#ಆನಂದಪುರಂ_ಆನೆ_ಕಾರಿಡಾರ್ ಆನೆ ತಜ್ಞರ ಅಂದಾಜು ಸರಿಯಾಗಿದೆ. ಕಳೆದ ವರ್ಷ ಸುಮಾರು 74 ದಿನ ಈ ಪ್ರದೇಶದಲ್ಲಿ ಸಂಚರಿಸಿದ್ದ ಕಾಡಾನೆಗಳು ಈ ವರ್ಷ 53 ದಿನ ತಡವಾಗಿ ಇಲ್ಲಿಗೆ ಬಂದಿದೆ ಆದರೆ ಕೇವಲ 9 ದಿನಗಳಲ್ಲಿ ತಮ್ಮ ಅಂತಿಮ ಗುರಿ ತಲುಪಿದೆ. ಕಳೆದ ವರ್ಷ ಈ ಭಾಗದಲ್ಲಿ ಸಂಚಾರ ಮಾಡಿದ್ದ ಕಾಡಾನೆಗಳು ಈ ವರ್ಷ ಕೂಡ ಅದೇ ಮಾರ್ಗದಲ್ಲಿ ಸಂಚರಿಸಿದೆ. ಈ ಪ್ರದೇಶದ ಜನರು ಜಾಗೃತರಾಗಿರಬೇಕು ಆನೆಗಳು ಬೆಳಿಗ್ಗೆ 4 ರಿಂದ 10 ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ ಸಂಚಾರ ಮಾಡುವುದರಿಂದ ಈ ಸಮಯದಲ್ಲಿ ಕಾಡಾನೆ ಸಂಚರಿಸುವ ಪ್ರದೇಶದಲ್ಲಿ ಜನ ಸಂಚಾರ ಮಾಡಬಾರದು. ಅರಣ್ಯ ಇಲಾಖೆಯವರು ಈ ಕಾಡುಆನೆ ಸಂಚಾರ ಮಾನಿಟರಿಂಗ್ ಮಾಡುತ್ತಿದ್ದು ಕಾಲ ಕಾಲಕ್ಕೆ ಅವುಗಳು ಇರುವ ಪ್ರದೇಶದಲ್ಲಿನ ಜನವಸತಿ ಪ್ರದೇಶಗಳಲ್ಲಿ ಮತ್ತು ಕೃಷಿಕರಿಗೆ ಧ್ವನಿವರ್ಧಕಗಳ ಮೂಲಕ ಎಚ್ಚರಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅರಸಾಳು ಸರ್ವೇ ನಂಬರ್ 116 ರಲ್ಲಿ ಪ್ರವೇಶ ಮಾಡಿ ಕಮದೂರಿನ ತೋಟದ ಕೆರೆಯಿಂದ ಸಾಗರ ತಾಲೂಕಿನ ಗಿಳಾಲಗುಂಡಿ ಸಮೀಪದ ಕೊಲ್ಲಿಬಚ್ಚಲು ನೀರಾವರಿ ಆಣೆಕಟ್ಟು ತಲುಪಿ ಅಂತಿಮವಾಗಿ ಸಾಗರ ಮತ್ತು ಶಿಕಾರಿಪುರ ತಾಲೂಕಿನ ಅಂಚಿನಲ್ಲಿರುವ ಅಂಬ್ಲಿಗೋಳ ನೀರಾವರಿ ಅಣೆಕಟ್ಟು ತಲುಪುತ್ತದೆ. ಕಳೆದ ವರ್ಷ ಸುಮಾರು 78 ದಿನ ಈ ಪ್ರದೇಶದಲ್ಲಿ ಸಂಚರಿಸಿದ್ದ ಕಾಡಾನೆಗಳು ಈ ವರ್ಷ 53 ದಿನ ತಡವಾಗಿ ಇಲ್ಲಿಗೆ ಬಂದಿದೆ ಆದರೆ ಕೇವಲ 9 ದಿನಗಳಲ್ಲಿ ತಮ್ಮ...