#ಆನಂದಪುರಂ_ಆನೆ_ಕಾರಿಡಾರ್
ಆನೆ ತಜ್ಞರ ಅಂದಾಜು ಸರಿಯಾಗಿದೆ.
ಕಳೆದ ವರ್ಷ ಸುಮಾರು 74 ದಿನ ಈ ಪ್ರದೇಶದಲ್ಲಿ ಸಂಚರಿಸಿದ್ದ ಕಾಡಾನೆಗಳು ಈ ವರ್ಷ 53 ದಿನ ತಡವಾಗಿ ಇಲ್ಲಿಗೆ ಬಂದಿದೆ ಆದರೆ ಕೇವಲ 9 ದಿನಗಳಲ್ಲಿ ತಮ್ಮ ಅಂತಿಮ ಗುರಿ ತಲುಪಿದೆ.
ಕಳೆದ ವರ್ಷ ಈ ಭಾಗದಲ್ಲಿ ಸಂಚಾರ ಮಾಡಿದ್ದ ಕಾಡಾನೆಗಳು ಈ ವರ್ಷ ಕೂಡ ಅದೇ ಮಾರ್ಗದಲ್ಲಿ ಸಂಚರಿಸಿದೆ.
ಈ ಪ್ರದೇಶದ ಜನರು ಜಾಗೃತರಾಗಿರಬೇಕು ಆನೆಗಳು ಬೆಳಿಗ್ಗೆ 4 ರಿಂದ 10 ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ ಸಂಚಾರ ಮಾಡುವುದರಿಂದ ಈ ಸಮಯದಲ್ಲಿ ಕಾಡಾನೆ ಸಂಚರಿಸುವ ಪ್ರದೇಶದಲ್ಲಿ ಜನ ಸಂಚಾರ ಮಾಡಬಾರದು.
ಅರಣ್ಯ ಇಲಾಖೆಯವರು ಈ ಕಾಡುಆನೆ ಸಂಚಾರ ಮಾನಿಟರಿಂಗ್ ಮಾಡುತ್ತಿದ್ದು ಕಾಲ ಕಾಲಕ್ಕೆ ಅವುಗಳು ಇರುವ ಪ್ರದೇಶದಲ್ಲಿನ ಜನವಸತಿ ಪ್ರದೇಶಗಳಲ್ಲಿ ಮತ್ತು ಕೃಷಿಕರಿಗೆ ಧ್ವನಿವರ್ಧಕಗಳ ಮೂಲಕ ಎಚ್ಚರಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅರಸಾಳು ಸರ್ವೇ ನಂಬರ್ 116 ರಲ್ಲಿ ಪ್ರವೇಶ ಮಾಡಿ ಕಮದೂರಿನ ತೋಟದ ಕೆರೆಯಿಂದ ಸಾಗರ ತಾಲೂಕಿನ ಗಿಳಾಲಗುಂಡಿ ಸಮೀಪದ ಕೊಲ್ಲಿಬಚ್ಚಲು ನೀರಾವರಿ ಆಣೆಕಟ್ಟು ತಲುಪಿ ಅಂತಿಮವಾಗಿ ಸಾಗರ ಮತ್ತು ಶಿಕಾರಿಪುರ ತಾಲೂಕಿನ ಅಂಚಿನಲ್ಲಿರುವ ಅಂಬ್ಲಿಗೋಳ ನೀರಾವರಿ ಅಣೆಕಟ್ಟು ತಲುಪುತ್ತದೆ.
ಕಳೆದ ವರ್ಷ ಸುಮಾರು 78 ದಿನ ಈ ಪ್ರದೇಶದಲ್ಲಿ ಸಂಚರಿಸಿದ್ದ ಕಾಡಾನೆಗಳು ಈ ವರ್ಷ 53 ದಿನ ತಡವಾಗಿ ಇಲ್ಲಿಗೆ ಬಂದಿದೆ ಆದರೆ ಕೇವಲ 9 ದಿನಗಳಲ್ಲಿ ತಮ್ಮ ಅಂತಿಮ ಗುರಿ ತಲುಪಿದೆ.
ಬಹುಶಃ ಈ ವರ್ಷ ಬೇಗನೇ ಬಂದ ದಾರಿಯಲ್ಲಿ ವಾಪಾಸು ಹೋಗುವ ಸಾಧ್ಯತೆ ಅಂದಾಜಿಸಲಾಗಿದೆ ಅಥವ ಅಂಬ್ಲಿಗೋಳ ಜಲಾಶಯದಿಂದ ಶಿಕಾರಿಪುರದ ಅಂಜನಾಪುರ ನೀರಾವರಿ ಆಣೆಕಟ್ಟು ಅಥವ ಶರಾವತಿ ಅರಣ್ಯ ಪ್ರದೇಶದಲ್ಲಿ ಸಾಗುವ ಸಾಧ್ಯತೆ ಇದೆಯಾ? ಗೊತ್ತಿಲ್ಲ.
#sagar #Anandapuram #ambligoladam #kollibachaludam #shikaripura #byrapura #elephantcorridor #wildelephants #ForestDepartment #shivamogga
ಈ ಕೆಳಗಿನ ಕಳೆದ ವರ್ಷದ ಆನೆ ಸಂಚಾರದ ಮಾಹಿತಿ ಮತ್ತು ಈ ವರ್ಷದ ಮಾಹಿತಿ ಪರಾಮರಿಸಿ ನೋಡಿ...
#ಕಳೆದ_ವರ್ಷದ_ಕಾಡಾನೆ_ಸಂಚಾರದ_updateಗಳು
1) 2023 - ಅಕ್ಟೋಬರ್ -15 ರಂದು ಹೊಸನಗರ ತಾಲೂಕಿನ ಕೆಂಚನಾಲದಲ್ಲಿ ಮರಿ ಮತ್ತು ತಾಯಿ ಆನೆ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು.
2) 2023 - ಡಿಸೆಂಬರ್-16 ರಂದು ಸಾಗರ ತಾಲೂಕಿನ ಪತ್ರೆಹೊಂಡದಲ್ಲಿ.
3) 2023- ಡಿಸೆಂಬರ್- 22ರವರೆಗೆ ಅಂಬ್ಲಿಗೋಳದವರೆಗೆ
4) 2023 - ಡಿಸೆಂಬರ್ - 24 ರಾ.ಹೆ 69 ವಾಹನ ಸಂಚಾರ ನಿರ್ಬಂದಿಸಿ ಕೊಲ್ಲಿಬಚ್ಚಲು ಡ್ಯಾಮಿನ ಭಾಗದಿಂದ ರಾಷ್ಟ್ರೀಯ ಹೆದ್ದಾರಿ ದಾಟಿಸಿದ್ದರು ಅರಣ್ಯ ಇಲಾಖೆಯವರು.
5) 2023- ಡಿಸೆಂಬರ್- 28ರ ಬೆಳಗಿನ ಜಾವ ಹೊಸನಗರ ತಾಲೂಕಿನ ಅರಸಾಳು ರಿಪ್ಪನ್ ಪೇಟೆ ಮಾರ್ಗದ 9ನೇ ಮೈಲಿ ಕಲ್ಲಿನಲ್ಲಿ ಈ ಭಾಗದಿಂದ ದಾಟಿ ವಾಪಾಸು ಹೋಗಿತ್ತು.
(ಈ ಪ್ರದೇಶದಲ್ಲಿ ಆನೆ ಸಂಚಾರದ ಅಂದಾಜು ಒಟ್ಟು 74 ದಿನಗಳು)
#ಈ_ವರ್ಷದ_ಕಾಡಾನೆ_ಸಂಚಾರದ_ಅಪ್ಡೇಟ್ಗಳು ...
1 ) ದಿನಾಂಕ 7 - ಡಿಸೆಂಬರ್- 2024 ಶನಿವಾರ ಬೆಳಿಗ್ಗೆ ಶಿವಮೊಗ್ಗ ತಾಲ್ಲೂಕಿನ ಚೋರಡಿ ಶೆಟ್ಟಿಕೆರೆ ಹತ್ತಿರ ಕಾಣಿಸಿಕೊಂಡ ಮೂರು ಕಾಡಾನೆಗಳು ಸಂಜೆ ಸೂಡೂರು ಗೇಟ್ ಹತ್ತಿರ ಕಾಣಿಸಿಕೊಂಡಿತ್ತು.
2). ದಿನಾಂಕ 8 - ಡಿಸೆಂಬರ್- 2024 ಬಾನುವಾರ ಬೆಳಿಗ್ಗೆ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿಯ ಆಲವಳ್ಳಿ ಸಮೀಪದ ಕಮದೂರಿನ ಕಾಡು ಸಿದ್ದೇಶ್ವರ ಗುಡಿ ಮೇಲಿನ ಕಾಡಿನಲ್ಲಿರುವ ತೋಟದಕೆರೆಗೆ ಬಂದಿದೆ ಅಲ್ಲಿರುವ ಭೋಜಪ್ಪ ಗೌಡರ ಲಿಂಗರಾಜರ ಜಮೀನಿನಲ್ಲಿ ಆನೆ ಹೆಜ್ಜೆಗಳಿದೆ.
3) ದಿನಾಂಕ 9 - ಡಿಸೆಂಬರ್ - 2024ರ ರಾತ್ರಿ ತ0ಗಳವಾಡಿ
4) 10-ಡಿಸೆಂಬರ್-2024 ಸೋಮವಾರ
ಮತ್ತು ಮಂಗಳವಾರ ಹೊಸಕೊಪ್ಪ ಭಾಗದಲ್ಲಿ.
5) ದಿನಾಂಕ 11-ಡಿಸೆಂಬರ್- 2024 ಬುಧವಾರ ರಾತ್ರಿ ತಂಗಳವಾಡಿ ಸಮೀಪದ ಚಂದಾಳಗೆರೆ.
6) ದಿನಾಂಕ 12 ರಿಂದ 13ರವರೆಗೆ ಸುದ್ದಿ ಇಲ್ಲ. (ಗುರುವಾರ & ಶುಕ್ರವಾರ)
7)ದಿನಾಂಕ 14- ಡಿಸೆಂಬರ್- 2024 ಶನಿವಾರ ರಾತ್ರಿ ಬೈರಾಪುರ ಭಾಗದಲ್ಲಿ.
8) ದಿನಾಂಕ 15-ಡಿಸೆಂಬರ್ - 2024 ಭಾನುವಾರ ಬೆಳಿಗ್ಗೆ ಬೈರಾಪುರದಿಂದ ಕಾಡಿಗೆ ಸಾಗಿ ಹೋಗಿದೆ.
( ಈ ವರ್ಷ ಒಟ್ಟು 9 ದಿನಗಳಾಯಿತು ಕಾಡಾನೆ ಸಂಚಾರಕ್ಕೆ)
Comments
Post a Comment