#ಇವತ್ತಿನ_ನನ್ನ_ವಿಶೇಷ_ಅತಿಥಿಗಳು.
https://youtu.be/DvNru8UzWqE?si=ZcVsNXu_0zUHBciF
ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ಪಿತಾಮಹಾ ಮುಂಡಿಗೆಸರ ಮಂಜಪ್ಪರ ಪುತ್ರ ರಾಮಮೂರ್ತಿ.
ಇವರು ಸಂಶೋಧಿಸಿದ ಮಾದರಿಯಲ್ಲಿ ಈಗಾಗಲೇ 15 ಸಾವಿರಕ್ಕೂ ಹೆಚ್ಚು ಯಂತ್ರ ತಯಾರಿಸಿ ಮಾರಾಟ ಮಾಡಿದ ಕಾರ್ಪೋರೇಷನ್ ಬ್ಯಾಂಕ್ ಸ್ಥಾಪಕ ಹಾಜಿ ಬುಡನ್ ಅಬ್ಬಲ್ಲಾ ಸಾಹೇಬರ ಮರಿ ಮಗ ಯಾಸೀನ್.
ಉಡುಪಿ ಯೋಜನ್ ಅಡಿಕೆ ಯಂತ್ರದ ಸಹಯೋಗಿ ತೀರ್ಥಹಳ್ಳಿಯ ಅಡಿಕೆ ಬೆಳೆಗಾರ ರಘು.
ಶಿವಮೊಗ್ಗ ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ರಾಜೇಂದ್ರ ಮತ್ತು ಕೋಣಂದೂರು ಜಾನ್
ಮುಂಗರವಳ್ಳಿ ಮಂಜಪ್ಪನವರು 1964ರಲ್ಲೇ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಅವಿಷ್ಕಾರ ಮಾಡಿದ್ದರು.
ಆ ಮೂಲ ಯಂತ್ರ ನಿಮಿಷಕ್ಕೆ ಒಂದು ಅಡಿಕೆ ಸಿಪ್ಪೆ ಸುಲಿಯುವ ಮೊದಲ ಯಂತ್ರ.
ವೇಗವಾಗಿ ಅಡಿಕೆ ಸಿಪ್ಪೆ ಸುಲಿಯುವ ಸುದಾರಿತ ಯಂತ್ರ ಮಾಡುವ ಸಂಶೋಧನೆ ಅನೇಕ ವರ್ಷ ಮಾಡುತ್ತಿದ್ದರು.
ಈ ಅಡಿಕೆ ಯಂತ್ರದ ಸಂಶೋಧನೆ ವಿವಿಧ ಹಂತಗಳನ್ನು ನೋಡಿದವರು ಕೆ ವಿ ಸುಬ್ಬಣ್ಣ ಮತ್ತು ಖ್ಯಾತ ಸಾಹಿತಿ ಶಿವರಾಮ ಕಾರಂತರು.
ಹೆಗ್ಗೋಡಿಗೆ ಬಂದಾಗೆಲ್ಲ ಶಿವರಾಮ ಕಾರಂತರು ಕೆವಿ ಸುಬ್ಬಣ್ಣನವರ ಜೊತೆ ಮುಂಗರವಳ್ಳಿಯ ಮಂಜಪ್ಪನವರ ಮನೆಗೆ ಬಂದು "ಮಂಜಪ್ಪ ನಿನ್ನ ಅಡಿಕೆ ಮಿಷನ್ ಎಲ್ಲಿ ತನಕ ಬಂತು" ಎಂದು ವಿಚಾರಿಸಿ,ಸ್ವತಃ ಅದರ ಕಾರ್ಯವಿಧಾನಗಳನ್ನು ವೀಕ್ಷಿಸುತ್ತಿದ್ದರಂತೆ.
ಈಗ ಮುಂಗರವಳ್ಳಿ ಮಂಜಪ್ಪನವರು ಇಲ್ಲ ಮಗ ರಾಮಮೂರ್ತಿ ಇದ್ದಾರೆ.
ಅವರ ಎದುರಿನಲ್ಲಿ ಇವರದೇ ಮೂಲ ಯಂತ್ರದ ಮಾದರಿ ಬಳಸಿ ಯಂತ್ರ ತಯಾರಿಸಿ ಮಾರಾಟ ಮಾಡುವ ಉದ್ದಿಮೆದಾರರೊಬ್ಬರನ್ನ ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ಪಿತಾಮಹ ಎಂದು ಸನ್ಮಾನಿಸಿದ್ದು ಇವರಿಗೆ ಮರೆಯಲಾಗದ ನೋವು.
ಆದರೆ ಆ ನೋವು ಹೆಚ್ಚು ದಿನ ಉಳಿಯದಂತೆ ಒಂದು ಪವಾಡವೇ ನಡೆಯುತ್ತದೆ ಅದೇನಂದರೆ ಕಾರ್ಪೊರೇಷನ್ ಬ್ಯಾಂಕಿನ ಸ್ಥಾಪಕರಾದ ಉಡುಪಿ ಹಾಜಿ ಬುಡನ್ ಅಬ್ದುಲ್ಲಾ ವಂಶಸ್ಥರಾದ ಯಾಸಿನ್ ರದ್ದು ಸ್ವಂತದಾದ ದೊಡ್ಡ ವರ್ಕ್ ಶಾಪ್ ಹೊಂದಿದ ಉಡುಪಿಯ ಉದ್ಯಮಿ.
ಇವರ ವರ್ಕ್ ಶಾಪ್ ನಲ್ಲೇ ಇವರೇ ತೀರ್ಥಹಳ್ಳಿಯವರಿಗಿ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ತಯಾರಿಸಿ ಕೊಡುತ್ತಿದ್ದವರು.
ಇವರಿಗೆ ಈ ಯಂತ್ರದ ಮೂಲ ಸಂಶೋದಕರ ಬಗ್ಗೆ ಮಾಹಿತಿ ಇರಲಿಲ್ಲ.
ತೀರ್ಥಹಳ್ಳಿಯ ಸಂಸ್ಥೆ ಇವರ ಜೊತೆಯ ತಯಾರಿಕ ಕರಾರು ರದ್ದು ಮಾಡಿಕೊಂಡ ನಂತರ.
ಇವರು ಮುಂಗರವಳ್ಳಿ ಮಂಜಪ್ಪ ಮತ್ತು ಮಗ ರಾಮಮೂರ್ತಿಯವರ ಮಾದರಿ ಅವರ ಅನುಮತಿ ಬಳಸಿ ಅಡಿಕೆ ಸಿಪ್ಪೇ ಸುಲಿಯುವ ಯಂತ್ರಗಳ ತಯಾರಿಗೆ ಮುಂದಾಗುತ್ತಾರೆ.
ಅವರಿಗೆ ಶಿವಮೊಗ್ಗ ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿದ್ದ ರಾಜೇಂದ್ರ ತೀರ್ಥಹಳ್ಳಿ ಮತ್ತು ರಘು ನೈತಿಕ ಬೆಂಬಲ ಸಹಕಾರ ನೀಡುತ್ತಾರೆ.
ಇದಕ್ಕೆ ಕಾರಣ ಇಂತಹ ಯಂತ್ರ ತಯಾರಿಸುವ ತೀರ್ಥಹಳ್ಳಿಯ ಸಂಸ್ಥೆ ರೈತರಿಗೆ ಸರಿಯಾಗಿ ಸರ್ವಿಸ್ ನೀಡದಿದ್ದನ್ನು ರೈತ ಪರ ಕಾಳಜಿಯ ರೈತ ಸಂಘದ ರಾಜೇಂದ್ರ ಅವರ ಕೋಪಕ್ಕೆ ಬೇಸರಕ್ಕೆ ಕಾರಣವಾಗಿತ್ತು.
ಈಗ ಉಡುಪಿಯ #ಯೋಜನ್_ಅಡಿಕೆ_ಸಿಪ್ಪೆ_ತೆಗೆಯುವ_ಯಂತ್ರ ಸಂಪೂರ್ಣವಾಗಿ ಸಾಗರ ತಾಲೂಕಿನ ಮುಂಗರವಳ್ಳಿಯ ಮಂಜಪ್ಪ ಮತ್ತು ಮಗ ರಾಮಮೂರ್ತಿಯವರ ಮೂಲ ಮಾದರಿ ಮತ್ತು ಅವರ ಸಹಕಾರದೊಂದಿಗೆ ತಯಾರಾಗಿ ಮಾರಾಟವಾಗುತ್ತಿದೆ.
ಇದರ ಬಗ್ಗೆ ಅಡಿಕೆ ಬೆಳೆಗಾರರಲ್ಲಿ ಗುಡ್ ವಿಲ್ ಸೃಷ್ಟಿಯಾಗಿದೆ ಮತ್ತು ಇನ್ನೊಂದು ವಿಶೇಷ ಎಂದರೆ ಈಗಾಗಲೇ ಸುಮಾರು ಇಂತಹ 15 ಸಾವಿರ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಅಡಿಕೆ ಬೆಳೆಗಾರರ ಮನೆಗಳನ್ನು ತಲುಪಿದೆ.
ಈಗಲೂ ರಾಮಮೂರ್ತಿ ಉಡುಪಿ ಯೋಜನ್ ಸಂಸ್ಥೆಯವರ ಜೊತೆ ಸೇರಿ ಆರ್ ಎನ್ ಡಿ (R & D) ಕೆಲಸ ಮಾಡುತ್ತಾ ಇದ್ದಾರೆ ಇದರಿಂದ ವರ್ಷದಿಂದ ವರ್ಷಕ್ಕೆ ಈ ಯಂತ್ರದ ಸುಧಾರಿತ ಮಾದರಿಗಳು ಅಡಿಕೆ ಬೆಳೆಗಾರರಿಗೆ ಸಹಾಯಕವಾಗಿದೆ.
ನಿನ್ನೆ ಸಾಗರ ತಾಲೂಕಿನ ಒಂದು ಕೆಲಸಕ್ಕಾಗಿ ಉಡುಪಿಯಿಂದ ಯೋಜನೆ ಸಂಸ್ಥೆಯ ಮಾಲೀಕ #ಕಾರ್ಪೊರೇಷನ್_ಬ್ಯಾಂಕಿನ ಸ್ಥಾಪಕ #ಹಾಜಿಬುಡನ್_ಅಬ್ದುಲ್ಲಾ ಅವರ ಮರಿ ಮಗ #ಯಾಸಿನ್ ಬರುವುದಿದ್ದರಿಂದ ಅವರ ಜೊತೆ #ಮುಂಗರವಳ್ಳಿರಾಮಮೂರ್ತಿ ತೀರ್ಥಹಳ್ಳಿಯಿಂದ ರೈತ ಸಂಘದ #ರಾಜೇಂದ್ರ, ಕೋಣಂದೂರಿನ #ಜಾನ್ ಮತ್ತುತೀರ್ಥಹಳ್ಳಿಯ ದೊಡ್ಡ ಅಡಿಕೆ ಬೆಳೆಗಾರ ಮತ್ತು ಈ ಯೋಜನ್ ಸಂಸ್ಥೆಯ ಸಹಯೋಗಿ #ರಘು ನನ್ನ ಆಫೀಸಿಗೆ ಬಂದಿದ್ದರು.
ಅವರಿಗೆ ನಮ್ಮ ಸಂಸ್ಥೆಯ ವತಿಯಿಂದ ನಮ್ಮ ತಾಲೂಕಿನ ಅಡಿಕೆ ಪಿತಾಮಹ ರಾಮಮೂರ್ತಿ ಮತ್ತು ಅವರ ಯಂತ್ರ ಮಾರುಕಟ್ಟೆಗೆ ತಂದ ಉಡುಪಿ ಯೋಜನ್ ಸಂಸ್ಥೆಯ ಯಾಸಿನ್ ಅವರಿಗೆ ಸಂತೋಷದಿಂದ ಸನ್ಮಾನಿಸಿದೆ.
ಇವರ ಜೊತೆ ನಡೆಸಿದ ಮಾತುಕತೆಯ ಸಂದರ್ಶನ ಮುಂದಿನ ಭಾಗಗಳಲ್ಲಿ ಪ್ರಕಟಿಸಲಿದ್ದೇನೆ.
Comments
Post a Comment