ತೇಜಸ್ವಿಯವರನ್ನ ಬೇಟಿ ಆಗಬೇಕೆಂಬ ನನ್ನ ಅಭಿಲಾಷೆ ಅಕಸ್ಮಿಕವಾಗಿ ಮತ್ತು ಅವಿಸ್ಮರಣಿಯವಾಗಿ ಆಗುತ್ತೆ ಅಂತ ಗೊತ್ತಿರಲಿಲ್ಲ, ಅದು ಹೇಗೆ ಆಯಿತು ಅಂದರೆ 2000ನೆ ಇಸವಿಯಲ್ಲಿ ಕುಪ್ಪಳ್ಳಿಯ ಕವಿಶೈಲ ರಾಷ್ಟ್ರಕ್ಕೆ ಅಪಿ೯ಸುವ ಕಾಯ೯ಕ್ರಮ ನಿಗದಿ ಆಗಿತ್ತು. ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರಾದ ನಾವೆಲ್ಲ ವಿಶೇಷ ಆಮಂತ್ರಿತರು ಆದರೆ ಸಾಹಿತ್ಯ ಆಸಕ್ತಿ ಯಾವತ್ತೂ ಕಡಿಮೆ ಇರುವ ನನ್ನ ಜೊತೆಯ ರಾಜಕಾರಣಿ ಸದಸ್ಯರು ಈ ಕಾಯ೯ಕ್ರಮಕ್ಕೆ ಬರಲಿಲ್ಲ. ಹಿಂದಿನ ದಿನ ಸಾಹಿತಿಗಳಾದ ಕೊಣ0 ದೂರು ವೆಂಕಪ್ಪ ಗೌಡರು ಬೆಂಗಳೂರಿಂದ ಬಂದವರು ಕುವೆ೦ಪು ಮನೆ ಲೋಕಾಪ೯ಣೆ ಕಾಯ೯ಕ್ರಮ ನೋಡಲು ಬಂದೆ, ಕರಕೊಂಡು ಹೋಗಯ್ಯ ಅಂದರು. ಸರಿ ಗೌಡರೆ ಗಣಪತ ಪನವರನ್ನು ಕರಕೊಂಡು ಹೋಗೋಣ ಅಂದೆ. ಮರುದಿನ ಕಾಗೋಡು ಸತ್ಯಾಗ್ರಹದ ರೂವಾರಿ ಹೆಚ್.ಗಣಪತಿಯಪ್ಪಾ, ಕೋಣಂದೂರು ವೆಂಕಪ್ಪ ಗೌಡರೊಂದಿಗೆ ಕುಪ್ಪಳ್ಳಿಗೆ ಹೋಗಿ ಸಭಾಂಗಣ ಪ್ರದೇಶಕ್ಕೆ ಹೋದೆವು, ಮುಂದಿನ ಸಾಲಿನಲ್ಲಿ ಈ ಇಬ್ಬರು ಹಿರಿಯರನ್ನ ಕುಳ್ಳಿರಿಸಿ ಹಿಂದಿನ ಸಾಲಿನಲ್ಲಿ ಕುಳಿತು ಸಭೆ ನೋಡೋಣ ಅಂತ ಹೊರಟೆ. ಹಿಂದಿನ ಸಾಲಿನ ಕುಚಿ೯ಯಲ್ಲಿ ಕುಳಿತು ವೇದಿಕೆ ಕಡೆ ನೋಡುತ್ತಾ ಪಕ್ಕದಲ್ಲಿ ಕುಳಿತವರ ಕಡೆ ನೋಡಿದೆ, ಅದೇನು ಆಶ್ಚಯ೯ ಅಂತಿರಿ ಎರೆಡು ಕೈ ತಲೆ ಹಿಂದೆ ಕಟ್ಟಿಕೊಂಡು ಇಡೀ ದೇಹ ಕುಚಿ೯ಯಲ್ಲಿ ತೇಲಿಸಿಕೊಂಡು...