Skip to main content

Posts

Showing posts with the label K.Shivaram first IAS passed in regional language KANNADA

ಕನ್ನಡದಲ್ಲಿ ಐಎಎಸ್ ಪಾಸು ಮಾಡಿದ ಮೊದಲ ಅಧಿಕಾರಿ ಕೆ.ಶಿವರಾಂ

2018ರ ಜೂನ್ ತಿಂಗಳಲ್ಲಿ ದಿಡೀರ್ ಆಗಿ ಬಂದಿದ್ದ ಕೆ.ಶಿವರಾಂ ನನಗೆ ತುಂಬಾ ಇಷ್ಟ, ನನ್ನ ಅತಿಥ್ಯ ಸ್ವೀಕರಿಸಿದ 3 ವರ್ಷದ ಹಿಂದಿನ ನೆನಪುಗಳು. *ಕೆ.ಶಿವರಾಂ ಕನ್ನಡದಲ್ಲಿ ಐಎಎಸ್ ಮಾಡಿದ ಮೊದಲಿಗರು.* *ಇವರ ಜೀವನ ಒಂದು ಹೊರಾಟ ಯಾಕೆಂದರೆ ಇವರ ಬಾಲ್ಯ ಅತ್ಯಂತ ಬಡತನದ್ದು, ದಲಿತ ಕುಟುಂಬದಲ್ಲಿ ಜನಿಸಿದ ಇವರು ಎಲ್ಲಾ ಸವಾಲುಗಳನ್ನ ಎದುರಿಸಿ ದೊಡ್ಡ ಹುದ್ದೆ ಪಡೆದ ಕಥೆ ಎಲ್ಲರಿಗೂ ಒಂದು ಪ್ರೇರಣೆ ಆಗುತ್ತದೆ.*   *ಶಿವಮೊಗ್ಗದ ಜಿಲ್ಲಾ ಪಂಚಾಯತ್ ಗೆ ಮುಖ್ಯ ಕಾಯ೯ ನಿವಾ೯ಹಕ ಅಧಿಕಾರಿಯಾಗಿ ಇವರು ಬಂದಾಗ ಜಿಲ್ಲಾ ಪಂಚಾಯತ್ ಸದಸ್ಯರಾದ ನಮಗೆಲ್ಲ ಕುತೂಹಲ ಆಗಷ್ಟೆ ಇವರ ಬಾ ನಲ್ಲೆ ಮದು ಚಂದ್ರಕೆ ಎಂಬ ಸಿನಿಮಾದಿಂದ ಇವರು ಖ್ಯಾತರಾಗಿದ್ದರು, ಬೆಂಗಳೂರು ಬಿಡಿಎ ಅಧಿಕಾರಿ ಆಗಿದ್ದಾಗ ಬೆಂಗಳೂರಲ್ಲಿ ಬಡವರಿಗೆ ಆಶ್ರಯ ನಿವೇಶನ ನೀಡಿ ದಾಖಲೆ ಮಾಡಿದ್ದರು, ಮೈಸೂರಿನಲ್ಲಿ ಕೂಡ ಅಭಿವೃದ್ಧಿ ಮಾಡಿ ಖ್ಯಾತರಾಗಿದ್ದರು.*    *ಇವರು ಶಿವಮೊಗ್ಗ ಬಂದಾಗಲೇ ನಮ್ಮ ಊರಾದ ಆನಂದಪುರಂನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ಆನಂದಪುರಂನ ಕನ್ನಡ ಸಂಘದ ಆಗಿನ ಅದ್ಯಕ್ಷರಾಗಿದ್ದ ಹಾ.ಮೊ.ಬಾಷ ನೇತೃತ್ವದಲ್ಲಿ ಹಮ್ಮಿಕೊಂಡಿದ್ದೆವು. ಉದ್ಘಾಟನೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರಿಂದ, ಕಾಗೋಡು ತಿಮ್ಮಪ್ಪ, ಕುಮಾರ್ ಬಂಗಾರಪ್ಪಾ, ಆಗಿನ ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ಬಲ್ಕಿಶ್ ಬಾನು ಮುಂತಾದವರೆಲ್ಲ ಭಾಗವ...