Skip to main content

Blog number 3363. ಗಣಪೆ ಕಾಯಿ ಮಾಹಿತಿ

https://www.facebook.com/share/p/15caRcBcPZ/

*#ಗಣಪೆಕಾಯಿ*

      *ನನ್ನ  ಗಣಪೇ ಕಾಯಿ ಖಾದ್ಯದ ಲೇಖನ ಹೆಚ್ಚು ಜನರಿಗೆ ತಲುಪಿದೆ.*

     *ನನ್ನ ಗಣಪೆಕಾಯಿ  ಲೇಖನ ಓದಿ ಪ್ರತಿಕ್ರಿಯಿಸಿದವರು ಅನೇಕರು.*

   *#ಗುರುಬಸಪ್ಪ_ಮತ್ತಿಹಳ್ಳಿ ಪ್ರತಿಕ್ರಿಯಿಸಿ ಹೆಚ್ಚಿನ ಮಾಹಿತಿ ಬರೆಯಿರಿ ಎಂದಿದ್ದಾರೆ.*


       *ಮಂಗಳೂರಿನ ಅತ್ರಿ ಬುಕ್ ಹೌಸಿನ ಸಾಹಸಿ #ಅಶೋಕವರ್ಧನ್ ಮಂಗಳೂರಿನಲ್ಲಿ ತಮ್ಮ ನೈಸರ್ಗಿಕ ಕಾಡು ಬೆಳೆಸುವಲ್ಲಿ 15 20 ವರ್ಷದ ಹಿಂದೆ ನೆಲಕ್ಕೆ ಊರಿದ ಗಣಪೆ ಬೀಜ  ಈಗ ಬೃಹತ್ ಬಳ್ಳಿ ಆಗಿ ಅರ್ಧ ಎಕರೆ ವಿಸ್ತರಿಸಿರುವ ಪೋಟೋ ಕಳಿಸಿದ್ದಾರೆ ಅದರ ಬೀಜಗಳನ್ನು ತಂದು ಅವರ ಇನ್ನೊಂದು ನೈಸರ್ಗಿಕ ಕಾಡು ಅಶೋಕ ವನದಲ್ಲಿ ಹರಡಿದ್ದಾರಂತೆ ಈ ಫೋಟೋ ಲಗತ್ತಿಸಿದ್ದೇನೆ.*

        *ತೀರ್ಥಹಳ್ಳಿಯ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ #ಸುಮಿತ್ರ_ಎಲ್_ಸಿ.  ಬಾಲ್ಯದಲ್ಲಿ ಅವರ ಮನೆಯ ಸಮೀಪದಲ್ಲಿ ಗಣಪೆ ಕಾಯಿ ಬಳ್ಳಿ ಇದ್ದ ಬಗ್ಗೆ ಮತ್ತು ಅದರ ತಿರುಳನ್ನು ಜಾನುವಾರುಗಳಿಗೆ ಬಳಸುತ್ತಿದ್ದನ್ನು ಬರೆದಿದ್ದಾರೆ.*

         *ಹಿರಿಯ ಪತ್ರಕತ೯ರಾದ #ಅರುಣ್_ಕುಮಾರ್_ಹಬ್ಬು ಬಾಲ್ಯದಲ್ಲಿ ಇದನ್ನು ಆಟವಾಡಲು ಬಳಸಿದ ಬಗ್ಗೆ ನೆನಪು ಬರೆದಿದ್ದಾರೆ.*

   *#ಅಣ್ಣಪ್ಪಮೆಳವರಿಗೆ ಅವರು ಇದನ್ನು ಮಧ್ಯದಲ್ಲಿ ರಂಧ್ರಕೊರೆದು ಹಾರವನ್ನು ಮಾಡಿ ಜಾನುವಾರುಗಳಿಗೆ ಹಾಕುವುದನ್ನು ನೆನಪು ಮಾಡಿದ್ದಾರೆ ಮತ್ತು ಇದು ದ್ವಿದಳ ಧಾನ್ಯದಲ್ಲಿ ಅತ್ಯಂತ ದೊಡ್ಡ ಗಾತ್ರದ ಧಾನ್ಯ ಎನ್ನುವುದನ್ನು ಗುರುತಿಸಿದ್ದಾರೆ.*

  *ನಮ್ಮೂರಿನ ಸಹೋದರಿ ಬೆಂಗಳೂರಿನಲ್ಲಿ ನೆಲೆಸಿದ #ಲೀಲಾಸುರೇಶ್ ಇದು ಅತ್ಯಂತ ರುಚಿಕರ ಮತ್ತು ಅಷ್ಟೇ ಕಹಿ ಎಂದಿದ್ದಾರೆ.*

   *ಸಾಗರದ #ನಾಗಾರ್ಜುನ್ ಅವರು ಇದನ್ನು ತಿನ್ನುತ್ತಾರೆ ಎನ್ನುವುದು ಇವತ್ತೇ ಗೊತ್ತಾಯ್ತು ಎಂದಿದ್ದಾರೆ.*

   *ಗೋಕರ್ಣದ #ಗೋಪಾಲ್_ಎಸ್_ಗಾಯತ್ರಿ ಇದನ್ನು ಬಾಣಂತಿಯರ ಮದ್ದುಗಳಾಗಿ ಬಳಸುವ ಬಗ್ಗೆ ಮತ್ತು ಅಘನಾಶಿನಿ ನದಿ ಇದನ್ನು ಸಮುದ್ರಕ್ಕೆ ತಂದು ಹಾಕುತ್ತಿದ್ದದ್ದು ಅದನ್ನು ಸಮುದ್ರದ ದಡದಲ್ಲಿ ಆಟವಾಡಲು ಇವರು ಸಂಗ್ರಹಿಸುತ್ತಿದ್ದನ್ನು ನೆನಪು ಮಾಡಿದ್ದಾರೆ.*

   *#ರಘುಸುಳ್ಳೂರು ಇದನ್ನು ಹಸಿ ಕಾಯಿ ಇದ್ದಾಗಲೇ ಬಳಸುವುದು ರುಚಿಕರ ಎಂದಿದ್ದಾರೆ.*

   *#ಲೋಕೇಶ್_HN ಇದರ ಸ್ವಾದ ನೆನಪು ಮಾಡಿದ್ದಾರೆ.*

    *ಪತ್ರಕತ೯ರಾದ #ಜಗದೀಶ್_ಸಂಪಳ್ಳಿ ಇದರ ರುಚಿಕರ ಖಾದ್ಯವನ್ನು ನೆನಪು ಮಾಡಿಕೊಂಡಿದ್ದಾರೆ.*

    *ಬಹಳಷ್ಟು ಜನ ಪ್ರತಿಕ್ರಿಯಿಸಿದ್ದಾರೆ ಅನೇಕರಿಗೆ ಇದರ ಬಗ್ಗೆ ಗೊತ್ತೇ ಇಲ್ಲ.*
  
      *ಗಣಪೆ ಕಾಯಿ ಗೊತ್ತಿರುವವರಿಗೂ ಇದನ್ನು ತಿನ್ನುತ್ತಾರೆ ಎಂಬುದು ಗೊತ್ತೇ ಇಲ್ಲ.*

     *ಭಾರತೀಯರು ಇದಕ್ಕೆ 2,000 ವರ್ಷಕ್ಕಿಂತ ಹಿಂದೆಯೇ ಗಣಪೇ ಕಾಯಿ ಎಂದು ಇದಕ್ಕೆ ನಾಮಕರಣ ಮಾಡಿದ್ದಾರೆ.*

      *ಗಣಪೆ ಕಾಯಿ ಎಂಬ ಹೆಸರು ಇದಕ್ಕೆ ಬರಲು ಕಾರಣ ಇದು ಮೊಳಕೆ ಒಡೆದಾಗ ಸೊಂಡಿಲು ರೀತಿ ಕಾಣುತ್ತದೆ, ಇದು ಗಣಪತಿಯ ರೂಪ ತಾಳುತ್ತದಾದ್ದರಿಂದ ಇದಕ್ಕೆ  ಗಣಪೆ ಕಾಯಿ ಎಂದು ಅರಣ್ಯ ವಾಸಿಗಳು ಕರೆದಿದ್ದಾರೆ.*

     *ಗಣಪತಿಗೆ ಅರಣ್ಯವಾಸಿಗಳು ಗಣಪ ಎಂದು ಕರೆಯುವುದು ನಂತರ ಗಣಪೆ ಆಗಿರಬೇಕು.*

      *ಭಾರತದ ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ಈ ಬೃಹತ್ ಗಣಪೇಕಾಯಿ ಬಳ್ಳಿಗಳು ಹೆಚ್ಚಾಗಿ ಇದೆ.*

        *ಭಾರತೀಯರು ಅನೇಕ* *ಶತಮಾನಕ್ಕಿಂತ ಮುಂಚಿನಿಂದಲೂ ಇದನ್ನು ಔಷಧಿಯಾಗಿ ಆಭರಣದ ರೀತಿ ಮತ್ತು ಆಹಾರವಾಗಿ*
*ಬಳಸುತ್ತಿದ್ದಾರೆ.*

       *ಇದು ಗರಿಷ್ಠ 390 ಅಡಿ ಉದ್ದದವರೆಗೆ ಬೆಳೆಯುತ್ತದಂತೆ, ಈ ಬಳ್ಳಿ ಕಾಂಡದ ಗಾತ್ರ ಆನೆ ಕಾಲಿನ ದಪ್ಪ ಎನ್ನುತ್ತಾರೆ.*

      *ಇನ್ನೊಂದು ವಿಶೇಷ ಇದು ನೀರಿನಲ್ಲಿ ಮುಳುಗುತ್ತದೆ ಮತ್ತು ಬೀಜದ ಹೊದಿಕೆ ದಪ್ಪ ಆದ್ದರಿಂದ ದೀರ್ಘಕಾಲದ ಬಾಳಿಕೆ ಇದೆ ಈ ಬೀಜಕ್ಕೆ.*

       *ಇದಕ್ಕೆ ವೈಜ್ಞಾನಿಕವಾಗಿ ನಾಮಕರಣ ಮಾಡಿದವರು ಹೆಂಡ್ರಿಕ್ ಆಡ್ರಿಯನ್ ಟ್ಯಾನ್ ಲೀಡೆ ಟಾಟ್ ಡ್ರೈ ಕೆಸ್ಟೈನ್(1637-1691).*

        *ಇದಕ್ಕೆ ಅವರು ನಾಮಕರಣ* *ಮಾಡಿದ ಬೊಟಾನಿಕಲ್ ನೇಮ್* *#ENTADA_RHEEDI (ಎಂಟಡ ರೀಡಿ ).*

       *ಇದಕ್ಕೆ ಇನ್ನೊಂದು ಹೆಸರು ಇದೆ ಆಫ್ರಿಕನ್ ಡ್ರೀಮ್ ಹರ್ಬ (African dream herb) ಅಂತ.*

      *ಈ ಹೆಸರು ಬರಲು ಕಾರಣ ಆಫ್ರಿಕಾದ ಬುಡಕಟ್ಟು ಜನರು ಇದರ ಒಳಗಿನ ತಿರುಳು ತಂಬಾಕಿನಂತಹ ಗಿಡಮೂಲಿಕೆ ಜೊತೆ ರಾತ್ರಿ ನಿದ್ದೆಯ ಮೊದಲು ಧೂಮಪಾನ ಮಾಡಿದರೆ ಕನಸುಗಳು ಬೀಳುತ್ತದೆ ಎಂದು ಆಫ್ರಿಕನ್ ಜನ ಇದನ್ನು ಬಳಸುತ್ತಾರೆ.*

     *ಇದನ್ನು ನಾವು ಕನ್ನಡದಲ್ಲಿ ಗಣಪೇ ಕಾಯಿ ಎನ್ನುತ್ತೇವೆ.*

*ನನ್ನ ಹಿಂದಿನ FB ಲೇಖನ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿನೋಡಿ ಅದರಲ್ಲಿ ಗಣಪೆಕಾಯಿ ಖಾದ್ಯದ ರೆಸಿಪಿ ಇದೆ*
https://www.facebook.com/share/p/15JshsUEy3/

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...