#ಕೆಫೆ_ಮಲ್ನಾಡ್_ಭವನ_ಪ್ರಾರಂಭವಾಗಿ_17_ತಿಂಗಳು
#ಶಿವಮೊಗ್ಗದ_ನೆಹರು_ರಸ್ತೆಯ_ಎರಡನೆ_ಕ್ರಾಸಲ್ಲಿ_ಪ್ರಸಿದ್ದಿ_ಪಡೆದಿದೆ
#ಇಪ್ಪತ್ತೆರೆಡು_ವರ್ಷ_M_H_ಕಾಫಿಶಾಪ್_ನಿರಂತರ_ನಡೆಸುತ್ತಿರುವ
#ಇದರ_ಮಾಲಿಕ_ಬಾಷಾರಿಗೆ_ರೆಸ್ಟೋರಾಂಟ್_ಮಾಡಬೇಕೆನ್ನುವುದು_ಜೀವಮಾನದ_ಕನಸು
#ಈಗ_ಅವರ_ಕನಸು_ನನಸಾಗಿದೆ
#ಒಮ್ಮೆ_ಬೇಟಿ_ನೀಡಿ.
#Cafemalnadbhavana #shivamogga #neharuroad #shivamoggarestoraunt #hotel #MHCafe #Basha
#besthotel
ಶಿವಮೊಗ್ಗದ ನೆಹರೂ ರಸ್ತೆಯ ಎರಡನೇ ಕ್ರಾಸಿನಲ್ಲಿ ಶೋಭಾ ಸ್ಟೋರ್ ಪಕ್ಕದ ಕಿರಿದಾದ ಓಣಿಯಲ್ಲಿದೆ MH ಕಾಫೀ ಶಾಪ್ ಇಲ್ಲಿನ ಉತ್ಕೃಷ್ಟ ಪಿಲ್ಟ್ ರ್ ಕಾಫೀ ಮತ್ತು ಟೀಗಾಗಿ ಜನ ಹುಡುಕಿಕೊಂಡು ಬರುತ್ತಾರೆ.
ಈಗ ಈ ಕಾಫಿ ಶಾಪ್ ಪಕ್ಕದಲ್ಲೇ #ಕೆಫೆ_ಮಲ್ನಾಡ್_ಭವನ ಪ್ರಾರಂಭ ಆಗಿ 17 ತಿಂಗಳಾಯಿತು ಈಗ ಯಶಸ್ವಿಯಾಗಿ ಶುಚಿ-ರುಚಿಯ ಆಹಾರದ ಉದ್ಯಮ ನಡೆಯುತ್ತಿದೆ.
ಇಷ್ಟು ಚಿಕ್ಕ ಜಾಗದಲ್ಲಿ ಅದೂ ಅತ್ಯಂತ ಸಣ್ಣ ಒಣಿ ಒಳಗೆ ಹೇಗೆ ಸಾಧ್ಯ ಅಂತ ಹೋಟೆಲ್ ಉದ್ಯಮ ನಡೆಸುವವರಿಗೆ ಅನ್ನಿಸದೇ ಇರಲಾರದು.
ಹೋಟೆಲ್ ಉದ್ಯಮದಲ್ಲಿ ಇರುವವರು ಇದನ್ನು ಪ್ರತ್ಯಕ್ಷ ನೋಡಿ ಬರಲೇ ಬೇಕು.
ಇಲ್ಲಿ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನದ ಊಟ ಲಭ್ಯವಿದೆ.
ಹಳೆಯ ಎಂ. ಹೆಚ್. ಕಾಫಿ ಶಾಪಿನ #ಭಾಷಾ ರವರೇ ಈ ಹೊಸ ಕೆಫೆ ಮಲ್ನಾಡ್ ಭವನದ ಮಾಲೀಕರು, ಅವರ 22 ವರ್ಷದ MH ಕಾಫಿ ಶಾಪ್ ಭಾಷಾ ಸ್ವತಃ ನಡೆಸುತ್ತಿದ್ದಾರೆ ಪಕ್ಕದ ಕೆಫೆ ಮಲ್ನಾಡ್ ಭವನ ಅವರ ಸಿಬ್ಬಂದಿಗಳು ನಡೆಸುತ್ತಾರೆ.
ಎಂ ಹೆಚ್ ಕಾಫಿ ಶಾಪ್ ಪಕ್ಕದಲ್ಲಿ ಮೊದಲು #ಜನ_ಹೋರಾಟ_ಪತ್ರಿಕೆ ಕಾರ್ಯಾಲಯ ಮತ್ತು ಅವರ ಪ್ರಿಂಟಿಂಗ್ ಪ್ರೆಸ್ ಇತ್ತು.
ಜನ ಹೋರಾಟ ದಿನ ಪತ್ರಿಕೆಯ ಕಚೇರಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿದ್ದರಿಂದ ಖಾಲಿ ಇದ್ದ ಆ ರೂಮಗಳನ್ನು ಕೆಫೆ ಮಲ್ನಾಡ್ ಭವನ ಆಗಿ ಬದಲಾಯಿಸಿದ್ದಾರೆ ಭಾಷಾ.
ಇಂತಹ ಒಂದು ರೆಸ್ಟೋರೆಂಟ್ ಮಾಡಬೇಕೆನ್ನುವುದು ಭಾಷಾರವರ ಕನಸು ಆ ಕನಸು ಈಡೇರಿದೆ.
ನೀವು ಶಿವಮೊಗ್ಗ ಹೋದರೆ ನೆಹರು ರೋಡ್ ಸೆಕೆಂಡ್ ಕ್ರಾಸ್ ತಿರುಗಿ ಅಲ್ಲಿ ಎಡ ಭಾಗದಲ್ಲಿ ಶೋಭಾ ಸ್ಟೋರ್ ಪಕ್ಕದ ಓಣಿಯಲ್ಲಿ ಹೋದರೆ ಅಲ್ಲಿದೆ ಕೆಫೆ ಮಲ್ನಾಡ್ ಭವನ ಅಲ್ಲೇ ಉತ್ಕೃಷ್ಟ ಚಹಾ ಕಾಫಿ ರುಚಿ ರುಚಿಯಾದ ಬಿಸಿಬಿಸಿಯಾದ ಉಪಹಾರ ಮತ್ತು ಮಧ್ಯಾಹ್ನದ ಊಟ ನಿತ್ಯ ಲಭ್ಯವಿದೆ ಅಲ್ಲಿ ಹಸನ್ಮುಖಿ ಕನಸುಗಾರ ಭಾಷಾ ಇರುತ್ತಾರೆ.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕನಸು ಕಾಣುತ್ತಾರೆ ಅದನ್ನು ನನಸಾಗಿಸಲು ನಿರಂತರ ತಪಸ್ಸಿನಂತೆ ಶ್ರಮಿಸಿದರೆ ಯಶಸ್ವಿ ಆಗುತ್ತಾರೆ ಅಂತಹ ಕನಸು ನನಸು ಮಾಡಿದ ಶ್ರಮಿಕ ಯುವಕ ಭಾಷಾ ಹೋಟೆಲ್ ಉದ್ಯಮದಲ್ಲಿರುವವರಿಗೆ ರೋಲ್ ಮಾಡೆಲ್ ಆಗಿದ್ದಾರೆ.
Comments
Post a Comment