#ದೇಶದ_ಮೊದಲ_ರೈತ_ಹೋರಾಟ
#ಆಗಸ್ಟ್_23_1830ರಂದು
#ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲೂಕಿನ_ಆನಂದಪುರಂ_ಹೋಬಳಿಯ
#ತ್ಯಾಗರ್ತಿ_ಸಮೀಪದ_ಹೊಸಂತೆಯಲ್ಲಿ_ನಡೆದ_ಬೂದಿಬಸಪ್ಪನಾಯಕರ_ರೈತ_ಸಮಾವೇಶ.
#ಈ_ವರ್ಷಕ್ಕೆ_195ನೇ_ವರ್ಷ_ಆಚರಣೆ.
#Keladikings #Hosante #Tyagarthi #Anandapuram #Sagar #Shivamogga #Raithahorata #Budibasappa
23 ಆಗಸ್ಟ್ 1830ರಲ್ಲಿ ಮೈಸೂರು ಅರಸರ ಜನವಿರೋದಿ ಭೂಕಂದಾಯವಾಗಿದ್ದ ಸುಂಕದ ವಿರುದ್ದ ಆನಂದಪುರಂ ಹೋಬಳಿಯಲ್ಲಿ ನಡೆದ ಬೃಹತ್ ರೈತ ಸಮಾವೇಶಕ್ಕೆ 195ನೇ ವರ್ಷಾಚಾರಣೆ.
ಆನಂದಪುರಂ ಹೋಬಳಿಯ ಹೊಸಂತೆ ಊರಿನಲ್ಲಿ ಬೃಹತ್ ರೈತ ಸಮಾವೇಶವನ್ನು ಬೂದಿ ಬಸಪ್ಪ ನಾಯಕರು ಹಮ್ಮಿಕೊಳ್ಳುತ್ತಾರೆ.
ಈ ಐತಿಹಾಸಿಕ ರೈತ ಸಮಾವೇಶಕ್ಕೆ ಸಾವಿರಾರು ರೈತರುಗಳು ತಮ್ಮ ನೂರಾರು ಎತ್ತಿನಗಾಡಿಗಳಲ್ಲಿ ಬಂದು ಭಾಗವಹಿಸುತ್ತಾರೆ.
ದೂರ ದೂರದ ಊರಿನ ಪ್ರತಿನಿಧಿಗಳೂ ಸೇರುತ್ತಾರೆ.
#ಹೊಸಂತೆಯ ಈ ರೈತ ಹೋರಾಟದ ಸಮಾವೇಶದ ಕಿಚ್ಚು ದಿನದಿಂದ ದಿನಕ್ಕೆ ಬೃಹದಾಕಾರ ತಾಳಿ ಮೈಸೂರು ಮಹಾರಾಜರಾದ #ಮುಮ್ಮಡಿ_ಕೃಷ್ಣರಾಜ_ಒಡೆಯರ್ ತಮ್ಮ ರಾಜ್ಯ 4ನೇ ಆಂಗ್ಲೋ ಮೈಸೂರು ಯುದ್ದದಿಂದ ಪರೋಕ್ಷವಾಗಿ ಮೈಸೂರು ಆಡಳಿತ ನಡೆಸುತ್ತಿದ್ದ ಬ್ರಿಟೀಷರಿಗೆ ಬಿಟ್ಟುಕೊಡುವಂತಾಗುತ್ತದೆ (9 ಅಕ್ಟೋಬರ್ 1831) ಮುಂದಿನ 50 ವರ್ಷ ಮೈಸೂರು ಆಡಳಿತ ಬ್ರಿಟೀಶರದಾಗುತ್ತದೆ.
ಹೊಸಂತೆ ರೈತ ಸಮಾವೇಶದ ನಂತರ ಬಿದನೂರು ನಗರ ಪ್ರಾಂತ್ಯದ ರೈತರು ಎಲ್ಲಾ ಕಡೆಗೂ ಈ ಕರನಿರಾಕರಣೆಗಾಗಿ ಬೇವಿನ ಎಲೆಗಳನ್ನೇ ಆಹ್ವಾನ ಪತ್ರಿಕೆಯಂತೆ ಬಳಸುತ್ತಾ ಜನರನ್ನು ಕರನಿರಾಕರಣೆ ಆಹ್ವಾನಿಸುತ್ತಾರೆ.
ಇದರಿಂದ ಮೈಸೂರು ಅರಸರು ಆಡಳಿತದಲ್ಲಿ ವಿಫಲರಾಗುತ್ತಾರೆ ಈಸ್ಟ್ ಇಂಡಿಯಾ ಕಂಪನಿ ರಾಜರಿಗೆ ಈ ಸ್ಥಳಗಳಿಗೆ ಸ್ವತಃ ಹೋಗಿ ಬಗೆಹರಿಸಲು ಸೂಚಿಸುತ್ತಾರೆ.
ಬ್ರಿಟೀಷ್ ಅಧಿಕಾರಿಗಳು ಇದನ್ನೆಲ್ಲ ಮದ್ರಾಸ್ ಪ್ರಾವಿನ್ಸಿಗೆ ವರದಿ ಮಾಡುತ್ತಾ ತಟಸ್ಥರಾಗಿರುತ್ತಾರೆ.
ಈ ಕಾರಣದಿಂದ ಮೈಸೂರು ಒಡೆಯರ್ ಈ ಭಾಗದಲ್ಲಿ ಸಾಗುವಾಗ 7 ಡಿಸೆಂಬರ್ 1830ರಲ್ಲಿ ಹೊನ್ನಾಳಿಯಲ್ಲಿ ಬೂದಿ ಬಸಪ್ಪ ನಾಯಕರ ಪ್ರಚೋದಿತ ರೈತ ಸಮಾವೇಶ ಕುಟ್ಟಂನಲ್ಲಿ (ಕಟ್ಟ0) 20 ಸಾವಿರಕ್ಕೂ ಮಿಕ್ಕಿದ ರೈತರು ಸೇರಿರುತ್ತಾರೆ ಇದನ್ನು ಸಹಿಸದ ಮೈಸೂರು ಮಹಾರಾಜರು ಬಿದನೂರು ನಗರದ ಅವರ ಆಡಳಿತಾಧಿಕಾರಿ ಕಿಶನ್ ರಾವ್ ನೇತೃತ್ವದಲ್ಲಿ ರೈತ ಸಮಾವೇಶದ ಮೇಲೆ ದೊಡ್ಡ ನರಮೇದಕ್ಕೆ ಅವಕಾಶ ನೀಡಿದ್ದು ಇತಿಹಾಸದಲ್ಲಿ ಘನ ಘೋರ ಕಪ್ಪು ಚುಕ್ಕೆ.
ಆದರೆ ಈ ಘಟನೆ ನಂತರ 50 ವರ್ಷದ ನಂತರ ಪುನಃ ಮೈಸೂರು ಮಹಾರಾಜರೇ ಆಡಳಿತಕ್ಕೆ ಬಂದಿದ್ದರಿಂದ ಈ ಘಟನೆಗಳು ಇತಿಹಾಸದ ಪುಟದಲ್ಲಿ ಕತ್ತಲಲ್ಲಿ ಇಡಲಾಗಿದೆ.
ಈ ಚಳವಳಿ ನಿರತ ರೈತರ ಮೇಲೆ ನಿರಂತರ ಬಂದೂಕಿನ ಗೋಲಿ ಹಾರಿಸಿ ಚಳವಳಿಗಾರರನ್ನು ಕೊಂದ ನಂತರವೂ ಹೊನ್ನಾಳಿಯ ಮಾರಿಕೊಪ್ಪ ಹಳದಮ್ಮ ದೇವಾಲಯದಲ್ಲಿ ಅಡುಗಿದ್ದ ನೂರಾರು ರೈತ ಹೋರಾಟಗಾರನ್ನು ಹೊನ್ನಾಳಿ ಶಿಕಾರಿಪುರ ಮಾರ್ಗದ ಇಕ್ಕೆಲದಲ್ಲಿನ ಬೇವಿನ ಮರಕ್ಕೆ ನೇಣಿಗೆ ಹಾಕುತ್ತಾರೆ.
ಹೋರಾಟಕ್ಕೆ ರೈತರನ್ನು ಸೇರಿಸಲು ಬೇವಿನ ಎಲೆಯನ್ನೆ ಸಾಂಕೇತಿಕ ಆಹ್ವಾನ ಪತ್ರಿಕೆ ಮಾಡಿದ್ದಕ್ಕೆ ಪ್ರತಿಯಾಗಿ ರೈತ ಹೋರಾಟಗಾರರನ್ನ ಬೇವಿನ ಮರಕ್ಕೆ ನೇಣು ಹಾಕುತ್ತಾರೆ ಇದೆಂತಹ ಕ್ರೌರ್ಯ ಯೋಚಿಸಿ.
12 ಮಾರ್ಚ್ 1831 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸೈನ್ಯ ಹೊನ್ನಾಳಿ ವಶಪಡಿಸುಕೊಳ್ಳುತ್ತದೆ.
ನಂತರ ಅರಸೊತ್ತಿಗೆ 12 ಜೂನ್ 1831 ರಂದು ರೈತ ಹೋರಾಟಗಾರರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳುತ್ತದೆ, ಬೂದಿ ಬಸಪ್ಪ ನಾಯಕರು ಹೈದ್ರಾಬಾದ್ ಸಂಸ್ಥಾನದ ಕಡೆ ಪರಾರಿ ಆದರು ಎಂದು ಮತ್ತು ರಂಗಪ್ಪ ನಾಯಕರು ಮರಣ ಹೊಂದಿದರೆಂಬ ಸುದ್ದಿ ಹರಡುತ್ತದೆ.
ಈ ರೀತಿ ಕೆಳದಿ ರಾಜ್ಯ ಪುನಃ ವಶಪಡಿಸಿಕೊಳ್ಳುವ ಬೂದಿಬಸಪ್ಪನಾಯಕರ ಪ್ರಯತ್ನ ವಿಫಲವಾಗುತ್ತದೆ.
ಒಂದು ಅಂದಾಜಿನಂತೆ ಬಿದನೂರು ನಗರ ಪ್ರಾಂತ್ಯದ ರೈತ ಹೋರಾಟದಲ್ಲಿ ಜೀವಕಳೆದುಕೊಂಡವರ ಸಂಖ್ಯೆ ಕೆಲವು ಸಾವಿರವಾದರೂ ದಾಖಲೆಗಳಲ್ಲಿ ಇದು 700 ಅಂತ ದಾಖಲಾಗಿದೆ.
ಬೂದಿಬಸಪ್ಪನಾಯಕ ಬಿದನೂರು ನಗರ ರಾಜರೆಂದು ಘೋಷಿಸಲು ಕಾರಣ ಬೂದಿಬಸಪ್ಪನಾಯಕರು ಹೊನ್ನಾಳಿ ತಾಲ್ಲೂಕಿನ ಚಿನ್ನಿಕಟ್ಟೆಯ ಜಂಗಮ ಕನ್ಯೆ ಮತ್ತು ಕೆಳದಿಯ ಕೊನೆಯ ಅರಸ ಚೆನ್ನಬಸವನಾಯಕರ ಪ್ರೇಮ ವಿವಾಹದಿಂದ ಜನಿಸಿದ ರಾಜವಂಶಸ್ಥ ಆದರೆ ಬ್ರಿಟಿಷರ ವಿರುದ್ಧ ಮೈಸೂರು ಮಹಾರಾಜರ ವಿರುದ್ಧ ರೈತರನ್ನು ಹೋರಾಟಕ್ಕೆ ತಯಾರು ಮಾಡಿದ್ದ ಬೂದಿ ಬಸಪ್ಪರನ್ನು ದರೋಡೆಕೋರನೆಂದೆ ಅವರೆಲ್ಲ ದುರುದ್ದೇಶದಿಂದ ದಾಖಲಿಸುತ್ತಾರೆ.
ಇಲ್ಲಿ ಜನಪದದ ಸಾಕ್ಷಿಯೊಂದಿದೆ ಕೆಳದಿ ಅರಸರು ಶಿಕಾರಿಗಾಗಿ ಹೊನ್ನಾಳಿ ಸಮೀಪದ ಬಿದಿರಳ್ಳಿ ಕಣಿವೆಗೆ ಹೋಗುವಾಗ ಕುಂಸಿಯಲ್ಲಿ ತಂಗುತ್ತಿರುತ್ತಾರೆ ನಂತರ ಬಿದಿರಳ್ಳಿ ಕಣಿವೆಗೆ ಸಮೀಪದ ಚಿನ್ನಿಕಟ್ಟೆಯಲ್ಲಿ ವಾಡೆ ನಿರ್ಮಿಸಿ ತಂಗಲು ಪ್ರಾರಂಬಿಸುತ್ತಾರೆ.
ಆಗ ಅಲ್ಲಿನ ಸುಂದರ ಜಂಗಮ ಕನ್ಯೆಯಲ್ಲಿ ಪ್ರೇಮ ಉಂಟಾಗಿ ಚೆನ್ನಬಸವ ನಾಯಕರು ವಿವಾಹ ಆಗುತ್ತಾರೆ ಆಗ ಚೆನ್ನಬಸವ ನಾಯಕರು ಜಂಗಮ ಕನ್ಯೆಗೆ ನೀಡಿದ ರಾಜ ಮುದ್ರೆ ಉಂಗುರವೇ ಅವರ ಪುತ್ರ ಬೂದಿಬಸಪ್ಪ ನಾಯಕರಿಗೆ ತಾಯಿಯಿಂದ ಬಂದಿರುತ್ತದೆ.
ಇದು ಇತಿಹಾಸದ ಸತ್ಯಕಥೆ ನಮ್ಮ ದೇಶದ ಮೊದಲ ರೈತ ಹೋರಾಟ ನಡೆಸಿದ ಕೀರ್ತಿ ದಾಖಲೆ ಕೆಳದಿ ವಂಶದ ವೀರ ಬೂದಿಬಸಪ್ಪನಾಯಕರದ್ದು ಮತ್ತು ಈ ಮೊದಲ ರೈತ ಸಮಾವೇಶ ನಡೆದದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ತ್ಯಾಗರ್ತಿ ಸಮೀಪದ ಹೊಸಂತೆಯಲ್ಲಿ ಈ ಸಮಾವೇಶ ನಾಳೆ ಆಗಸ್ಟ್ 23ಕ್ಕೆ 195ನೇ ವರ್ಷಾಚಾರಣೆ.
Comments
Post a Comment