#ಜಯದೇವಪ್ಪ_ಜಿನಕೇರಿ
#ಐದನೇ_ವರ್ಷದ_ಸ್ಮರಣೆಯಲ್ಲಿ
#ನನ್ನ_ಇತಿಹಾಸದ_ಆಸಕ್ತಿಗೆ_ಪ್ರೇರಕರು.
#ಅವರ_ಒತ್ತಾಯ_ಮತ್ತು_ಮಾರ್ಗದರ್ಶನವೇ
#ನನಗೆ_ಆನಂದಪುರಂ_ಚಂಪಕಸರಸ್ಸು_ಮತ್ತು_ಹೊಸಗುಂದದ_ಬಗ್ಗೆ_ಆಸಕ್ತಿ_ತಾಳಲು_ಕಾರಣವಾಯಿತು.
#ಇದೇ_ಪ್ರೇರಣೆ_ಚಂಪಕರಾಣಿ_ಕಾದಂಬರಿ_ಬರೆಯಲು_ಚಂಪಕಸರಸ್ಸು_ಅಭಿವೃದ್ದಿ_ಕೆಲಸಕ್ಕೆ_ಮತ್ತು
#ಹೊಸಗುಂದದ_ಕಲ್ಲಿನಾಥೇಶ್ವರ_ದೇವಾಲಯಕ್ಕೆ_ಅಂಟಿಕೊಂಡು_ಬೆಳೆದ_ಬೃಹತ್_ಮರ_ತೆಗೆಯಲು_ಕಾರಣ_ಆಯಿತು.
#Historian #Hosagunda #Champakasarassu #Anandapuram #Jayadevappajinakeri
ಜಯದೇವಪ್ಪ ಜೈನಕೇರಿ (82) ಅವರು ಲೇಖಕ, ಇತಿಹಾಸ ಸಂಶೋಧಕರಾಗಿ ಚಾಪು ಮೂಡಿಸಿದ್ದರು.
ವೈಚಾರಿಕ ಪ್ರಬಂಧ ಮಂಡನೆ, ದೇಗುಲಗಳ ಕುರಿತು ಬರಹ, ಉಪನ್ಯಾಸ, ಶರಣರು ಮತ್ತು ಶರಣ ಸಾಹಿತ್ಯದ ಕುರಿತು ಬರಹಗಳು, ಕೃತಿ ಪ್ರಕಟಿಣೆಯಲ್ಲಿ ತೊಡಗಿಸಿಕೊಂಡಿದ್ದರು.
8- ಸೆಪ್ಟೆಂಬರ್-2020 ರಲ್ಲಿ ಇಹಲೋಕ ತ್ಯಜಿಸಿದರು ಇವರು ನನ್ನ ಜೀವನದಲ್ಲಿ ಬಹು ಮುಖ್ಯವಾಗಿ ಇತಿಹಾಸದ ಬಗ್ಗೆ ಆಸಕ್ತಿ ಮಾಡಲು ಕಾರಣರಾದವರು.
ಇವರನ್ನ ಬೇಟಿ ಮಾಡಬೇಕು ಅಂದುಕೊಂಡಿದ್ದು ಲಾಕ್ ಡೌನ್ ಕಾರಣದಿಂದ ಸಾಧ್ಯವಾಗಲಿಲ್ಲ.
1995-2000 ಇಸವಿ ಅವಧಿಯಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಇವರ ಒಡನಾಟ ಹೆಚ್ಚು.
ಕಾರಣ ಇವರು ಮತ್ತು ಇವರ ಜೊತೆ ಶಾಸ್ತ್ರೀಗಳು ನನಗೆ ಆನಂದಪುರದ ಇತಿಹಾಸದ ಬಗ್ಗೆ ಹೆಚ್ಚು ಮಾಹಿತಿ ನೀಡಿದವರು.
ಶ್ರೀ ನಿರಂಜನ ಮುರುಘ ರಾಜೇಂದ್ರ ಸ್ವಾಮಿಗಳು ಪ್ರಕಟಿಸಿದ ಕೆಳದಿ ಸಮಗ್ರ ಅಧ್ಯಯನ ಗ್ರಂಥ ಮತ್ತು ಆನಂದಪುರದ ಮುರುಘಾ ಮಠದಲ್ಲಿ ಸ್ಥಾಪಿಸಿರುವ ಕೆಳದಿ ವಸ್ತುಸಂಗ್ರಹಾಲಯಕ್ಕೆ ಇವರ ವಿಶೇಷ ಶ್ರಮವಿದೆ.
ಇವರು ನನಗೆ ವಹಿಸಿದ ಮಹತ್ವದ ಕೆಲಸ ಆನಂದಪುರ ಸಮೀಪದ ಹೊಸಗುಂದದ ಕಲ್ಲೇಶ್ವರ ದೇವಸ್ಥಾನಕ್ಕೆ ಅಂಟಿಕೊಂಡು ಆಕಾಶದೆತ್ತರಕ್ಕೆ ಬೆಳೆದ ನೀರೊಟ್ಟೆ ಮರ ತೆಗೆಸಿ ಈ ದೇವಸ್ಥಾನ ಉಳಿಸುವುದು.
ಇದನ್ನು 1998ರಲ್ಲಿ ಅವರ ಅಭಿಲಾಷೆಯ೦ತೆ ಎಲ್ಲರ ಸಹಕಾರದಲ್ಲಿ ನಾನು ನೇತೃತ್ವ ವಹಿಸಿ ಪೂರೈಸಿದ್ದೆ ಇದೊಂದು ದಾಖಲೆ ಕೆಲಸ ಅಂತ ಅವರು ನನಗೆ ಅನೇಕ ಬಾರಿ ಪ್ರಶಂಸಿದ್ದರು.
ಅವರ ಇನ್ನೊಂದು ಅಭಿಲಾಷೆ ಆನಂದಪುರಂನಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕ ರಾಣಿ ಚಂಪಕಳ ಸ್ಮರಣಾಥ೯ ನಿರ್ಮಿಸಿರುವ ಚಂಪಕ ಸರಸ್ಸು ಪ್ರವಾಸಿ ಕೇಂದ್ರವಾಗಿಸುವುದು.
2020ರ ಸೆಪ್ಟೆಂಬರ್ ನಲ್ಲಿ ಬಿಡುಗಡೆ ಆದ ನನ್ನ ಕಾದಂಬರಿ "ಬೆಸ್ತರ ರಾಣಿ ಚಂಪಕಾ" ಅವರಿಗೆ ತಲುಪಿಸುವ ಮೊದಲೇ ಅವರು ಇಹ ಲೋಕ ತ್ಯಜಿಸಿದ್ದರು.
Comments
Post a Comment