Skip to main content

Blog number 3347. ಆನೆಗಳ ಬಗ್ಗೆ ಶೃಂಗೇರಿ ಶ್ರೀನಿವಾಸರು ಬರೆದಿದ್ದಾರೆ

https://www.facebook.com/share/p/1AYHeU6ing/

#ಗೆಳೆಯ_ಶೃಂಗೇರಿ_ಶ್ರೀನಿವಾಸಮೂರ್ತಿ

  ಬರೆದ ಆನೆಗಳ ವಿಶೇಷ ಲೇಖನ ಓದಿ.

ನಮ್ಮ ಆನಂದಪುರಂ ಆನೆಗಳ ಕಾರಿಡಾರ್ ಆಗಿ ಹೊಸದಾಗಿ ದಾಖಲಾಗಿದೆ.

ಈ ಭಾಗದ ಜನರಿಗೆ-ವಿದ್ಯಾರ್ಥಿಗಳಿಗೆ ಮತ್ತು ಪತ್ರಕರ್ತರಿಗೆ ನನ್ನ ಮನವಿ ಇದನ್ನು ಓದಿ ಹೆಚ್ಚು ಜನರಿಗೆ ತಲುಪಿಸಿ.


#elephant #wildlifeconservation #elephantsanctuary #corridor #malenadu #westernghatsofindia #sagar #Anandapuram #ripponpet #shikaripura #Shivamogga #ambligola #byrapura #chanfalkere #gilalgundi #patrehonda #alavalli #arasalu 

ಶೃಂಗೇರಿ ಶ್ರೀನಿವಾಸಮೂರ್ತಿ ಶ್ರಮಜೀವಿ - ವಿದ್ಯಾವಂತ - ವಿಚಾರವಾದಿ- ಅಪಾರ ಓದು -ಅವರ ಜೀವನ ಶೈಲಿ ಅತ್ಯಂತ ಇಷ್ಟವಾಗಿದೆ ಅವರು ನಮ್ಮ ಊರಿನ ಆನೆಗಳ ಸಂಚಾರದ ಸಮಯದಲ್ಲಿ ಬರೆದ ಈ ಲೇಖನ ನಮಗೆಲ್ಲ ಆನೆ ಬಗ್ಗೆ ತಿಳಿದುಕೊಳ್ಳಲು ಉಪಯುಕ್ತವಾಗಿದೆ ಈ ಕೆಳಗಿನ ಶೃಂಗೇರಿ ಶ್ರೀನಿವಾಸ ಮೂರ್ತಿ ಬರೆದ ಲೇಖನ ಓದಿ.
ಅವರ ಪೇಸ್ ಬುಕ್ ಲಿಂಕ್

*#ಆನೆಗಳು*
*#ಕಾರಿಡಾರ್*

*ಆನೆಗಳನ್ನು ಮಲೆನಾಡು - ಪಶ್ಚಿಮ ಘಟ್ಟಗಳತ್ತ ನಿಧಾನವಾಗಿ ಹಾಗೂ ಶಾಶ್ವತವಾಗಿ ನೂಕಿ, ಅವುಗಳ ಪುರಾತನ ಅಲೆದಾಟ ಮಾರ್ಗ (ಕಾರಿಡಾರ್) ಗಳನ್ನು ಛಿದ್ರಗೊಳಿಸಿ ದ್ವಂಸ ಮಾಡಿದವರು ಯಾರು? . . . . .*

*ಪೂರ್ವ ಘಟ್ಟ ಪಶ್ಚಿಮ ಘಟ್ಟಗಳ ನಡುವಣ  ವಿಶಾಲ ಬಯಲು,* *ಅಲ್ಲಿನ ಹುಲ್ಲುಗಾವಲು, ನಡುವಿನ ದ್ವಿದಳ ಪೊದೆ, ಕುರುಚಲು ಕಾಡು, ಅಲ್ಲಲ್ಲಿ ದೂರದೂರಕ್ಕೆ ಕಲ್ಲು ಬೆಟ್ಟಗಳು, ಆ ಬೆಟ್ಟಗಳಂಚಿನ ಉದುರೆಲೆ, ಅರೆಉದುರೆಲೆ ಮರಗಳು, ಪಶ್ಚಿಮ ಘಟ್ಟಗಳಿಂದ ಹರಿದು ಬರುವ ವಿಶಾಲ ನದಿಗಳು...*

*ಅಲೆದಾಟಕ್ಕೆ ಸಮತಟ್ಟಾದ ಭೂ ಪ್ರದೇಶ, ತಿನ್ನಲು ಸಮೃದ್ಧ ಸಮತೋಲನದ ಮೇವು, ಜಲಕ್ರೀಡೆಗೆ ಸಾಕಷ್ಟು ನೀರು ದೊರೆಯುತ್ತಿದ್ದ ದಖನ್ ಪ್ರಸ್ಥಭೂಮಿ ದಕ್ಷಿಣ ಭಾರತದ ಆನೆಗಳ ಮೂಲನೆಲೆಯಾಗಿತ್ತಲ್ಲ.* 

*ಜೊತೆಗೆ ಆನೆ ನಡೆದದ್ದೇ ದಾರಿ ಎಂಬಂತೆ ಆಗಾಗ ಸಂಭವಿಸುತ್ತಿದ್ದ ನಿಸರ್ಗ ಸಹಜ ಅನಾವೃಷ್ಟಿ ಸಂದರ್ಭದಲ್ಲೊ,ಕಡು ಬೇಸಿಗೆಯಲ್ಲೋ ನೀರನ್ನರಸಿ ಪಶ್ಚಿಮ ಘಟ್ಟಗಳತ್ತ ತಾತ್ಕಾಲಿಕ ವಲಸೆಯೂ ಇತ್ತು.*

*ಆದರೆ ಅತಿಯಾದ ಏರುತಗ್ಗು ಕೊರಕಲು ಅತಿಮಳೆ,ಕೆಸರು ಜಾಡುಗಳಿಗೆ ಒಗ್ಗದ ಈ ಬೃಹತ್ ದೇಹಿಗಳಿಗೆ ಮಲೆನಾಡು - ಪಶ್ಚಿಮ ಘಟ್ಟಗಳು ಶಾಶ್ವತ ನೆಲೆಗಳೇನೂ ಆಗಿರಲಿಲ್ಲ.*

*ಸರಿಸುಮಾರು ಮನುಷ್ಯನಷ್ಟೇ ಸೂಕ್ಷ್ಮ ಸಂವೇದನೆ ಗಳಿಸಿಕೊಂಡು ವಿಕಸನದ ಹಾದಿ ಸವೆಸುತ್ತಿರುವ(ವಿಕಸನವೆಂಬುದು ನಿರಂತರ ಪ್ರಕ್ರಿಯೆ) ಈ ಜೀವಿಗಳು ಸಂಘರ್ಷವಾದಿಗಳಲ್ಲ, ಸಹಜೀವಿಗಳ ತಂಟೆಗೆ ಹೋಗದೆ ತಮ್ಮಷ್ಟಕ್ಕೆ ತಾವಿರುವ ಸ್ವಭಾವದವು. ಹಾಗೆಂದು ತಂಟೆಗೆ ಬರುವ ಪ್ರಾಣಿಗಳನ್ನು ಸುಮ್ಮನೆ ಬಿಡುವ ಜಾಯಮಾನದವೂ ಅಲ್ಲ.*

*ಆಫ್ರಿಕಾದ ವಿಶಾಲ ಹುಲ್ಲುಗಾಡುಗಳಲ್ಲಿ ಆದಿವಾಸಿ ಜನರ ಹಾಗೂ ಆನೆಗಳ ಸಹಬಾಳ್ವೆ ಈಗಲೂ ನಡೆದೇ ಇದೆ. ತಮ್ಮ ಗುಂಪಿನೊಂದಿಗೆ ರಕ್ಷಣಾತ್ಮಕವಾಗಿ ಸೇರಿಕೊಳ್ಳುವ ಝೀಬ್ರಾಗಳಂತಹ ದುರ್ಬಲ ಸಹವಾಸಿಗಳನ್ನೂ ಒಪ್ಪಿಕೊಳ್ಳುವ ಸಹನಾಶೀಲತೆ ಇವಕ್ಕಿದೆ. ಅಷ್ಟೇ ಏಕೆ, ಈಗಲೂ ಬಂಡಿಪುರದ ಜೇನುಕುರುಬರದು ಆನೆಗಳ ಸಹವಾಸವೇ. ಅಪಾಯಕಾರಿಗಳಲ್ಲದ ಪರಿಸರಸ್ನೇಹಿ ಆದಿವಾಸಿಗಳನ್ನು ಗುರುತಿಸುವ ಶಕ್ತಿ ಹಾಗೂ ಸಹಿಸುವ ತಾಳ್ಮೆ ಅವಕ್ಕಿದೆ.*

*ಅದೆಲ್ಲಾ ಸರಿ, ಸಾವಿರಾರು ವರ್ಷಗಳ ಹಿಂದೆ ಹೀಗೆ ಬದುಕಿದ್ದ ದಖನ್ನಿನ ಆನೆಗಳನ್ನು ಖೆಡ್ಡಾಗಳಿಗೆ ನೂಕಿ, ಹಿಡಿದು ಪಳಗಿಸಿ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾ ಸಾಕುಪ್ರಾಣಿಯನ್ನಾಗಿಸಿಕೊಳ್ಳುವ ವಿಫಲ ಯತ್ನ ಮಾಡುತ್ತಾ ಅಲ್ಪಸಂಖ್ಯಾತಗೊಳಿಸಿ, ಪೂರ್ವ ಘಟ್ಟಗಳ ತಪ್ಪಲಿನಲ್ಲಿ ಒಂದಿಷ್ಟು ಕೂಡಿಹಾಕಿ, ಮತ್ತೊಂದಿಷ್ಟು ಆನೆಗಳನ್ನು ಮಲೆನಾಡು - ಪಶ್ಚಿಮ ಘಟ್ಟಗಳತ್ತ ನಿಧಾನವಾಗಿ ಹಾಗೂ ಶಾಶ್ವತವಾಗಿ ನೂಕಿ, ಅವುಗಳ ಪುರಾತನ ಅಲೆದಾಟ ಮಾರ್ಗ (ಕಾರಿಡಾರ್) ಗಳನ್ನು ಛಿದ್ರಗೊಳಿಸಿ ದ್ವಂಸ ಮಾಡಿದವರು ಯಾರು?*

*ಏರಿದ ಜನಸಂಖ್ಯೆಗೆ, ಆವರಿಸಿದ ಆಧುನಿಕ ಸುಖ ಭೋಗದ ತೆವಲಿಗೆ ಇಡೀ ದಕ್ಷಿಣಾವರ್ತವನ್ನೇ ವಶಪಡಿಸಿಕೊಂಡು ನಗರ, ಕೈಗಾರಿಕೆ, ಹೆದ್ದಾರಿ, ಅಣೆಕಟ್ಟು, ಕೃಷಿ ಎಂದು ಹಂಚಿಕೊಂಡ ನಾವು ಅವುಗಳ ಪಾಲು ಎಂದು ಉಳಿಸಿದ್ದೆಷ್ಟು?*

*ಹೀಗಿರುವಾಗ ಇನ್ನೂ ಹಿಡಿ ಹೊಡಿ ಬಡಿ ಎನ್ನುತ್ತಾ ಅರಬ್ಬಿ ಸಮುದ್ರಕ್ಕೆ ನೂಕಬೇಕೆ? ವಿಜ್ಞಾನ - ತಂತ್ರಜ್ಞಾನಗಳ ಮದವೇರಿಸಿಕೊಂಡ ನಾವು, ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಿಕೊಳ್ಳಬಲ್ಲೆವು ಎಂದು ಬೀಗುವ ನಾವು, ಸಹಜೀವಿಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೇ ಹೋದೆವೇ? ಅದೂ ಕೂಡಾ ನಾವೇ ಸೃಷ್ಟಿಸಿದ ಸಮಸ್ಯೆಗಳೇ ಅಲ್ಲವೇ?*

  *-- ಶ್ರೀನಿವಾಸ ಮೂರ್ತಿ*
      12/12/23

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...