Skip to main content

Blog number 3351. ಲಾರಾ ಇಂಗಲ್ಸ್ ಪುಸ್ತಕಗಳು

https://www.facebook.com/share/p/1BEYtmMyCm/

*ಲಾರಾಇಂಗೆಲ್ಸ್*

*#ಲಿಟಲ್_ಹೌಸ್_ಸೀರಿಸ್*

*ಪೂರ್ಣಚಂದ್ರ ತೇಜಸ್ವಿ ಪುಸ್ತಕ ಪ್ರಕಾಶನ ಪ್ರಕಟಿಸಿದ ಸರಣಿ ಪುಸ್ತಕಗಳು.*

*ಒಮ್ಮೆ ಓದಲು ಪುಟ ತೆರೆದರೆ ಕೊನೆಯ ಪುಟದವರೆಗೆ ಓದಿಸು ಕೊಂಡು ಹೋಗುವ ಪುಸ್ತಕ.*

  *ಲಾರಾ ಎಲಿಜಬೆತ್ ಇಂಗೆಲ್ಸ್ ವೈಲ್ಡರ್ ಅಮೆರಿಕಾದ ಪ್ರಖ್ಯಾತ ಸಾಹಿತಿ ಅವರ ಮನೆ ಸ್ಮಾರಕವಾಗಿ ಮಾಡಲಾಗಿದೆ.*


#laraingels ,#laraelijebethingels #littlehouse #americanwriters #purnachandratejaswi 
#redindians #uropean #migration #kannada #kannadanovels #swapnabookhouse #atreebooks #kuvempu 

  *1867ರಲ್ಲಿ ಜನಿಸಿದ ಇವರು ಚಿಕ್ಕವರಿದ್ದಾಗ ಇವರ ಕುಟುಂಬ ಸೂಕ್ತ ನೆಲೆಗಾಗಿ ಸೂಕ್ತ ಪರಿಸರ ಹುಡುಕಿ ವಲಸೆ ಹೋಗುವ ಆ ಸಂದರ್ಭದ ಪರಿಸರ ವಿಕೋಪಗಳು, ಅನುಭವಿಸಿದ ಕಷ್ಟ, ದೈರ್ಯಶಾಲಿ ತಂದೆಯ ಪರಿಶ್ರಮ, ಬುದ್ದಿವಂತ ತಾಯಿ ಕುಟುಂಬ ಸಲಹುತ್ತಾ ಮಕ್ಕಳಿಗೆ ಸಂಸ್ಕಾರವಂತರಾಗಿ ವಿದ್ಯಾವಂತರಾಗಿ ಮಾಡುವ ಆದಿನಗಳನ್ನು ಸ್ವತಃ ನೋಡಿದ ಬಾಲಕಿ ಲಾರಾ ಬರೆದ ಈ ಸರಣಿ 9 ಪುಸ್ತಕ ಪ್ರಸಿದ್ದವಾಗಿದೆ.*

   *ವಿಶ್ವದಾದ್ಯಂತ ಎಲ್ಲಾ ಭಾಷೆಗೂ ಅನುವಾದವಾಗಿದೆ ಇದನ್ನು 1965 ರಲ್ಲಿ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲು ಪ್ರಾರಂಬಿಸಿದವರು ಪ್ರೋಪೆಸರ್ ಎಸ್. ಅನಂತನಾರಾಯಣರು ಇದು ಕನ್ನಡದ ಓದುಗರ ಮನಸೆಳೆದಿತ್ತು ಮತ್ತು ಪ್ರಸಿದ್ದಿ ಪಡೆಯುತ್ತಿದ್ದಂತೆ ಅನಂತನಾರಾಯಣರ ಆಕಾಲ ನಿರ್ಗಮನದಿಂದಾಗಿ ಲಾರಾ ಅವರ ಕೃತಿ ಪೂರ್ತಿ ಪ್ರಕಟವಾಗಲಿಲ್ಲ, ಕೆಲಸ ಅರ್ಧಕ್ಕೆ ನಿಂತಿತ್ತು.*

 *ದಿವಂಗತ ಅನಂತನಾರಾಯಣರ ಶ್ರೀಮತಿಯವರ ಸಹಕಾರದಿಂದ ಪೂರ್ತಿ ಸರಣಿ 2000ದಲ್ಲಿ ತೇಜಸ್ವಿಯವರು ಅವರ ಪುಸ್ತಕ ಪ್ರಕಾಶನದಿಂದ ಪ್ರಕಟಿಸಿದರು.*

  *2006 ರಲ್ಲಿ ಬೆಂಗಳೂರಿನ ಗಾಂಧಿನಗರದ ಸ್ವಫ್ನಾ ಬುಕ್ ಹೌಸ್ ನಲ್ಲಿ ಈ ಸರಣಿಯ 9 ಪುಸ್ತಕಗಳನ್ನು ಖರೀದಿಸಿ ತಂದಿದ್ದೆ.*

 ಭಾಗ 1. ದೊಡ್ಡ ಕಾಡಿನ ಪುಟ್ಟ ಮನೆ.
ಭಾಗ 2. ಹುಲ್ಲುಗಾವಲಿನ ಪುಟ್ಟ ಮನೆ.
ಭಾಗ 3 ರೈತರ ಹುಡುಗ.
ಭಾಗ 4. ಪ್ಲಮ್ ನದಿಯ ತೀರದಲ್ಲಿ.
ಭಾಗ 5. ಸಿಲ್ವರ್ ಲೇಖ್ ದಡದಲ್ಲಿ,
ಭಾಗ 6. ಚಳಿಯ ಸುಳಿಯಲ್ಲಿ.
ಭಾಗ 7. ಹುಲ್ಲುಗಾವಲಿನಲ್ಲಿ ಪುಟ್ಟ ಮನೆ.
ಭಾಗ 8. ಆ ಸೊಗಸಿನ ಬಂಗಾರದ ದಿನಗಳು.
ಭಾಗ 9. ಮೊದಲ ನಾಲ್ಕು ವರ್ಷಗಳು.

  *1932-1943 ರಲ್ಲಿ ಈ ಪುಸ್ತಕಗಳು ಇಂಗ್ಲೀಷ್ ಬಾಷೆಯಲ್ಲಿ ಪ್ರಕಟವಾಗಿ ಸಾಹಿತ್ಯ ಲೋಕದಲ್ಲಿ ದೊಡ್ಡ ಅಲೆ ಸೃಷ್ಟಿಸಿತ್ತಂತೆ ಅದರ ಕನ್ನಡ ಅನುವಾದ ಕೂಡ ಅದ್ಬುತವಾಗಿದೆ.*

  *ಲಿಟಲ್ ಹೌಸ್ ಸೀರಿಸ್ ಟೀವಿ ಸೀರಿಯಲ್ ಆಗಿಯೂ ಪ್ರಸಿದ್ಧಿ ಪಡೆದಿದೆ.*

  *ಲಾರಾ ಇಂಗಲ್ಸ್ ವೈಲ್ಡರ್ ಬರಹಗಾರ್ತಿ - ಶಿಕ್ಷಕಿ - ಪತ್ರಕರ್ತೆ - ಕೃಷಿಕಳಾಗಿ 1957 ರಲ್ಲಿ ತಮ್ಮ 90ನೆ ವಯಸ್ಸಿನಲ್ಲಿ ಇಹಲೋಕ ತ್ಯಜಿಸುತ್ತಾರೆ.*

  *ಯುರೋಪಿನಿಂದ ಅಮೇರಿಕಾಗೆ ವಲಸೆ ಬಂದವರು ತಮ್ಮ ನೆಲೆಗಾಗಿ ಹೋರಾಡುವ, ಇವರಿಂದ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ನರ ಅಸಹಕಾರ, ಪರಿಸರದಲ್ಲಿ ಸಂಪೂರ್ಣ ಬರ್ಪ್ ಆಗಿ ಪರಿಸರ ವಿಕೋಪ, ಸ್ಥಳಿಯ ಆಡಳಿತಗಳ ರೀತಿ ನೀತಿಗಳು, ಸಮುದಾಯದಲ್ಲಿ ಸ್ಥಳಿಯ ಶಾಲೆ, ಚರ್ಚ್ ಗಳು ಹೀಗೆ ರಸವತ್ತಾದ ಈ ಕುಟುಂಬದ ನಿಜ ಕಥೆಯ ಜೊತೆ 18ನೆ ಶತಮಾನದ ಅಮೇರಿಕಾದ ಇತಿಹಾಸ ಈ ಒಂಬತ್ತು ಪುಸ್ತಕದಲ್ಲಿ ಓದುತ್ತಾ ಓದುತ್ತಾ ಅನುಭವಿಸುವ ಈ ಸರಣಿ ಪುಸ್ತಕ ನೀವು ಓದಲೇ ಬೇಕು.*

   ಇದನ್ನು ನೀವು ಈ ಕೆಳಕಂಡ ಲಿಂಕ್ ಮೂಲಕ ಖರೀದಿಸಬಹುದು.
https://www.sapnaonline.com/books/dodda-kadinalli-putta-mane-putta-ananthanarayana-s-1234009757-5551234009750

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...