ತುಳು_ಪಾತೆರ್ಂಡ_ಮೈ_ಮನಸ್ಸ್_ತಂಪು"
ಪಾತೆರ_ಪಂಡ_ತುಳುವೆ,
ಕೊರ್ಪಿನ_ದಾನೊಡು_ದಾನಿ"
ತುಳು ಭಾಷೆಯ ಮಾಧುರ್ಯ ಹಾಗೂ ಆಪ್ತತೆಯನ್ನು ಬಣ್ಣಿಸುವ ಮಾತು ಗಾದೆಗಳು ಇದು.
ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಹೋದಾಗ "ನಿಮ್ಮದೇ ರಾಜ್ಯದಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಕೊಟ್ಟಿಲ್ಲ, ಮೊದಲು ನೀವು ಮಾನ್ಯತೆ ನೀಡಿ" ಎಂಬ ತಾಂತ್ರಿಕ ಪ್ರಶ್ನೆ ಮತ್ತು ಹಿನ್ನಡೆ ಎದುರಾಗುತ್ತಿತ್ತು.
#ಕನ್ನಡ_ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಪ್ರಸ್ತಾವನೆ ಮಾಡಿದ 58 ವರ್ಷದ ನಂತರ ದೊರೆಯಿತು.
23 ವರ್ಷದ ಹಿಂದೆ #ಕೊಡುವ ಮತ್ತು #ತುಳು ಭಾಷೆಗೆ ಸಲ್ಲಿಸಿದ ಪ್ರಸ್ತಾವನೆ ಕೇಂದ್ರ ಸರ್ಕಾರದಲ್ಲೇ ಹಾಗೇ ಉಳಿದಿದೆ.
ಈಗ #ಮಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯದ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ (ಹೆಚ್ಚುವರಿ) ಅಧಿಕೃತ ಆಡಳಿತ ಭಾಷೆಯನ್ನಾಗಿ ಮಾನ್ಯತೆ ನೀಡಲು ನಿರ್ಧರಿಸಿ ಪುನಃ ಕೇಂದ್ರ ಸರ್ಕಾರಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕೆ ಪ್ರಸ್ತಾವನೆ ಕಳಿಸಿದೆ.
ಸಂವಿಧಾನದ 345ನೇ ವಿಧಿಯಡಿ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರವನ್ನು ಬಳಸಿ, ತುಳು ಭಾಷಿಕರು ಹೆಚ್ಚಾಗಿರುವ ಅವಿಭಜಿತ ದಕ್ಷಿಣ ಕನ್ನಡ (ದಕ್ಷಿಣ ಕನ್ನಡ ಮತ್ತು ಉಡುಪಿ) ಜಿಲ್ಲೆಗಳಲ್ಲಿ ಅಧಿಕೃತ ಆಡಳಿತಾತ್ಮಕ ಕಾರ್ಯಗಳಿಗೆ ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯಾಗಿ ಬಳಸಲು ಅನುಮೋದನೆ ನೀಡಲಾಗಿದೆ.
ಇದೇ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ‘#ಮಂಗಳೂರು_ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೂ ಸಂಪುಟ ಸಮ್ಮತಿಸಿದ್ದು, ಈ ಕುರಿತು ಆಕ್ಷೇಪಣೆ/ಸಲಹೆಗಳನ್ನು ಆಹ್ವಾನಿಸಲು ಕರಡು ಅಧಿಸೂಚನೆ ಹೊರಡಿಸಲು ನಿರ್ಧರಿಸಲಾಗಿದೆ.
ತುಳು ಭಾಷೆಯನ್ನು ಸಂವಿಧಾನದ 8ನೇ ಅನುಸೂಚಿಗೆ ಸೇರಿಸಬೇಕೆಂಬ ಬೇಡಿಕೆಯನ್ನು ಒಂದೇ ಬಾರಿಯಲ್ಲ, ಹಲವು ಪ್ರಮುಖ ಹಂತಗಳಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಹಾಗೂ ಮನವಿಗಳ ರೂಪದಲ್ಲಿ ಈ ಹಿಂದೆ ಸಲ್ಲಿಸಲಾಗಿದೆ.
2003ರಲ್ಲಿ ಕೇಂದ್ರ ಸರ್ಕಾರ 92ನೇ ತಿದ್ದುಪಡಿಯ ಮೂಲಕ 4 ಭಾಷೆಗಳನ್ನು ಸೇರಿಸಿದಾಗ, ತುಳು ಮತ್ತು ಕೊಡವ ಭಾಷೆಗಳನ್ನು ಸೇರಿಸಲು ಕರ್ನಾಟಕ ಮತ್ತು ಕೇರಳದ ಸಂಸದರು, ಜನಪ್ರತಿನಿಧಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ಮೊದಲ ಬಾರಿಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದ್ದರು.
ಕೇಂದ್ರ ಸರ್ಕಾರವು ಇವುಗಳ ಪರಿಶೀಲನೆಗಾಗಿ ಮಹಾಪಾತ್ರ ಸಮಿತಿಯನ್ನು ರಚಿಸಿತ್ತು.
2009-2010 (ವಿಶ್ವ ತುಳು ಸಮ್ಮೇಳನ): 2009ರ ಡಿಸೆಂಬರ್‌ನಲ್ಲಿ ಧರ್ಮಸ್ಥಳ-ಉಜಿರೆಯಲ್ಲಿ ನಡೆದ ‘ಪ್ರಥಮ #ವಿಶ್ವ_ತುಳು_ಸಮ್ಮೇಳನ’ದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. #ಯಡಿಯೂರಪ್ಪ ಅವರು ತುಳು ಭಾಷೆಯ ಸಾಹಿತ್ಯಿಕ, ಸಾಂಸ್ಕೃತಿಕ ದಾಖಲೆಗಳನ್ನು ಒಟ್ಟುಗೂಡಿಸಿ ಕೇಂದ್ರ ಸರ್ಕಾರಕ್ಕೆ ಸಮಗ್ರ ಶಿಫಾರಸು ಕಳುಹಿಸುವುದಾಗಿ ಘೋಷಿಸಿ, 2010ರಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕೇಂದ್ರ ಗೃಹ ಸಚಿವಾಲಯಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದರು.
ಸಂಸತ್ತಿನಲ್ಲಿ ಕರಾವಳಿ ಭಾಗದ ಸಂಸದರಾದ #ಶೋಭಾ_ಕರಂದ್ಲಾಜೆ, #ನಳಿನ್_ಕುಮಾರ್_ಕಟೀಲ್ ಹಾಗೂ ಕಾಸರಗೋಡಿನ ಪಿ. #ಕರುಣಾಕರನ್ ನಿರಂತರವಾಗಿ ಈ ವಿಷಯವನ್ನು ಪ್ರಸ್ತಾಪಿಸಿದಾಗ, 2016ರಲ್ಲಿ ಕೇಂದ್ರ ಗೃಹ ಸಚಿವಾಲಯವು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತುಳು ಭಾಷೆ ಸೇರಿದಂತೆ 38 ಭಾಷೆಗಳ ಅಧಿಕೃತ ಶಿಫಾರಸುಗಳು ಸರ್ಕಾರದ ಪರಿಶೀಲನೆಯಲ್ಲಿವೆ ಎಂದು ದಾಖಲಿಸಿತು.
2021ರಲ್ಲಿ ಟ್ವಿಟರ್ (X) ಮೂಲಕ ದೇಶವ್ಯಾಪಿ ದೊಡ್ಡ ಮಟ್ಟದ #tuluin8thshedule’ ಆನ್‌ಲೈನ್ ಅಭಿಯಾನ ನಡೆಯಿತು.
ಇದರ ಬೆನ್ನಲ್ಲೇ ಕರ್ನಾಟಕದ ಎಲ್ಲಾ ಪಕ್ಷಗಳ (ಬಿಜೆಪಿ, ಕಾಂಗ್ರೆಸ್, ಜೆಡಿಎಸ್) ನಾಯಕರು ಜಂಟಿಯಾಗಿ ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಗೃಹ ಸಚಿವರಿಗೆ ಮತ್ತೊಮ್ಮೆ ಪತ್ರ ಮತ್ತು ಶಿಫಾರಸನ್ನು ರವಾನಿಸಿದರು.
ಕೇಂದ್ರ ಸರ್ಕಾರದ ಮಟ್ಟದಲ್ಲಿ ನಿರ್ದಿಷ್ಟ ಮಾನದಂಡಗಳನ್ನು ಇನ್ನೂ ಅಂತಿಮಗೊಳಿಸದ ಕಾರಣ (ಸೀತಾಕಾಂತ್ ಮಹಾಪಾತ್ರ ಸಮಿತಿಯ ವರದಿ ನಂತರವೂ ಸಾರ್ವತ್ರಿಕ ಮಾನದಂಡ ರೂಪಿಸಿಲ್ಲ), ಈ ಎಲ್ಲಾ ಶಿಫಾರಸುಗಳು ಕೇಂದ್ರ ಗೃಹ ಸಚಿವಾಲಯದ ಪರಿಶೀಲನಾ ಪಟ್ಟಿಯಲ್ಲೇ ಉಳಿದುಕೊಂಡಿವೆ.
ಹಿಂದೆ ಕೇವಲ ಮನವಿ ಮತ್ತು ಪತ್ರಗಳ ಮೂಲಕ ಶಿಫಾರಸು ಕಳುಹಿಸಲಾಗಿತ್ತು ಆದರೆ ಈ ಬಾರಿ ರಾಜ್ಯ ಸರ್ಕಾರವೇ ಮೊದಲು ಅಧಿಕೃತ ಸ್ಥಾನಮಾನ ನೀಡಿ ನಂತರ ಕೇಂದ್ರಕ್ಕೆ ಕಳುಹಿಸಿರುವುದು ಪ್ರಮುಖ ಬದಲಾವಣೆಯಾಗಿದೆ.
ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಹೋದಾಗ "ನಿಮ್ಮದೇ ರಾಜ್ಯದಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಕೊಟ್ಟಿಲ್ಲ, ಮೊದಲು ನೀವು ಮಾನ್ಯತೆ ನೀಡಿ" ಎಂಬ ತಾಂತ್ರಿಕ ಪ್ರಶ್ನೆ ಮತ್ತು ಹಿನ್ನಡೆ ಎದುರಾಗುತ್ತಿತ್ತು.
ಈಗ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಎರಡನೇ ಅಧಿಕೃತ ಭಾಷೆಯಾಗಿ ಸಂಪುಟ ಅನುಮೋದನೆ ನೀಡಿರುವುದರಿಂದ ಕೇಂದ್ರದ ಮುಂದೆ ರಾಜ್ಯದ ವಾದಕ್ಕೆ ಬಲವಾದ ಸಾಂವಿಧಾನಿಕ ತೂಕ ಬಂದಿದೆ.
ಈ ಹಿಂದೆ ರಾಜಕೀಯ ಅಥವಾ ಭಾವನಾತ್ಮಕ ಒತ್ತಡದ ಆಧಾರದಲ್ಲಿ ಪತ್ರಗಳನ್ನು ಬರೆಯಲಾಗಿತ್ತು ಆದರೆ ಇತ್ತೀಚೆಗೆ ಸಲ್ಲಿಕೆಯಾದ ಡಾ. ಮೋಹನ್ ಆಳ್ವ ಸಮಿತಿ ವರದಿಯು ತುಳು ಭಾಷೆಯ ಪ್ರಾಚೀನತೆ, 14ನೇ ಶತಮಾನದ ಶಾಸನಗಳು, ತಿಗಳಾರಿ ಲಿಪಿ, ಮತ್ತು ವ್ಯಾಕರಣದ ದಾಖಲೆಗಳನ್ನು ಸಾಕ್ಷ್ಯ ಸಮೇತ ನೀಡಿದೆ ಈ ದಾಖಲೆಗಳ ಸಮೇತ ಕೇಂದ್ರಕ್ಕೆ ಕಳುಹಿಸುವುದು ಅನಿವಾರ್ಯವಾಗಿತ್ತು.
ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಪ್ರತಿ ಬಾರಿ ಉತ್ತರಿಸುವಾಗ "ಭಾಷೆಗಳನ್ನು ಸೇರಿಸಲು ನಿಖರ ಮಾನದಂಡಗಳಿಲ್ಲ, ಪರಿಶೀಲನೆಯಲ್ಲಿದೆ" ಎಂದು ಹೇಳುತ್ತಾ ಬಂದಿದೆ.
ರಾಜ್ಯ ಸಂಪುಟದ ಅಧಿಕೃತ ತೀರ್ಮಾನದೊಂದಿಗೆ ಹೊಸದಾಗಿ ಕಳುಹಿಸಿದಾಗ ಕೇಂದ್ರ ಗೃಹ ಸಚಿವಾಲಯವು ಇದನ್ನು ಆದ್ಯತೆಯ ಮೇಲೆ ಪರಿಗಣಿಸಬೇಕಾಗುತ್ತದೆ.
ಕರಾವಳಿ ಭಾಗದ ದಶಕಗಳ ಆಕ್ರೋಶ ಮತ್ತು ಒತ್ತಡ: ಚುನಾವಣೆಗಳು, ಟ್ವಿಟರ್ ಅಭಿಯಾನಗಳು ಮತ್ತು ನಿರಂತರ ಸಾಂಸ್ಕೃತಿಕ ಪ್ರತಿಭಟನೆಗಳ ಮೂಲಕ ಕರಾವಳಿ ಜನರು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದರು.
ರಾಜ್ಯದ ವ್ಯಾಪ್ತಿಯಲ್ಲಿ ಮಾಡಬಹುದಾದ ತೀರ್ಮಾನವನ್ನು ಕೈಗೊಂಡು, ಚೆಂಡನ್ನು ಕೇಂದ್ರದ ಅಂಗಳಕ್ಕೆ ಹಾಕಿ ತನ್ನ ಬದ್ಧತೆಯನ್ನು ಸಾಬೀತುಪಡಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈಗಿನ ಶಿಫಾರಸು ರಾಜ್ಯ ಸಂಪುಟದ ಅಧಿಕೃತ ಆದೇಶದ ಹಿನ್ನೆಲೆಯಲ್ಲಿ ರೂಪಿತವಾದ ಕಾನೂನುಬದ್ಧ ಒತ್ತಾಸೆಯಾಗಿದೆ.
ಕರ್ನಾಟಕದ ಕರಾವಳಿ (ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ) ಭಾಗದಲ್ಲಿ #ಕೊಂಕಣಿ ಮಾತನಾಡುವ ಲಕ್ಷಾಂತರ ಜನರಿದ್ದಾರೆ.
ಗೋವಾದ ಜೊತೆಗೆ ಕರ್ನಾಟಕದ ಜನಪ್ರತಿನಿಧಿಗಳು, ಸಾಹಿತಿಗಳು ಹಾಗೂ ಸಂಘಟನೆಗಳು ಕೊಂಕಣಿಯನ್ನು 8ನೇ ಅನುಸೂಚಿಗೆ ಸೇರಿಸಲು ದೀರ್ಘ ಹೋರಾಟ ನಡೆಸಿ ಶಿಫಾರಸು ಮಾಡಿದ್ದರು.
ಇದರ ಫಲವಾಗಿ 1992ರಲ್ಲಿ 71ನೇ ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರ ಸರ್ಕಾರವು ಕೊಂಕಣಿ ಭಾಷೆಯನ್ನು (ಮಣಿಪುರಿ ಮತ್ತು ನೇಪಾಳಿ ಭಾಷೆಗಳೊಂದಿಗೆ) ಸಂವಿಧಾನದ 8ನೇ ಅನುಸೂಚಿಗೆ ಸೇರ್ಪಡೆಗೊಳಿಸಿತು.
ಕೊಡಗು ಜಿಲ್ಲೆಯ ಮೂಲ ಭಾಷೆಯಾದ ಕೊಡವವನ್ನು 8ನೇ ಅನುಸೂಚಿಗೆ ಸೇರಿಸಬೇಕೆಂದು ಕರ್ನಾಟಕ ಸರ್ಕಾರವು ಈ ಹಿಂದೆಯೇ ಕೇಂದ್ರಕ್ಕೆ ಶಿಫಾರಸು ಮಾಡಿದೆ.
ಕರಾವಳಿ ಭಾಗದ ತುಳು ಭಾಷೆಯನ್ನು 8ನೇ ಅನುಸೂಚಿಗೆ ಸೇರಿಸಲು ರಾಜ್ಯ ಸರ್ಕಾರ ಹಲವು ಬಾರಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಹಾಗೂ ನಿರ್ಣಯಗಳನ್ನು ಕಳುಹಿಸಿದೆ.
ಕರ್ನಾಟಕದಲ್ಲಿ ಗಮನಾರ್ಹ ಸಂಖ್ಯೆಯಲ್ಲಿರುವ ಲಂಬಾಣಿ ಸಮುದಾಯದ ಭಾಷೆಯನ್ನೂ ಸಂವಿಧಾನದ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಬೇಡಿಕೆ ಇದ್ದು, ಈ ಪ್ರಸ್ತಾವನೆಯೂ ಕೇಂದ್ರದ ಪರಿಶೀಲನಾ ಪಟ್ಟಿಯಲ್ಲಿದೆ.
ಕನ್ನಡದ ವಿಷಯದಲ್ಲಿ ಏನಾಗಿತ್ತು?...
1950ರಲ್ಲಿ ಭಾರತ ಸಂವಿಧಾನ ಜಾರಿಗೆ ಬಂದಾಗಲೇ ಮೊದಲ 14 ಭಾಷೆಗಳ ಪಟ್ಟಿಯಲ್ಲಿ ಕನ್ನಡ ಮೂಲತಃ ಸ್ಥಾನ ಪಡೆದಿತ್ತು.
ಕನ್ನಡಕ್ಕೆ "ಶಾಸ್ತ್ರೀಯ ಸ್ಥಾನಮಾನ" ನೀಡಬೇಕೆಂದು ಕರ್ನಾಟಕ ಸರ್ಕಾರ ವ್ಯಾಪಕ ದಾಖಲೆಗಳೊಂದಿಗೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು.
ಇದನ್ನು ಪರಿಶೀಲಿಸಿದ ಕೇಂದ್ರ ಸರ್ಕಾರವು 2008ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿ ಅನುಮೋದಿಸಿತು.
#ClassicalLanguageStatus #govtofindia #govtofkarnataka #cabinetmeeting #kannada #konkani #tulu #kodava #mangaloredist #udupi
Comments
Post a Comment