ಜನರಿಕ್_ಔಷದ_ಬಳಕೆ_ವಿಶ್ವದ_ಯಾವ_ಯಾವ_ದೇಶದಲ್ಲಿದೆ?..
ಜೆನೆರಿಕ್ ಔಷಧಗಳ ಬಳಕೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ವಿಶ್ವದ ಬಹುತೇಕ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದು ಅತ್ಯಂತ ವ್ಯಾಪಕವಾಗಿ ಜಾರಿಯಲ್ಲಿದೆ.
ಆರೋಗ್ಯ ವೆಚ್ಚವನ್ನು ಕಡಿಮೆ ಮಾಡಲು ಅನೇಕ ದೇಶಗಳ ಸರ್ಕಾರಗಳು ಜೆನೆರಿಕ್ ಔಷಧಗಳ ಬಳಕೆಯನ್ನು ಕಡ್ಡಾಯ ಅಥವಾ ಹೆಚ್ಚು ಪ್ರೋತ್ಸಾಹಿಸುತ್ತವೆ.
#ಅಮೆರಿಕ_ಸಂಯುಕ್ತ_ಸಂಸ್ಥಾನ (USA)...
ಜಗತ್ತಿನಲ್ಲೇ ಜೆನೆರಿಕ್ ಔಷಧಗಳನ್ನು ಅತಿ ಹೆಚ್ಚು ಬಳಸುವ ದೇಶಗಳಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ.
ಅಲ್ಲಿ ಮಾರಾಟವಾಗುವ ಒಟ್ಟು ಪ್ರಿಸ್ಕ್ರಿಪ್ಷನ್ ಔಷಧಗಳಲ್ಲಿ ಸುಮಾರು ಶೇ. 90 ರಷ್ಟು ಜೆನೆರಿಕ್ ರೂಪದಲ್ಲೇ ಇರುತ್ತವೆ.
ಅಲ್ಲಿನ ಎಫ್‌ಡಿಎ (US FDA) ಇದಕ್ಕೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಹೊಂದಿದೆ.
#ಯುನೈಟೆಡ್_ಕಿಂಗ್‌ಡಮ್ (UK)....
ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ (NHS) ಅಡಿಯಲ್ಲಿ ವೈದ್ಯರು ಬ್ರಾಂಡ್ ಹೆಸರಿನ ಬದಲು ಕಡ್ಡಾಯವಾಗಿ ರಾಸಾಯನಿಕ ಸೂತ್ರದ (Generic name) ಹೆಸರನ್ನೇ ಬರೆಯಬೇಕೆಂಬ ನಿಯಮವಿದೆ
ಇದರಿಂದಾಗಿ ಬ್ರಿಟನ್‌ನಲ್ಲಿ ಶೇ. 80 ಕ್ಕೂ ಹೆಚ್ಚು ಜೆನೆರಿಕ್ ಔಷಧಗಳು ಬಳಕೆಯಾಗುತ್ತವೆ.
#ಜರ್ಮನಿ_ಮತ್ತು_ಯೂರೋಪಿಯನ್_ಒಕ್ಕೂಟದ_ದೇಶಗಳು... ಜರ್ಮನಿ, ನೆದರ್ಲ್ಯಾಂಡ್ಸ್ ಮತ್ತು ಡೆನ್ಮಾರ್ಕ್‌ನಂತಹ ದೇಶಗಳಲ್ಲಿ ವಿಮಾ ಕಂಪನಿಗಳು ಮತ್ತು ಔಷಧಾಲಯಗಳಿಗೆ 'ಜೆನೆರಿಕ್ ಸಬ್ಸ್ಟಿಟ್ಯೂಷನ್' ನಿಯಮವಿದೆ ಅಂದರೆ ವೈದ್ಯರು ಬ್ರಾಂಡೆಡ್ ಬರೆದಿದ್ದರೂ ಫಾರ್ಮಸಿಗಳು ಅಗ್ಗದ ಜೆನೆರಿಕ್ ಔಷಧವನ್ನೇ ನೀಡುವುದು ಕಡ್ಡಾಯ.
#ಕೆನಡಾ_ಮತ್ತು_ಆಸ್ಟ್ರೇಲಿಯಾ..
ಆಸ್ಟ್ರೇಲಿಯಾದ 'ಫಾರ್ಮಾಸ್ಯುಟಿಕಲ್ ಬೆನಿಫಿಟ್ಸ್ ಸ್ಕೀಮ್' ಅಡಿಯಲ್ಲಿ ಜೆನೆರಿಕ್ ಔಷಧಗಳಿಗೆ ಹೆಚ್ಚಿನ ಸಬ್ಸಿಡಿ ನೀಡಲಾಗುತ್ತದೆ.
ರೋಗಿಯು ದುಬಾರಿ ಬ್ರಾಂಡೆಡ್ ಔಷಧವನ್ನೇ ಬಯಸಿದರೆ ಹೆಚ್ಚುವರಿ ವೆಚ್ಚವನ್ನು ಸ್ವತಃ ಭರಿಸಬೇಕಾಗುತ್ತದೆ.
#ಜಪಾನ್...
ಈ ಹಿಂದೆ ಜಪಾನ್‌ನಲ್ಲಿ ಬ್ರಾಂಡೆಡ್ ಔಷಧಗಳ ಮೇಲಿನ ಅವಲಂಬನೆ ಹೆಚ್ಚಿತ್ತು ಆದರೆ ಆರೋಗ್ಯ ಬಜೆಟ್ ಹೊರೆ ತಗ್ಗಿಸಲು ಸರ್ಕಾರ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಈಗ ಅಲ್ಲಿ ಜೆನೆರಿಕ್ ಬಳಕೆ ಶೇ. 75-80 ಕ್ಕೆ ತಲುಪಿದೆ.
#ಭಾರತ...
ಭಾರತವನ್ನು "ವಿಶ್ವದ ಔಷಧಾಲಯ" ಎಂದೇ ಕರೆಯಲಾಗುತ್ತದೆ, ಜಗತ್ತಿನ ನೂರಾರು ದೇಶಗಳಿಗೆ ಜೆನೆರಿಕ್ ಔಷಧಗಳನ್ನು ಭಾರತವೇ ರಫ್ತು ಮಾಡುತ್ತದೆ.
ದೇಶೀಯ ಮಾರುಕಟ್ಟೆಯಲ್ಲೂ ಜನೌಷಧಿ ಕೇಂದ್ರಗಳು ಹಾಗೂ ಸರ್ಕಾರಿ ನಿಯಮಗಳ ಮೂಲಕ ಜೆನೆರಿಕ್ ಬಳಕೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.
#generic #pharmasuitical #usa #japan #europe
#healthcare #worldfacts
Comments
Post a Comment