Blog number 913.ಆನಂದಪುರಂ ಇತಿಹಾಸ ಭಾಗ-76. ಕಾಯಕಯೋಗಿ ನಡೆದಾಡುವ ದೇವರು ಸಿದ್ಧಗಂಗಾ ಸ್ವಾಮಿಗಳು ಆನಂದಪುರಂಗೆ ಬಂದಿದ್ದರು. 24- ಏಪ್ರಿಲ್ -1969ರಂದು ನರಸೀಪುರದಲ್ಲಿ ಮಹಾತ್ಮಾ ಗಾಂಧೀಜಿ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಶಾಲಾ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿದ್ದರು.
ಆನಂದಪುರಂ_ಇತಿಹಾಸ_ಭಾಗ_76. #ಕಾಯಕಯೋಗಿ_ಶತಮಾನದ_ಸಂತ_ಸಿದ್ದಗಂಗಾ_ಸ್ವಾಮೀಜಿ_ಆನಂದಪುರಂಗೆ_ಬಂದಿದ್ದರು. #ಸಮೀಪದ_ನರಸೀಪುರದದಲ್ಲಿ_ಮಹಾತ್ಮಾಗಾಂದೀಜಿ_ಜನ್ಮಶತಾಬ್ಧಿ_ಸ್ಮರಣಾರ್ಥ_ಪ್ರಾಥಮಿಕ_ಶಾಲಾ_ಶಂಕುಸ್ಥಾಪನೆಗೆ #ಸ್ಥಳಿಯರು_ನೀಡಿದ_ಜಾಗದಲ್ಲಿ_ಆಗಿನ_ಸರ್ಕಾರದ_PWD_ಇಂಜಿನಿಯರ್_ಸಿಬ್ಬಂದಿ_ಕಂಟ್ರಾಕ್ಟರ್_ನಿರ್ಮಿಸಿದ_ಶಾಲೆ, #ನರಸೀಪುರ_ಶಾಲಾ_ಕಟ್ಟಡ_ಶಂಕು_ಸ್ಥಾಪನೆ_24_ಏಪ್ರಿಲ್_1969 . #ಶಂಕುಸ್ಥಾಪನ_ಶಿಲಾಪಲಕ_ಶಾಲಾ_ಕೊಠಡಿಯ_ಗೋಡೆಯಲ್ಲಿ_ನೋಡಬಹುದು. ಮಹಾತ್ಮಾ ಗಾಂಧೀಜಿ ಜನ್ಮ ದಿನ 2 ಅಕ್ಟೋಬರ್ 1869, ಭಾರತ ದೇಶದ ಸ್ವಾತಂತ್ರ್ಯ ಹೋರಾಟದ ನೇತಾರರಾದ ಅವರ ಜನ್ಮ ಶತಮಾನೋತ್ಸವ 1969 ರಲ್ಲಿ ದೇಶದಾದ್ಯಂತ ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಗಿತ್ತು. ಜನ್ಮ ಶತಮಾನೋತ್ಸವದ ವಿಶೇಷ ಅಂಚೆ ಚೀಟಿ, ಅಂಚೆ ಕಾರ್ಡು, ನಾಣ್ಯಗಳು, ಕರೆನ್ಸಿಗಳು ಮತ್ತು ಶಾಲೆ ಮುಂತಾದ ನಿರ್ಮಾಣ ಕೂಡ ಆಯಿತು. ಮಹಾತ್ಮಾ ಗಾಂಧಿಯವರ ಜನ್ಮ ಶತಮಾನೋತ್ಸವಕ್ಕೆ ಭಾರತ ಮಾತ್ರವಲ್ಲ ವಿಶ್ವದ 40 ದೇಶಗಳು ಅವರ ಸ್ಮರಣಾರ್ಥವಾಗಿ 1969 ರಲ್ಲಿ ವಿಶೇಷ ಅಂಚೆ ಚೀಟಿ ಲೋಕಾರ್ಪಣೆ ಮಾಡಿ ಮಹಾತ್ಮಾ ಗಾಂಧೀಜಿಯವರನ್ನು ಸ್ಮರಿಸಿ ಗೌರವಾರ್ಪಣೆ ಮಾಡಿತ್ತು. (ಬೇರೆ ಬೇರೆ ಸಂದರ್ಭಗಳಲ್ಲಿ ಗಾಂಧೀಜಿ ಅಂಚೆ ಚೀಟಿ ಬಿಡುಗಡೆ ಮಾಡಿದ ದೇಶಗಳ ಸಂಖ್ಯೆ 100 ಕ್ಕೂ ಹೆಚ್ಚು)...