#ಗಣಪೆಕಾಯಿ
ನನ್ನ ಗಣಪೇ ಕಾಯಿ ಖಾದ್ಯದ ಲೇಖನ ಹೆಚ್ಚು ಜನರಿಗೆ ತಲುಪಿದೆ.
ನನ್ನ ಗಣಪೆಕಾಯಿ ಲೇಖನ ಓದಿ ಪ್ರತಿಕ್ರಿಯಿಸಿದವರು ಅನೇಕರು.
#ganapekayi #malenadu #westernghats #westernghatsofindia #vegitarianfood #foodblogger #ayurveda #dreamhurb #entadareedhi #ಗಣಪೆಕಾಯಿ
ಮಂಗಳೂರಿನ ಅತ್ರಿ ಬುಕ್ ಹೌಸಿನ ಸಾಹಸಿ #ಅಶೋಕವರ್ಧನ್ ಮಂಗಳೂರಿನಲ್ಲಿ ತಮ್ಮ ನೈಸರ್ಗಿಕ ಕಾಡು ಬೆಳೆಸುವಲ್ಲಿ 15 20 ವರ್ಷದ ಹಿಂದೆ ನೆಲಕ್ಕೆ ಊರಿದ ಗಣಪೆ ಬೀಜ ಈಗ ಬೃಹತ್ ಬಳ್ಳಿ ಆಗಿ ಅರ್ಧ ಎಕರೆ ವಿಸ್ತರಿಸಿರುವ ಪೋಟೋ ಕಳಿಸಿದ್ದಾರೆ ಅದರ ಬೀಜಗಳನ್ನು ತಂದು ಅವರ ಇನ್ನೊಂದು ನೈಸರ್ಗಿಕ ಕಾಡು ಅಶೋಕ ವನದಲ್ಲಿ ಹರಡಿದ್ದಾರಂತೆ ಈ ಫೋಟೋ ಲಗತ್ತಿಸಿದ್ದೇನೆ.
ತೀರ್ಥಹಳ್ಳಿಯ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ #ಸುಮಿತ್ರ_ಎಲ್_ಸಿ. ಬಾಲ್ಯದಲ್ಲಿ ಅವರ ಮನೆಯ ಸಮೀಪದಲ್ಲಿ ಗಣಪೆ ಕಾಯಿ ಬಳ್ಳಿ ಇದ್ದ ಬಗ್ಗೆ ಮತ್ತು ಅದರ ತಿರುಳನ್ನು ಜಾನುವಾರುಗಳಿಗೆ ಬಳಸುತ್ತಿದ್ದನ್ನು ಬರೆದಿದ್ದಾರೆ.
ಹಿರಿಯ ಪತ್ರಕತ೯ರಾದ #ಅರುಣ್_ಕುಮಾರ್_ಹಬ್ಬು ಬಾಲ್ಯದಲ್ಲಿ ಇದನ್ನು ಆಟವಾಡಲು ಬಳಸಿದ ಬಗ್ಗೆ ನೆನಪು ಬರೆದಿದ್ದಾರೆ.
#ಅಣ್ಣಪ್ಪಮೆಳವರಿಗೆ ಅವರು ಇದನ್ನು ಮಧ್ಯದಲ್ಲಿ ರಂಧ್ರಕೊರೆದು ಹಾರವನ್ನು ಮಾಡಿ ಜಾನುವಾರುಗಳಿಗೆ ಹಾಕುವುದನ್ನು ನೆನಪು ಮಾಡಿದ್ದಾರೆ ಮತ್ತು ಇದು ದ್ವಿದಳ ಧಾನ್ಯದಲ್ಲಿ ಅತ್ಯಂತ ದೊಡ್ಡ ಗಾತ್ರದ ಧಾನ್ಯ ಎನ್ನುವುದನ್ನು ಗುರುತಿಸಿದ್ದಾರೆ.
ನಮ್ಮೂರಿನ ಸಹೋದರಿ ಬೆಂಗಳೂರಿನಲ್ಲಿ ನೆಲೆಸಿದ #ಲೀಲಾಸುರೇಶ್ ಇದು ಅತ್ಯಂತ ರುಚಿಕರ ಮತ್ತು ಅಷ್ಟೇ ಕಹಿ ಎಂದಿದ್ದಾರೆ.
ಸಾಗರದ #ನಾಗಾರ್ಜುನ್ ಅವರು ಇದನ್ನು ತಿನ್ನುತ್ತಾರೆ ಎನ್ನುವುದು ಇವತ್ತೇ ಗೊತ್ತಾಯ್ತು ಎಂದಿದ್ದಾರೆ.
ಗೋಕರ್ಣದ #ಗೋಪಾಲ್_ಎಸ್_ಗಾಯತ್ರಿ ಇದನ್ನು ಬಾಣಂತಿಯರ ಮದ್ದುಗಳಾಗಿ ಬಳಸುವ ಬಗ್ಗೆ ಮತ್ತು ಅಘನಾಶಿನಿ ನದಿ ಇದನ್ನು ಸಮುದ್ರಕ್ಕೆ ತಂದು ಹಾಕುತ್ತಿದ್ದದ್ದು ಅದನ್ನು ಸಮುದ್ರದ ದಡದಲ್ಲಿ ಆಟವಾಡಲು ಇವರು ಸಂಗ್ರಹಿಸುತ್ತಿದ್ದನ್ನು ನೆನಪು ಮಾಡಿದ್ದಾರೆ.
#ರಘುಸುಳ್ಳೂರು ಇದನ್ನು ಹಸಿ ಕಾಯಿ ಇದ್ದಾಗಲೇ ಬಳಸುವುದು ರುಚಿಕರ ಎಂದಿದ್ದಾರೆ.
#ಲೋಕೇಶ್_HN ಇದರ ಸ್ವಾದ ನೆನಪು ಮಾಡಿದ್ದಾರೆ.
ಪತ್ರಕತ೯ರಾದ #ಜಗದೀಶ್_ಸಂಪಳ್ಳಿ ಇದರ ರುಚಿಕರ ಖಾದ್ಯವನ್ನು ನೆನಪು ಮಾಡಿಕೊಂಡಿದ್ದಾರೆ.
ಬಹಳಷ್ಟು ಜನ ಪ್ರತಿಕ್ರಿಯಿಸಿದ್ದಾರೆ ಅನೇಕರಿಗೆ ಇದರ ಬಗ್ಗೆ ಗೊತ್ತೇ ಇಲ್ಲ.
ಗಣಪೆ ಕಾಯಿ ಗೊತ್ತಿರುವವರಿಗೂ ಇದನ್ನು ತಿನ್ನುತ್ತಾರೆ ಎಂಬುದು ಗೊತ್ತೇ ಇಲ್ಲ.
ಭಾರತೀಯರು ಇದಕ್ಕೆ 2,000 ವರ್ಷಕ್ಕಿಂತ ಹಿಂದೆಯೇ ಗಣಪೇ ಕಾಯಿ ಎಂದು ಇದಕ್ಕೆ ನಾಮಕರಣ ಮಾಡಿದ್ದಾರೆ.
ಗಣಪೆ ಕಾಯಿ ಎಂಬ ಹೆಸರು ಇದಕ್ಕೆ ಬರಲು ಕಾರಣ ಇದು ಮೊಳಕೆ ಒಡೆದಾಗ ಸೊಂಡಿಲು ರೀತಿ ಕಾಣುತ್ತದೆ, ಇದು ಗಣಪತಿಯ ರೂಪ ತಾಳುತ್ತದಾದ್ದರಿಂದ ಇದಕ್ಕೆ ಗಣಪೆ ಕಾಯಿ ಎಂದು ಅರಣ್ಯ ವಾಸಿಗಳು ಕರೆದಿದ್ದಾರೆ.
ಗಣಪತಿಗೆ ಅರಣ್ಯವಾಸಿಗಳು ಗಣಪ ಎಂದು ಕರೆಯುವುದು ನಂತರ ಗಣಪೆ ಆಗಿರಬೇಕು.
ಭಾರತದ ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ಈ ಬೃಹತ್ ಗಣಪೇಕಾಯಿ ಬಳ್ಳಿಗಳು ಹೆಚ್ಚಾಗಿ ಇದೆ.
ಭಾರತೀಯರು ಅನೇಕ ಶತಮಾನಕ್ಕಿಂತ ಮುಂಚಿನಿಂದಲೂ ಇದನ್ನು ಔಷಧಿಯಾಗಿ ಆಭರಣದ ರೀತಿ ಮತ್ತು ಆಹಾರವಾಗಿ
ಇನ್ನೊಂದು ವಿಶೇಷ ಇದು ನೀರಿನಲ್ಲಿ ಮುಳುಗುತ್ತದೆ ಮತ್ತು ಬೀಜದ ಹೊದಿಕೆ ದಪ್ಪ ಆದ್ದರಿಂದ ದೀರ್ಘಕಾಲದ ಬಾಳಿಕೆ ಇದೆ ಈ ಬೀಜಕ್ಕೆ.
ಇದಕ್ಕೆ ಅವರು ನಾಮಕರಣ ಮಾಡಿದ ಬೊಟಾನಿಕಲ್ ನೇಮ್ #ENTADA_RHEEDI (ಎಂಟಡ ರೀಡಿ ).
ಇದಕ್ಕೆ ಇನ್ನೊಂದು ಹೆಸರು ಇದೆ ಆಫ್ರಿಕನ್ ಡ್ರೀಮ್ ಹರ್ಬ (African dream herb) ಅಂತ.
ಈ ಹೆಸರು ಬರಲು ಕಾರಣ ಆಫ್ರಿಕಾದ ಬುಡಕಟ್ಟು ಜನರು ಇದರ ಒಳಗಿನ ತಿರುಳು ತಂಬಾಕಿನಂತಹ ಗಿಡಮೂಲಿಕೆ ಜೊತೆ ರಾತ್ರಿ ನಿದ್ದೆಯ ಮೊದಲು ಧೂಮಪಾನ ಮಾಡಿದರೆ ಕನಸುಗಳು ಬೀಳುತ್ತದೆ ಎಂದು ಆಫ್ರಿಕನ್ ಜನ ಇದನ್ನು ಬಳಸುತ್ತಾರೆ.
ಇದನ್ನು ನಾವು ಕನ್ನಡದಲ್ಲಿ ಗಣಪೇ ಕಾಯಿ ಎನ್ನುತ್ತೇವೆ.
Comments
Post a Comment