#ಹಸೆ_ಚಿತ್ತಾರಗಳು....
"ನಾನು ಇಂದು ನಿಮ್ಮ ಹೊಂಬುಜ ರೆಸಿಡೆನ್ಸಿ ಗೆ ಭೇಟಿ ಕೊಟ್ಟಿದ್ದೆ...ಹೊರಗಿನ ಚಿತ್ತಾರಗಳು ಚಂದವಾಗಿವೆ...feel happy 😊"
ಈ ರೀತಿ ಸಂದೇಶ ಕಳಿಸಿದವರು #ಗುರುಪ್ರಸಾದ್_ಕಂಚಿ ಅವರ ಮತ್ತು ನನ್ನ ಬೇಟಿ ಆಗಲಿಲ್ಲ.
#ಹಸೆಚಿತ್ರ #ಮಲೆನಾಡು #ಹೆಗ್ಗೋಡು
ಅವರು ನಮ್ಮ ಲಾಡ್ಜ್ ಗೋಡೆಗಳ ಮೇಲೆ ಹೆಗ್ಗೋಡಿನ ನೀನಾಸಂನಲ್ಲಿ ಕಾರ್ಯನಿರ್ವಹಿಸಿದ #ಭಾಗೀರಥಿ (ಈಗ ಸಾಗರದ ಜೋಗ್ ರಸ್ತೆಯಲ್ಲಿ #ಖಾದಿಮನೆ ನಡೆಸುತ್ತಿದ್ದಾರೆ) ಅವರು ಮತ್ತು ಅವರ ಜೊತೆಗಾರ್ತಿ #ಸುಶೀಲಮ್ಮ ಬಿಡಿಸಿದ ಹಸೆ ಚಿತ್ತಾರವನ್ನ ಇಷ್ಟಪಟ್ಟಿದ್ದಾಗಿ ತಿಳಿಸಿ ಫೋಟೋ ತೆಗೆದು ಕಳಿಸಿದ್ದಾರೆ.
ಈ ಹಸೆ ಚಿತ್ತಾರವನ್ನು ಅನೇಕ ಪ್ರವಾಸಿಗಳೂ ಕೂಡ ನೋಡಿ ಇಷ್ಟ ಪಡುತ್ತಾರೆ ಈ ಚಿತ್ರಗಳ ಎದುರು Selfi ಕೂಡ ತೆಗೆದು ಕೊಳ್ಳುತ್ತಾರೆ.
ಪಶ್ಚಿಮ ಘಟ್ಟದ ಮಲೆನಾಡಿನ ಹಸೆ ಚಿತ್ತಾರಕ್ಕೆ ನನ್ನ ಸಂಸ್ಥೆಯಲ್ಲಿ ಅವಕಾಶ ಕಲ್ಪಿಸಿದ್ದರಿಂದ ಅನೇಕರು ಅಭಿನಂದಿಸುತ್ತಾರೆ.
ಮುಂದೆ ಯಾವಾಗ ಬಂದರೂ ನನ್ನ ಬೇಟಿ ಮಾಡಿ ಎಂದು ಗುರುಪ್ರಸಾದ್ ಕಂಚಿ ಅವರಿಗೆ ತಿಳಿಸಿದ್ದೇನೆ.
ಅವರ ಪ್ರೋತ್ಸಾಹದ ಮಾತುಗಳಿಗೆ ದನ್ಯವಾದಗಳು.
Comments
Post a Comment