#ಅತ್ಯುತ್ತಮ_ಅಂಕಗಳೊಂದಿಗೆ_ಪದವಿ_ಶಿಕ್ಷಣ_ಪೂರೈಸಿದ
#ನಮ್ಮೂರ_ಕಿರಿಯ_ಪತ್ರಕರ್ತ_ಸಾಹಿತಿ
#ಅಮಿತ್_ದಾಸಕೊಪ್ಪ_ಇವರಿಗೆ_ಅಭಿನಂದನೆಗಳು
#Bachulararts #Amithdasakoppa #Writer #Reporter #Anandapuram
ಅಮಿತ್ ದಾಸಕೊಪ್ಪ ನಮ್ಮ ಊರಿನ ಕಿರಿಯ ಪತ್ರಕರ್ತ ಮತ್ತು ಸಾಹಿತಿ, ಈಗಾಗಲೇ ಇವರು ನೂರಕ್ಕೂ ಹೆಚ್ಚು ಕವನಗಳನ್ನ ಬರೆದಿದ್ದಾರೆ ಅನೇಕ ವೈಚಾರಿಕ ಲೇಖನ ಪ್ರಕಟಿಸಿದ್ದಾರೆ.
ಅನೇಕ ಪತ್ರಿಕೆಗಳಿಗೆ ಪ್ರಿಲ್ಯಾನ್ಸ್ ವರದಿಗಾರರಾಗಿದ್ದಾರೆ, ಇವರದೇ #Amith_Times ಎಂಬ ನ್ಯೂಸ್ ವೆಬ್ ಚಾನಲ್ ಇದೆ, ಜಿಲ್ಲಾ ಪತ್ರಿಕೆ #ಎಚ್ಚರಿಕೆ ದಿನಪತ್ರಿಕೆ ವರದಿಗಾರರಾಗಿದ್ದಾರೆ ಮತ್ತು #ಹಾಯ್_ಬೆಂಗಳೂರು ಪತ್ರಿಕೆ ವಿತರಕರಾಗಿದ್ದಾರೆ.
ಆಯ್ದ ಪುಸ್ತಕಗಳನ್ನ ಹುಡುಕಿ ಓದುತ್ತಾರೆ ನನ್ನ ಸಂಗ್ರಹದ ಪುಸ್ತಕ ಒಯ್ದು ಓದಿ ವಾಪಾಸು ಮಾಡಿ ಅದರ ತಿರಳು ಚರ್ಚಿಸುತ್ತಾರೆ ಇವರ ಈ ಹವ್ಯಾಸ ನನಗೆ ಇವರ ಬಗ್ಗೆ ವಿಶೇಷ ಅಭಿಮಾನಕ್ಕೆ ಕಾರಣ.
ಚಿಕ್ಕವನಿದ್ದಾಗಲೇ ತಂದೆ ಆತ್ಮಹತ್ಯೆ ನಂತರ ಕುಟುಂಬದ ಆರ್ಥಿಕ ಸಂಕಷ್ಟಗಳು - ಅವಮಾನಗಳು ಈ ಯುವಕನಿಗೆ ಪರಿಸ್ಥಿತಿ ಎದುರಿಸುವ ಛಲಗಾರಿಕೆ ನೀಡಿದೆ.
ತಮ್ಮ BA ವ್ಯಾಸಂಗದ ಜೊತೆ ಇದೆಲ್ಲ ಇವರ ಹವ್ಯಾಸ ಆಗಿತ್ತು, ಈ ಹವ್ಯಾಸಗಳು ಇವರ ಓದಿಗೆ ಯಾವುದೇ ಅಡೆ ತಡೆ ಆಗಲಿಲ್ಲ ಅನ್ನುವುದಕ್ಕೆ ಮೊನ್ನೆ ಇವರ ಬಿ.ಎ. ಪದವಿ ಅಂಕ ಪಟ್ಟಿ ಸಾಕ್ಷಿ ಆಗಿದೆ.
ಈಗ ಜರ್ನಲಿಸಂ ಮಾಸ್ಟರ್ ಡಿಗ್ರಿ ಮಾಡಲು ಮುಂದಾಗಿದ್ದಾರೆ ಮುಂದೆ ಇದೇ ಕ್ಷೇತ್ರದಲ್ಲಿ ಮುಂದುವರಿಯುವ ಗುರಿ ಇವರದ್ದು.
ಒಂದು ವಿಶೇಷ ಅಂದರೆ ಇವರು ಯಾವುದೇ ಗಾಡ್ ಫಾದರ್ ಇಲ್ಲದೆ ಈ ಸಾಧನೆ ಮಾಡಿದ್ದಾರೆ.
ಇವರ ಭವಿಷ್ಯ ಉಜ್ವಲ ಆಗಲಿ ದೇವರು ಇವರ ಕನಸು ನನಸು ಮಾಡಲಿ ಎಂದು ಹಾರೈಸುತ್ತೇನೆ.
ಅಮಿತ್ ಅವರ ನ್ಯೂಸ್ ಚಾನೆಲ್ ಲಿಂಕ್ ಕಾಮೆಂಟ್ ನಲ್ಲಿದೆ.
Comments
Post a Comment