#ರಾತ್ರಿ_ರಾಣಿ_ಹೂವು
#ಇದು_ಬಳ್ಳಿಯಲ್ಲಿ_ಅರಳುವ_ಹೂವು
#ನಮ್ಮ_ಮನೆಯಲ್ಲಿ_ಮಧ್ಯರಾತ್ರಿ_ಅರಳಿತ್ತು.
#ರಾತ್ರಿರಾಣಿ_ಬ್ರಹ್ಮಕಮಲ_ಬೇರೆ_ಬೇರೆ
#flowers #flowerlovers #nightqueen #brahmakamala #midnightmemories
ನಾನು ಈ ರಾತ್ರಿ ರಾಣಿ ಹೂವನ್ನು ಬ್ರಹ್ಮ ಕಮಲ ಎಂದೇ ಭಾವಿಸಿದ್ದೆ, ಕಳೆದ ವರ್ಷ ರಾತ್ರಿ ರಾಣಿ ನಮ್ಮ ಮನೆಯಲ್ಲಿ ಅರಳಿದಾಗ ಬ್ರಹ್ಮ ಕಮಲ ಅರಳಿದೆ ಎಂದು ಪೋಟೋ ಪೋಸ್ಟ್ ಮಾಡಿದ್ದೆ ಆದರೆ ಇದು ರಾತ್ರಿ ರಾಣಿ ಅಂತ ಪ್ರತಿಕ್ರಿಯೆಗಳನ್ನು ಗೆಳೆಯರು ಬರೆದಾಗಲೇ ಗೊತ್ತಾಗಿದ್ದು ಇದು ಬೇರೆ ಬೇರೆ ಅಂತ.
ಹಿಮಾಲಯ ಶ್ರೇಣಿಯಲ್ಲಿರುವ ಇದೇ ಹೂವಿನ ಹೋಲಿಕೆ ಇರುವ #ಬ್ರಹ್ಮಕಮಲ ಹೂವು ಗಿಡದಲ್ಲಿ ಅರಳುವ ಹೂವು.
ಈ ಪ್ರಭೇದ ಬಿನ್ನತೆ ಗೊತ್ತಿಲ್ಲದೆ ರಾತ್ರಿ ರಾಣಿ ಹೂವಿಗೆ ಬ್ರಹ್ಮಕಮಲ ಎಂತಲೂ ಕರೆಯುತ್ತಾರೆ.
ರಾತ್ರಿ ರಾಣಿ ಹೂವು ಮತ್ತು ಬ್ರಹ್ಮಕಮಲ ಹೂವಿನ ಬಟಾನಿಕಲ್ ನೇಮ್ ಬೇರೆ ಬೇರೆ ಇದೆ.
#ರಾತ್ರಿಯ_ರಾಣಿ ಹೂವು ವೈಜ್ಞಾನಿಕವಾಗಿ #ಸೆಲೆನಿಸೆರಿಯಸ್_ಗ್ರಾಂಡಿಫ್ಲೋರಸ್ ಎಂದು ಕರೆಯಲ್ಪಡುವ ರಾತ್ರಿಯಲ್ಲಿ ಅರಳುವ ಒಂದು ಹೂವು.
ಈ ಸುಂದರವಾದ ಕಳ್ಳಿ ಜಾತಿಯ ಮೂಲ ಉಷ್ಣವಲಯದ ಅಮೆರಿಕ ಮತ್ತು ಇದು ಅಪರೂಪದ ಮತ್ತು ವಿಲಕ್ಷಣ ಹೂವಾಗಿದೆ.
ರಾತ್ರಿ ರಾಣಿಯ ದೊಡ್ಡ ಬಿಳಿ ತುತ್ತೂರಿ ಆಕಾರದ ಹೂವುಗಳು ರಾತ್ರಿಯಲ್ಲಿ ಮಾತ್ರ ತೆರೆದುಕೊಳ್ಳುತ್ತವೆ, ಈ ಹೂವು ಅರಳಿದ ಇಡೀ ಪ್ರದೇಶದಲ್ಲಿ ಸಿಹಿ ಪರಿಮಳವನ್ನು ನೀಡುತ್ತವೆ.
ಅದರ ಸಂಕೀರ್ಣವಾದ ಜೋಡಣೆ ಮತ್ತು ಸೊಗಸಾದ ಪರಿಮಳದೊಂದಿಗೆ ಈ ಹೂವು ಬಹಳ ಅಪರೂಪದ ದೃಶ್ಯವಾಗಿದೆ ಏಕೆಂದರೆ ಇದು ವರ್ಷದ ಒಂದು ರಾತ್ರಿ ಮಾತ್ರ ಅರಳುತ್ತದೆ.
ವೈಜ್ಞಾನಿಕವಾಗಿ #ಸೌಸುರಿಯಾ_ಒಬುಲಾಟ ಎಂದು ಕರೆಯಲ್ಪಡುವ #ಬ್ರಹ್ಮ_ಕಮಲವು ಹಿಮಾಲಯದ ನಿಗೂಢ ಹೂವು.
ಸಾಮಾನ್ಯವಾಗಿ ಬ್ರಹ್ಮಕಮಲ್ ಎಂದು ಕರೆಯಲ್ಪಡುವ ಹೂಬಿಡುವ ಸಸ್ಯದ ಒಂದು ಜಾತಿಯಾಗಿದೆ ಇದು ಭಾರತ, ಭೂತಾನ್ , ನೇಪಾಳ , ಪಾಕಿಸ್ತಾನ ಮತ್ತು ನೈಋತ್ಯ ಚೀನಾದಲ್ಲಿ 3,700 ರಿಂದ 4,600 ಮೀಟರ್ ಎತ್ತರದಲ್ಲಿರುವ ಹಿಮಾಲಯದ ಆಲ್ಪೈನ್ ಹುಲ್ಲುಗಾವಲುಗಳಲ್ಲಿ ಬೆಳೆಯುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ರಾತ್ರಿ ರಾಣಿ ಹೂವಿಗೆ ಬ್ರಹ್ಮಕಮಲ ಎಂದು ಜನ ಕರೆಯುವುದು ನೋಡಿ
ನಕಲಿ ಬ್ರಹ್ಮಕಮಲ ಎಂದು ಅನೇಕರು ಬರೆದಿದ್ದಾರೆ ಆದರೆ ಪ್ರಕೃತಿಯಲ್ಲಿ ಅಸಲಿ ನಕಲಿ ಹೂವು ಇರಲು ಸಾಧ್ಯವಿಲ್ಲ ಸಾಧ್ಯವಾದರೆ #ಬಳ್ಳಿ_ಬ್ರಹ್ಮಕಮಲ ಎಂದು ಕರೆಯ ಬಹುದೇನೋ? ಯೋಚಿಸಿ.
ರಾತ್ರಿ ರಾಣಿ ಹೂವಿಗೆ ರಾತ್ರಿ ರಾಜಕುಮಾರಿ ಎಂಬ ಹೆಸರೂ ಇದೆ ಇದು ಅರಳಿದಾಗ ಸುತ್ತಲೂ ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಗಂದ ಸೂಸುತ್ತದೆ.
ಸೂರ್ಯೋದಯರಲ್ಲಿ ಸೂರ್ಯನ ರಶ್ಮಿಗೆ ಈ ರಾತ್ರಿ ರಾಣಿ ಹೂವು ಮುದುಡುವುದು ವಿಸ್ಮಯ.
ನಮ್ಮ ಮನೆಯಲ್ಲಿ ರಾತ್ರಿ ರಾಣಿ ಹೂವಿನ ಒಂದು ಗಿಡದಲ್ಲಿ ಏಕ ಕಾಲದಲ್ಲಿ ನಾಲ್ಕು ರಾತ್ರಿ ರಾಣಿ ಹೂವು ಅರಳಿದೆ ಒಂದ ವಿಶೇಷ ಅಂದರೆ ಇದರ ಎಲೆಯ ಅಂಚಿನಿಂದಲೇ ಹೂವಿನ ಮೊಗ್ಗು ಬಿಟ್ಟು ಅರಳುತ್ತದೆ.
Comments
Post a Comment