Skip to main content

Posts

Showing posts with the label Shimoga Ghandhi Basappa family members celebrating 76th Mahatma Gandhiji birthday

#Blog number 1772. ನಿರಂತರವಾಗಿ ಮಹಾತ್ಮಾ ಗಾಂಧೀಜಿ ಜನ್ಮ ದಿನಾಚಾರಣೆ 1948 ರಿಂದ ಸತತ 76 ವರ್ಷದಿಂದ ಶಿವಮೊಗ್ಗ ಗಾಂಧೀ ಬಸಪ್ಪರ ಕುಟುಂಬ ನಡೆಸಿಕೊಂಡು ಬರುತ್ತಿದೆ.

#ನೂರಾ_ಐವತ್ತೈದನೆ_ಮಹಾತ್ಮಾಗಾಂದೀಜಿ_ಜನ್ಮದಿನೋತ್ಸವ. #ಶಿವಮೊಗ್ಗದ_ಗಾಂಧೀಬಸಪ್ಪರ_ಕುಟುಂಬ_76_ವರ್ಷಗಳಿಂದ_ತಪ್ಪದೇ_ಮಹಾತ್ಮಾಗಾಂಧೀಜಿ_ಜನ್ಮದಿನಾಚಾರಣೆ_ಆಚರಣೆ #ಗಾಂದೀವಾದಿ_ಗಾಂಧೀಬಸಪ್ಪರ_ಶಪಥ_1999ರಿಂದ_ಮುಂದುವರಿಸಿಕೊಂಡು_ಬರುತ್ತಿರುವ_ಅವರ_ಕುಟುಂಬ #ನಿನ್ನೆ_ಅಂಚೆಯಲ್ಲಿ_ಬಂದ_ಅಹ್ವಾನ_ಪತ್ರಿಕೆ.   ಗಾಂದೀ ಬಸಪ್ಪನವರು (1913-1999) ಮಹಾತ್ಮಾ ಗಾಂಧೀಜಿಯವರ ತತ್ವ ಸಿದ್ದಾಂತದಿಂದ ಪ್ರೇರೇಪಿತರಾದ ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯ ಬಂದ ಸಂತೋಷದ ಮಧ್ಯದಲ್ಲೇ ಗಾಂಧೀ ಹತ್ಯೆಯ ದುಃಖದಲ್ಲಿ ಹೆಚ್ಚು ನೊಂದವರು ಶಿವಮೊಗ್ಗದ ಗಾಂಧೀ ಬಸಪ್ಪನವರು.   1999 ರಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸುವ ಮುನ್ನ ತಮ್ಮ ಇಡೀ ಕುಟುಂಬದವರಿಂದ ಇವರು ತೆಗೆದುಕೊಂಡ ಶಪಥ ಏನೆಂದರೆ ಅವರ ತಿಥಿ ಬೇಕಾದರೆ ಆಚರಿಸದೆ ಬಿಡಿ ಆದರೆ ಅವರು ಗಾಂಧೀಜಿ ಹತ್ಯೆ ನಂತರದಿಂದ ತಪ್ಪದೇ ಆಚರಿಸಿಕೊಂಡು ಬಂದ #ಗಾಂದೀ_ಜಯಂತಿ ಮಾತ್ರ ನಿರಂತರ ನಡೆಸಬೇಕು ಎಂಬುದು.   ಶಿವಮೊಗ್ಗದ ಇವರ ಮನೆಗೆ ವಂದೇ ಮಾತರಂ ನಿಲಯ ಎಂಬ ಹೆಸರು ಇದೆ ಗಾಂದೀ ಬಸಪ್ಪರ ಇಡೀ ಕುಟುಂಬದವರ ಹೆಸರ ಮುಂದೆ ಗಾಂಧೀ ಅಂತಲೇ ಇದೆ ಈ ಮೂಲಕ ಶಿವಮೊಗ್ಗದ ಗಾಂಧೀ ಬಸಪ್ಪ ಕುಟು೦ಬ ತಮ್ಮ ತಂದೆಯ ಅಂತಿಮ ಆಸೆ ನಿರಂತರವಾಗಿ ನೆರವೇರಿಸಿಕೊಂಡು ಬರುತ್ತಿದ್ದಾರೆ.      ಪ್ರತಿ ವಷ೯ ಗಾಂಧೀ ಜಯಂತಿ ಇಡೀ ಕುಟುಂಬದ ಸದಸ್ಯರು ಸೇರಿ ಗಾಂಧೀ ಅಭಿಮಾನಿಗಳನ್ನು ಸೇರ...