Skip to main content

Posts

Showing posts with the label TEEKAPPA MASTER WAS VERY GOOD TEACHER OF THIS EDUCATION MINISTER BADRINARAYAN IYENGAR STUDIED SCHOOL OF ANANDAPURAM

ಭಾಗ - 22, ವಿದ್ಯಾ ಮಂತ್ರಿಗಳಾಗಿದ್ದ ಬದರಿನಾರಾಯಣ ಅಯ್ಯ೦ಗಾರರು ಶಿಕ್ಷಣ ಪಡೆದ ಆನಂದಪುರಂನ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದ(125 ವರ್ಷದ ಹಿಂದೆ ನಿರ್ಮಾಣ ಆಗಿದ್ದ ಪ್ರಾಥಮಿಕ ಶಾಲೆ) ಶಿವಭಕ್ತ ಟೀಕಪ್ಪ ಮಾಸ್ತರ್ ಮತ್ತು ಈ ಶಾಲೆಗೆ ಸ್ಥಳ ದಾನ ನೀಡಿದ ಸ್ಕೂಲ್ ರಾಮಣ್ಣ ಕುಟುಂಬದ ನೆನಪು

#ಭಾಗ_22. #ವಿದ್ಯಾಮಂತ್ರಿ_ಬದರಿನಾರಾಯಣ_ಅಯ್ಯಂಗಾರ್_ವ್ಯಾಸಂಗ_ಮಾಡಿದ_ಆನಂದಪುರಂ_ಪ್ರಾಥಮಿಕ_ಶಾಲೆ. #ಇಲ್ಲಿ_ವ್ಯಾಸಂಗ_ಮಾಡಿದ_ಮಹನೀಯರಂತೆ_ಶಿಕ್ಷಕರೂ_ವಿಶೇಷ_ಉನ್ನತಿ_ಪಡೆದವರು. #ಸಾತ್ವಿಕರೂ_ದೈವಭಕ್ತರು_ಆಗಿದ್ದ_ಟೀಕಪ್ಪ_ಮಾಸ್ತರು. #ಈ_ಶಾಲೆಗೆ_ಜಾಗ_ದಾನ_ಮಾಡಿದ್ದ_ಸ್ಕೂಲ್‌ರಾಮಣ್ಣ_ಇವರ_ಪತ್ನಿ_ತಂದೆ.    ಟೀಕಪ್ಪ ಮಾಸ್ತರ್ ಅಂದರೆ ಆ ಕಾಲದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಆರಾಧ್ಯ ಗುರುಗಳಾಗಿದ್ದರು, ಯಾರಿಗೂ ಬಿರು ನುಡಿಯದ, ಹೊಡೆಯದ,ಬೇರಾವ ಶಿಕ್ಷೆ ನೀಡದೆ ತಮ್ಮ ಶಿಷ್ಯರನ್ನು ಪಳಗಿಸಿ ವಿದ್ಯೆ ಕಲಿಸುವ ಅಪರೂಪದ ಕಲೆ ಮತ್ತು ತಾಳ್ಮೆ ಇದ್ದಿದ್ದರಿಂದ ಇವರಿಂದ ಶಿಕ್ಷಣ ಕಲಿತವರಿಗೆಲ್ಲ ಇವರ ಮೇಲೆ ವಿಶೇಷ ಪ್ರೀತಿ ಮತ್ತು ಗೌರವ.    ಹೊಸನಗರ ತಾಲ್ಲೂಕಿನ ಬರುವೆ ಮೂಲದ ಇವರು ಶಿಕ್ಷಕರಾಗಿ ಹೊರ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿ ನಂತರ ಆನಂದಪುರಂ ನಲ್ಲಿನ ವಿದ್ಯಾಮಂತ್ರಿಗಳು ಓದಿದ ಈ ಪ್ರಾಥಮಿಕ ಶಾಲೆ ಮತ್ತು ದಾಸಕೊಪ್ಪದ ಪ್ರಾಥಮಿಕ ಶಾಲೆಯಲ್ಲೂ ಕಾರ್ಯನಿರ್ವಹಿಸಿದ್ದರು.   ಇವರ ವೇಷ ಭೂಷಣ ಕೂಡ ವಿಶೇಷವೇ ಶ್ವೇತಾ ಕಚ್ಚೆ ಪಂಜೆ ಮತ್ತು ಜುಬ್ಬಾ ಶಲ್ಯ ಮತ್ತು ಹಣೆಯ ಮೇಲೆ ವಿಭೂತಿ ಪಟ್ಟೆ, ಕುಂಕುಮ ಧರಿಸಿ ಶಿವಪೂಜೆ ನಂತರವೆ ಶಾಲೆ ಕಡೆಗೆ ಹೊರಡುತ್ತಿದ್ದರು.   ಬೆಸ್ತರ ಕುಟುಂಬದಲ್ಲಿ ಜನಿಸಿ, ನಂತರ ಶಿವದೀಕ್ಷೆ ಪಡೆದ ಇವರು ಶುದ್ಧ ಸಸ್ಯಹಾರಿಗಳು, ದೈವಭಕ್ತರು ಆಗಿದ್ದರ...