#ಶಿವಮೊಗ್ಗ_ಜಿಲ್ಲೆಯಲ್ಲಿ_ಹೋಟೆಲಗಳಿಗೆ_ತಂದೂರಿ_ಒಲೆ_ತಯಾರಿಸಿ_ಕೊಡುವ_ಎಕ್ಸಪರ್ಟ್. #ಹಾರನಳ್ಳಿಯ_ತಿಪ್ಪೇಶಪ್ಪ_ಕುಂಬಾರರು. #ಕಳೆದ_ಹನ್ನೆರುಡು_ವಷ೯ದಿಂದ_ನಾವು_ಇವರ_ಗ್ರಾಹಕರು #ಸಂಪ್ರದಾಯಿಕ_ಕುಂಬಾರಿಕೆಯಿಂದ_ಆಧುನಿಕತೆಗೆ_ಬದಲಾದ_ಕುಂಬಾರಿಕೆ #ಒಂದು_ಕಾಲದಲ್ಲಿ_ಹಾರನಳ್ಳಿಯ_ಕುಂಬಾರರು_ತಯಾರಿಸುತ್ತಿದ್ದ_ಗುಡಾಣಗಳು_ಪ್ರಸಿದ್ದಿ_ಪಡೆದಿತ್ತು. ನಾನು ಹೋಟೆಲ್ ವೃತ್ತಿಗೆ ಬಂದ ನಂತರ ಹಾರನಳ್ಳಿಯ ತಿಪ್ಪೇಶಪ್ಪ ಕುಂಬಾರರ ತಂದೂರಿ ಭಟ್ಟಿಗೆ ಗಿರಾಕಿ ಆಗಿದ್ದೇನೆ, ಒಂದು ಕಾಲದಲ್ಲಿ ಈ ಹಾರನಳ್ಳಿಯ ಬೃಹತ್ ಗಾತ್ರದ ಮಣ್ಣಿನ ಗುಡಾಣಗಳ ತಯಾರಿಗೆ ಪ್ರಸಿದ್ಧಿ ಪಡೆದಿತ್ತು. ಇವರು ತಯಾರಿಸಿದ ಮಣ್ಣಿನ ದೊಡ್ಡ ದೊಡ್ಡ ಗುಡಾಣಗಳನ್ನು ಮುಸ್ಲಿಂ ವ್ಯಾಪಾರಿಗಳು ಎತ್ತಿನಗಾಡಿಯಲ್ಲಿ ಮಲೆನಾಡಿನ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದರು ಆಗ ಹಣದ ಚಲಾವಣೆ ಕಡಿಮೆ ರೈತರು ಬೆಳೆದ ಬತ್ತ - ರಾಗಿ- ಅಡಿಕೆಗೆ ಕೈ ಬದಲಾಗುತ್ತಿತ್ತು. ಈ ಗುಡಾಡಗಳಲ್ಲಿ ರೈತರು ಬೆಳೆದ ಕಾಳು ಕಡಿ ಸಂಗ್ರಹಿಸಿಟ್ಟರೆ ಅದು ಹಾಳಾಗುವುದಿಲ್ಲ. ಕಾಲ ಬದಲಾದಂತೆ ಎಲ್ಲವೂ ಬದಲಾಯಿತು ಸಂಪ್ರದಾಯಿಕ ಕುಂಬಾರಿಕೆಗೆ ಬೇಡಿಕೆ ಕಡಿಮೆ ಆಗಿದೆ. ಬಸವಣ್ಣರ ಕಾಲದಲ್ಲಿನ ಈ ಹಾರನಳ್ಳಿ ಕುಂಬಾರರು ಲಿಂಗಾಯಿತರು ಈಗ ತಮ್ಮ ಶತಮಾನಗಳ ವಂಶಪಾರಂಪರ್ಯವಾಗಿ ಬಂದ ಕು೦ಬಾರಿಕೆ ತೊರೆದಿದ್ದಾರೆ. ಕುಂಬಾರಿಕೆ ವೃತ್ತಿ ಆದುನಿಕ...