Blog number 1732. ಬೆಲಾರಸಿನ ಆ್ಯನಾ ಮತ್ತು ಪೆಡರ್ ದಂಪತಿಗಳು ಮತ್ತು ಅವರನ್ನು ಕರೆತಂದು ಪರಿಚಯಿಸಿದ ಶಿವ ಭಕ್ತ ನಿಕೋಲ್
https://youtu.be/PoaEyZLgbrA?feature=shared #ಬೆಲಾರಸಿನ_ಆ್ಯನಾ_ಮತ್ತು_ಪೆಡರ್_ದಂಪತಿಗಳು. #ಇಬ್ಬರೂ_ಅಮೆರಿಕಾದಲ್ಲಿ_ಐಟಿ_ಇಂಜಿನಿಯರ್ #ಆ್ಯನಾಗೆ_ಚರ್ಮದ_ಕ್ಯಾನ್ಸರ್_ಕಾಯಿಲೆ #ಇದು_ಗೊತ್ತಾದ_ಮೇಲೆ_ಆ್ಯನಾಳನ್ನು_ಮದುವೆ_ಆದ_ಪೆಡರ್. #ಇವರಿಬ್ಬರನ್ನು_ಪರಿಚಯಿಸಿದ_ನಿಕೋಲ_ಹಿಂದೂ_ದರ್ಮದ_ಶಿವನ_ಆರಾದಕ. 2017ರಲ್ಲಿ ನಮ್ಮ ಊರಿನಲ್ಲಿದ್ದ ಆಯುರ್ವೇದ ವೈದ್ಯರಾದ ನರಸೀಪುರ ಸಣ್ಣಯ್ಯ ಹೆಗ್ಗಡೆಯವರಿಂದ ಚಿಕಿತ್ಸೆ ಪಡೆಯಲು ಯೂರೋಪಿನ ಬೆಲಾರಸ್ ದೇಶದ ಈ ಮೂವರು ನನ್ನ ಸಹಾಯ ಕೇಳಿ ಬಂದಿದ್ದರು. ಇವರಿಬ್ಬರ ಗೆಳೆಯ ನಿಕೋಲ ಹಿಂದೂ ಧರ್ಮದ ಶಿವನ ಆರಾದಕ ಅನೇಕ ಬಾರಿ ಭಾರತ ಯಾತ್ರೆ ಮಾಡಿದ್ದರು ಹಿಮಾಲಯ ಇವರಿಗೆ ಬಾರೀ ಆಕರ್ಷಣೆ ಶಿವನ ಜಟೆ ಇವರು ಬಿಟ್ಟಿದ್ದರು. ಬೆಲಾರಸಿನ ಆಡಳಿತದ ಬಗ್ಗೆ, ರಷ್ಯಾ ದೇಶದ ಬಾರ್ಡರ್ ಇವರದ್ದು ಆದ್ದರಿಂದ ಇವರ ಭಾಷೆ ಬೆಲಾರಸ್ ರಷ್ಯಾ ಎಂಬ ಭಾಷೆ ಆದರೆ ಇವರೆಲ್ಲ ಅಮೇರಿಕಾದಲ್ಲಿ ಉದ್ಯೋಗ ಮಾಡುತ್ತಿದ್ದರಿಂದ ಇಂಗ್ಲೀಷ್ ಭಾಷೆ ಬಲ್ಲವರು. ಹೀಗಿರುವಾಗಲೇ ಆ್ಯನಾಗೆ ಚರ್ಮದ ಕ್ಯಾನ್ಸರ್ ಕಾಯಿಲೆ ಬಂದಿದ್ದು ಅಮೇರಿಕಾ ವೈದ್ಯರು ದೃಡೀಕರಿಸುತ್ತಾರೆ ಮತ್ತು ಅಪರೂಪದ ತೀವ್ರ ಸ್ವರೂಪದ ಕಾಯಿಲೆ ಅಂತಿಮ ಹಂತ ತಲುಪಿರುವುದರಿಂದ ಹೆಚ್ಚು ದಿನ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದರಿಂದ ಭಾರತೀಯ ಆಯುರ್ವೇದ ಔಷದಿ ಪಡೆಯಲು ಕೊನೆಯ ಆಸೆಯಿಂದ ಬಂದಿದ್ದರು. ಇದಕ್...