಿಸಿ ಹೇಳಿದ್ದರಿಂದ ಕಡಿದಾಳು ಶಾಮಣ್ಣ ವಿವರಗಳನ್ನು ನನಗೆ ನೀಡಿದ್ದರು.
ನಾನು ಕಡಿದಾಳು ಶಾಮಣ್ಣರನ್ನ ಜಿಲ್ಲಾ ಪಂಚಾಯತ್ ಸಭೆಯ ಗ್ಯಾಲರಿಯಲ್ಲಿ ಕೂರಿಸಿ ಅವರ ಊರಿನ ಸಮಸ್ಯೆ ಸಭೆಯಲ್ಲಿ ವಿವರಿಸಿ ಪರಿಹರಿಸಿದ್ದು ಕಡಿದಾಳು ಶಾಮಣ್ಣರಿಗೆ ಸಂತೋಷ ತರಿಸಿತ್ತು ಈ ಮೂಲಕ ಕಡಿದಾಳು ಶಾಮಣ್ಣ ನನಗೆ ಆಪ್ತರಾದರು.
ನಮ್ಮೂರ ಮಾರ್ಗದಲ್ಲಿ ಯಾವಾಗಾದರೂ ಸಂಚರಿಸುವಾಗ ಅವರು ನನ್ನ ಮನೆಗೆ ಬರುತ್ತಿದ್ದರು, ನಮ್ಮ ಊರಲ್ಲಿ ಸಾಹಿತಿ ನಾ. ಡಿಸೋಜ ಬಯಲು ರಂಗಮಂದಿರ ಉದ್ಘಾಟನೆ ಕಡಿದಾಳು ಶಾಮಣ್ಣರಿಂದ ಮಾಡಿಸಿದ್ದೆ.
ಕಾಗೋಡಿನಿಂದ - ಕಡಿದಾಳಿಗೆ ಕಾಗೋಡು ಹೋರಾಟದ ಸುವರ್ಣ ಜ್ಯೋತಿ ಒಯ್ದಾಗ ತೀರ್ಥಹಳ್ಳಿಯಿಂದ ಕಡಿದಾಳು ಮಂಜಪ್ಪರ ಸಮಾದಿ ತನಕ ಕಡಿದಾಳು ಶಾಮಣ್ಣ ಜಾಥಾದ ಜೊತೆಯಾಗಿದ್ದರು.
ಅವತ್ತು ನಮ್ಮ #ಕಾಗೋಡು_ಸುವರ್ಣ_ಜ್ಯೋತಿ ಕಡಿದಾಳು ಮಂಜಪ್ಪರ ಸಮಾದಿ ಸ್ಥಳ ತಲುಪಿದ್ದಾಗ ಮಧ್ಯರಾತ್ರಿ ಆಗಿತ್ತು.
ಅಲ್ಲಿ ಕಡಿದಾಳು ಶಾಮಣ್ಣ ತಮ್ಮ ಮದುರ ಕಂಠದಲ್ಲಿ ಕುವೆಂಪು ಬರೆದ ಗೀತೆ ಹಾಡಿದ್ದರು ಆ ಸಂದರ್ಭ ಮತ್ತು ಸ್ಥಳದಲ್ಲಿ ಅವರು ಹಾಡಿದ ಹಾಡು ನಮಗೆಲ್ಲ ಅದ್ಬುತ ಅನುಭೂತಿ ನೀಡಿತ್ತು
"ಊರಲ್ಲಿ ದೇವಾಲಯಕ್ಕಿಂತ ಮೊದಲು ಊರ ಶೌಚಾಲಯ" ಎಂಬ ಅವರ ಜನಾಂದೋಲನ ನನಗೆ ಪ್ರೇರಣೆ ಆಗಿತ್ತು.
ಅದು ನನಗೆ ನಮ್ಮ ಊರ ಸಮೀಪದ ಆಚಾಪುರ ಎಂಬ ಊರಲ್ಲಿನ ಕೇರಿಯ ಎಲ್ಲಾ ಮನೆಗಳಿಗೆ 1996ರಲ್ಲಿ ಶೌಚಾಲಯ ನಿರ್ಮಾಣ ಮಾಡಲು ಕಾರಣ ಆಗಿತ್ತು.
Comments
Post a Comment