#ಶಿವಮೊಗ್ಗ_ಮದುಲಾಯರ್
ಜಿ. ಮಧು- ಮಧುಗೋಪಾಲಸ್ವಾಮಿ -ಮಧುಲಾಯರ್ ಎಂದು ಜನ ಕರೆಯುವ ಜನಾನುರಾಗಿ ವಕೀಲರಾದ ಮದು ಲಾಯರ್ ನಮ್ಮನ್ನಗಲಿ ಎರಡು ವರ್ಷಗಳಾಯಿತು (3-ನವೆಂಬರ್-2022).
ಇದೇ ಬರುವ 13 ನೇ ತಾರೀಕು ಶುಕ್ರವಾರ ಅಂದರೆ 13 ಡಿಸೆಂಬರ್ 2024 ರ ಶುಕ್ರವಾರದಂದು ಶಿವಮೊಗ್ಗ ಜಿಲ್ಲಾ ವಕೀಲರ ಸಂಘದಲ್ಲಿ ಶಿವಮೊಗ್ಗದ ಖ್ಯಾತ ವಕೀಲರಾಗಿದ್ದ ಮದು ಲಾಯರ್ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮ ಆಹ್ವಾನ ಪತ್ರಿಕೆ ಬಂದಿದೆ.
ಅಧ್ಯಕ್ಷರು ಪದಾಧಿಕಾರಿಗಳು ಜಿಲ್ಲಾ ವಕೀಲರ ಸಂಘ, ಜಿ. ಮಧು ಕಿರಿಯ ವಕೀಲರ ಬಳಗ ಮತ್ತು ಮದು ಲಾಯರ್ ಕುಟುಂಬದ ವತಿಯ ಆಹ್ವಾನ ಪತ್ರಿಕೆ ಕಳಿಸಿದವರು ಶಿವಮೊಗ್ಗದ ಅನಂತದತ್ತ ವಕೀಲರು.
ಶಿವಮೊಗ್ಗ ಜಿಲ್ಲಾ ವಕೀಲರ ಸಂಘದಿಂದ ನಡೆಯುವ ಖ್ಯಾತ ವಕೀಲರಾಗಿದ್ದ ಮದು ಲಾಯರ್ ಬಾವ ಚಿತ್ರ ಅನಾವರಣ ಕಾರ್ಯಕ್ರಮ ಯಶಸ್ವಿಯಾಗಲಿ, ಮಧು ಲಾಯರ್ ನೆನಪು ಚಿರಸ್ಥಾಯವಾಗಿ ಉಳಿಯಲಿ ಎಂದು ಹಾರೈಸುತ್ತೇನೆ.
ಇಬ್ಬರೂ ಮುಖ್ಯಮಂತ್ರಿಗಳಾದವರೂ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಕೊಡುಗೆ ಇಂತಹ ಅನೇಕ ದಾಖಲೆಗಳ ಕಾರಣದಿಂದಲೇ ರಾಜ್ಯದಲ್ಲೇ ಶಿವಮೊಗ್ಗ ಜಿಲ್ಲಾ ವಕೀಲರ ಸಂಘ ಪ್ರತಿಷ್ಠಿತ ವಕೀಲರ ಸಂಘ ಎಂದು ಹೆಸರಾಗಿದೆ.
#shivamogga #DistrictAdvocate #ಜಿಲ್ಲಾವಕೀಲರಸಂಘ #BarAssociation #sbangarappa #kadidalmanjappa #badarinarayanayangar #Anandapuram #madhulayar #advocatehighcourt #advocate #ananthadatta #shivamoggacourt
ದಿನಾಂತ 13 - ಡಿಸೆಂಬರ್- 2024ರ ಶುಕ್ರವಾರ ಸಂಜೆ 6.30ಕ್ಕೆ ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯ ಜಿಲ್ಲಾ ನ್ಯಾಯಾಲಯದ ಆವರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದು ಶಿವಮೊಗ್ಗದ ಜಿಲ್ಲಾ ವಕೀಲರ ಸಂಘದಲ್ಲಿ ಹಿಂದಿನಿಂದಲೂ ನಡೆದು ಬಂದ ಒಂದು ಸಂಪ್ರದಾಯವಾಗಿದೆ.
ಶಿವಮೊಗ್ಗ ಜಿಲ್ಲಾ ವಕೀಲರ ಸಂಘದಿಂದ ನಡೆಯುವ ಖ್ಯಾತ ವಕೀಲರಾಗಿದ್ದ ಮದು ಲಾಯರ್ ಬಾವ ಚಿತ್ರ ಅನಾವರಣ ಕಾರ್ಯಕ್ರಮ ಯಶಸ್ವಿಯಾಗಲಿ, ಮಧು ಲಾಯರ್ ನೆನಪು ಚಿರಸ್ಥಾಯವಾಗಿ ಉಳಿಯಲಿ ಎಂದು ಹಾರೈಸುತ್ತೇನೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಾಗರದ ಕೋರ್ಟ್ ಮೊದಲಿಗೆ ಪ್ರಾರಂಭವಾಗಿದ್ದು ಆನಂದಪುರ0ನ ಪ್ರವಾಸಿ ಮಂದಿರದಲ್ಲಿ ಆಗ ಆನಂದಪುರಂ ತಾಲ್ಲೂಕು ಕೇಂದ್ರವಾಗಿತ್ತು.
ಸ್ಥಳೀಯರಾದ ಚಿವುಡಾ ಶೆಟ್ಟರು ಈ ನ್ಯಾಯಾಲಯದ ಪ್ರಥಮ ಸ್ಥಳೀಯ ವಕೀಲರು, ಇದು ಸ್ವತಂತ್ರ ಪೂರ್ವದ ನ್ಯಾಯಾಲಯ ಆಗಿತ್ತು ಆಗ ಚಿವುಡ ಶೆಟ್ಟರು ಆಗಿನ ಜನಪ್ರಿಯ ವಾಹನ ಕುದುರೆ ಸವಾರಿ ಮಾಡುತ್ತಿದ್ದರಂತೆ.
ಆಗ ಆನಂದಪುರಂನ ದೊಡ್ಡ ಭೂಮಾಲೀಕರು - ಇನಾಮ್ದಾರರು ಆಗಿದ್ದ ರಾಮಕೃಷ್ಣ ಅಯ್ಯಂಗಾರ್ ಕುಟುಂಬದ ವಕೀಲರಾಗಿದ್ದವರು ಕಡಿದಾಳ ಮಂಜಪ್ಪನವರು.
ನಂತರ ಅವರು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ,
ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರ್ ಅವರ ಆಪ್ತರಿಗೂ ಕಡಿದಾಳು ಮಂಜಪ್ಪನವರೇ ಕಾನೂನು ಸಲಹೆಗಾರರು ಆಗಿದ್ದರು ಆ ಕಾಲದಲ್ಲಿ ವಕೀಲರಾಗಿದ್ದ ಕಡಿದಾಳು ಮಂಜಪ್ಪನವರು ಬರೆದ ಕೆಲ ಪತ್ರಗಳು ಕೆಲ ಕುಟುಂಬದಲ್ಲಿ ಈಗಲೂ ಇದೆ.
ನಂತರ ರಾಮಕೃಷ್ಣ ಅಯ್ಯಂಗಾರ್ ಪುತ್ರರಾದ ಬದರಿನಾರಾಯಣ ಅಯ್ಯಂಗಾರ್ ವಕೀಲಿ ವೃತ್ತಿಯನ್ನು ಶಿವಮೊಗ್ಗದ ನ್ಯಾಯಾಲಯದಲ್ಲಿ ಪ್ರಾರಂಬಿಸಿ ಶಿವಮೊಗ್ಗದ ಪ್ರಸಿದ್ಧ ವಕೀಲರಾಗುತ್ತಾರೆ.
ಮುಂದೆ ರಾಜ್ಯದ ವಿದ್ಯಾಮಂತ್ರಿಯಾಗುತ್ತಾರೆ ಮತ್ತು ಸಂಸದರೂ ಆಗುತ್ತಾರೆ ಅವರ ಭಾವಚಿತ್ರ ಕೂಡ ಶಿವಮೊಗ್ಗದ ವಕೀಲರ ಸಂಘದ ಸಂಘದಲ್ಲಿ ಅನಾವರಣ ಮಾಡಲಾಗಿದೆ.
ಬದರಿ ನಾರಾಯಣ್ ಅಯ್ಯಂಗಾರ್ ವಕೀಲಿ ವೃತ್ತಿ ಬಿಡಲು ಒಂದು ಘಟನೆ ಕಾರಣವಾಗುತ್ತದೆ....ಅವರು ಆಗಿನ ಕಾಲದಲ್ಲಿ ಒಂದು ಕೊಲೆ ಕೇಸಿನಲ್ಲಿ ಅಪರಾಧಿಯ ಪರವಾಗಿ ವಾದಿಸಿ ಅಪರಾಧಿ ನಿರಪರಾಧಿ ಎಂದು ಬಿಡುಗಡೆ ಮಾಡಿಸುತ್ತಾರೆ.
ಆದರೆ ತೀರ್ಪಿನ ದಿನ ಅವರಿಗೆ ತಾನು ಬಿಡುಗಡೆ ಮಾಡಲು ಪ್ರಯತ್ನಿಸಿದ ಅಪರಾಧಿ ನಿರಪರಾಧಿಯಲ್ಲ ನಿಜವಾದ ಕೊಲೆಗಾರ ಎಂಬುದು ಗೊತ್ತಾಗುತ್ತದೆ ಇದರಿಂದ ನೊಂದ ಆ ಕುಟುಂಬದವರು ರೋಧಿಸುವುದನ್ನ ನೋಡಿ ಬದರಿ ನಾರಾಯಣ ಅಯ್ಯಂಗಾರ್ ಅವರಿಗೆ ಭ್ರಮನಿರಸನ ಆಗುತ್ತದೆ ಇದರಿಂದ ತಮ್ಮ ವಕೀಲಿ ವೃತ್ತಿಯನ್ನ ಕೈ ಬಿಡುತ್ತಾರೆ.
ಶಿವಮೊಗ್ಗದ ಪ್ರತಿಷ್ಠಿತ ವಕೀಲರ ಸಂಘದಲ್ಲಿ ಕಡಿದಾಳು ಮಂಜಪ್ಪನವರು, ಬಂಗಾರಪ್ಪನವರ ಬಾವಚಿತ್ರಗಳೂ ಅನಾವರಣ ಆಗಿದೆ ಇದು ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಒಂದು ದಾಖಲೆ ಮತ್ತು ಇತಿಹಾಸವೇ ಆಗಿದೆ.
ಇಬ್ಬರೂ ಮುಖ್ಯಮಂತ್ರಿಗಳಾದವರೂ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಕೊಡುಗೆ ಇಂತಹ ಅನೇಕ ದಾಖಲೆಗಳ ಕಾರಣದಿಂದಲೇ ರಾಜ್ಯದಲ್ಲೇ ಶಿವಮೊಗ್ಗ ಜಿಲ್ಲಾ ವಕೀಲರ ಸಂಘ ಪ್ರತಿಷ್ಠಿತ ವಕೀಲರ ಸಂಘ ಎಂದು ಹೆಸರಾಗಿದೆ.
Comments
Post a Comment