#ಕಾಡುಗೆಣಸು
ಅಲೆಮಾರಿ ಬುಡಕಟ್ಟು ಜನಾಂಗಗಳು.
ವಷ೯ಕ್ಕೆ ಎರೆಡು ಬಾರಿ ಕಾಡು ಗೆಣಸು ಕಾಡಿನಿಂದ ಕಿತ್ತು ತಂದು ತಿನ್ನಿಸುವ ಹಾವು ಗೊಲ್ಲ ಮಿತ್ರರು
ಹಾವು ಗೊಲ್ಲರು ಈಗ ಅಲೆಮಾರಿಗಳ ಜೀವನದಿಂದ ಅರೆ ಅಲೆಮಾರಿಗಳಾಗಿದ್ದಾರೆ.
ರಾಜರ ಕಾಲದಲ್ಲಿ ಅನೇಕ ಅಲೆಮಾರಿ ಬುಡಕಟ್ಟು ಜನಾಂಗದವರನ್ನ ರಾಜ ತನ್ನ ಅನೇಕ ಆಡಳಿತ ವಿಚಾರಗಳಿಗೆ ಬಳಕೆ ಮಾಡುತ್ತಿದ್ದರು.
ಆದ್ದರಿಂದ ಪ್ರತಿ ವರ್ಷ ಮಳೆಗಾಲದ ಮುನ್ನ ಕೆಳದಿ ರಾಜರ ಆನಂದಪುರಂ ಕೋಟೆ ಎದರು ಈ ಎಲ್ಲಾ ಜನಾಂಗಗಳು ಬಂದು ಸೇರಿ ಮಳೆಗಾಲ ಕಳೆದ ನಂತರ ಪುನಃ ತಮ್ಮ ಸಂಚಾರಕ್ಕೆ ಹೊರಡುತ್ತಿದ್ದರು.
#tribals #snakerescue #Cowards #sidda #sudugadusidda #korama #dombaru #keladi #Anandapuram #malenadu #ಅಲೆಮಾರಿ #ಬುಡಕಟ್ಟು #Kings #army
90 ರ ದಶಕದ ತನಕ ನಮ್ಮ ಆನಂದಪುರಂನ ಕೆಳದಿ ಅರಸರ ಕೋಟೆ ಎದುರಿನ ಕೆರೆ ಮತ್ತು ಆನಂದಪುರಂ ಕಾಲೇಜು ಎದುರಿನ ಬಯಲು (ಈಗ ಅಲ್ಲಿ ಹಾಸ್ಟೆಲ್ - ಪೆಟ್ರೋಲ್ ಬಂಕ್ - ಪೋಲಿಸ್ ಠಾಣೆ ಆಗಿದೆ) ಪ್ರದೇಶದಲ್ಲಿ ವರ್ಷವಿಡಿ ಸಂಚರಿಸುವ ಅಲೆಮಾರಿ ಬುಡಕಟ್ಟು ಜನಾಂಗದವರೆಲ್ಲ ಮಳೆಗಾಲದ ಮುನ್ನ ಬಂದು ತಂಗುವ ಖಾಯಂ ಜಾಗವಾಗಿತ್ತು.
ಇದು ಸುಮಾರು ಶತಮಾನಗಳಿಂದ ನಡೆದು ಕೊಂಡು ಬಂದ ಪದ್ದತಿ ಆಗಿತ್ತು ಬಹುಶಃ ಈ ಅಲೆಮಾರಿ ಬುಡಕಟ್ಟು ಜನಾಂಗದವರು ರಾಜರಿಗೆ ನಜರು ಒಪ್ಪಿಸಿ ಅವರಿಗೆ ತಮ್ಮ ತಿರುಗಾಟದಲ್ಲಿ ಅಕ್ಕ ಪಕ್ಕದ ರಾಜ್ಯದ ವಿದ್ಯಾಮಾನ ತಿಳಿಸಿ ಭಕ್ಷೀಸು ಪಡೆಯುವ ಪದ್ದತಿ ಆಗಿರಬಹುದು.
ಆ ಕಾಲದ ಸೈನ್ಯದ ಹಿಂದಿನಿಂದ ಇಂತಹ ಬುಡಕಟ್ಟು ಜನ ಸೈನಿಕರಿಗೆ ಸಹಾಯಕರಾಗಿ ಅಥವ ಅವರಿಗೆ ಮನರಂಜನೆ ನೀಡುವ ತಂಡಗಳಾಗಿ ಸಾಗುತ್ತಿದ್ದರೆಂಬ ಉಲ್ಲೇಖ ಇದೆ.
ಪಕ್ಕದ ರಾಜ್ಯಗಳಲ್ಲಿ ಕಳ್ಳತನ ಮಾಡಿಸಿ ಅಲ್ಲಿ ಅರಾಜಕತೆ ಉಂಟು ಮಾಡಿ ನಂತರ ಅಲ್ಲಿ ದಾಳಿ ನಡೆಸಿ ವಶಪಡಿಸಿಕೊಳ್ಳುವಾಗ ಅಲ್ಲಿನ ಪ್ರಜೆಗಳು ಈ ಕಳ್ಳತನದಿಂದ ರೋಸಿ ಹೋಗಿ ಅದಕ್ಕೆಲ್ಲ ಕಾರಣ ಅವರ ರಾಜನ ದುರಾಡಳಿತ ಎಂದು ಈ ರಾಜನಿಗೆ ಬೆಂಬಲಿಸುತ್ತಿದ್ದರಂತೆ ಆದರೆ ಈ ಕಳ್ಳತನ ಮಾಡಿಸಿದ ರಾಜ ಅವರ ರಾಜ್ಯದ ಮೇಲೆ ಅಕ್ರಮಣ ಮಾಡಿದ ರಾಜನೇ ಆಗಿರುತ್ತಿದ್ದ.
ಈ ರೀತಿ ಅಲೆ ಅಲೆಮಾರಿ ಬುಡಕಟ್ಟು ಜನಾಂಗದವರನ್ನ ಆ ಕಾಲದ ಸೀಮಿತ ವಿಸ್ತೀರ್ಣದ ರಾಜರುಗಳು ತಮ್ಮ ಆಡಳಿತದಲ್ಲಿ ರಾಜ ತಾಂತ್ರಿಕವಾಗಿ ಬಳಸಿಕೊಳ್ಳುತ್ತಿದ್ದರು.
ಹಾವು ಗೊಲ್ಲರು, ದೊಂಬರಾಟದ ದೊಂಬಿದಾಸರು, ಸುಡುಗಾಡು ಸಿದ್ದರು, ಹಂದಿಜೋಗಿಗಳು, ಬಳೆಗಾರರು, ಕೊರಮರು, ಬೆಸ್ತರು, ದನಗಾಹಿ ಗೊಲ್ಲರು, ಸಿದ್ಧರು.... ಇನ್ನೂ ಅನೇಕ ಜನಾಂಗದವರು ಆನಂದಪುರಂ ಸುತ್ತ ಮುತ್ತ ಈಗ ಖಾಯಂ ನೆಲೆ ಕಂಡಿದ್ದಾರೆ.
ಇವರಲ್ಲಿ ಕೊನೆಯವರೇ ಈ ಹಾವು ಗೊಲ್ಲರು.
ಜಿಲ್ಲೆಯ ಸಾಗರ ತಾಲ್ಲೂಕಿನ ಶಿರವ೦ತೆ, ಹೆಗ್ಗೋಡು, ಹೊಸನಗರ ತಾಲ್ಲೂಕಿನ ಹಾಲು ಗುಡ್ಡೆಗಳಲ್ಲಿ ಸಕಾ೯ರದ ಜಾಗ ಮನೆ ಪಡೆದಿದ್ದರಿಂದ ಒಂದೆಡೆ ನೆಲೆಸಿದ್ದಾರೆ.
ಹಾವು ಹಿಡಿದು ಜೀವನ ಮಾಾಡುವುದಕ್ಕಿಂತ ಈಗ ಬೇರೆ ಉದ್ಯೋಗದಲ್ಲಿ ಹೆಚ್ಚು ತೊಡಗಿದ್ದಾರೆ.
ಇವರ ಕೇರಿಯಲ್ಲಿ ನಾಗ ಪ್ರತಿಷ್ಟೆ ಮಾಡಿ ಯಾರೂ ಹಾವು ಹಿಡಿಯದ೦ತೆ ಕೆಲವರು ತಾಕೀತು ಮಾಡಿದ್ದಾರೆ ಆದರೆ ಕೆಲವರು ಗುಟ್ಟಾಗಿ ಹಾವು ಹಿಡಿಯುವ ಇವರ ಪುರಾತನ ವಂಶಪಾರಂಪಯ೯ ವಿದ್ಯ ಉಳಿಸಿ ಕೊಂಡಿದ್ದಾರೆ,
1985 ರಲ್ಲಿ ಕ್ಯಾಮೆರ ಕಡಿಮೆ ಇರುವ ಕಾಲದಲ್ಲಿ ಇವರೆಲ್ಲರ ಕುಟುಂಬದ photo ಸೆಷನ್ ಮಾಡಿದ್ದೆ,ನಮ್ಮ ರೈಸ್ ಮಿಲ್ನಲ್ಲಿ ಒಂದು ಕೋಟು, ಕಪ್ಪು ಕನ್ನಡಕ ಮಾತ್ರ ಎಲ್ಲಾ ಕುಟು೦ಬದ ಹಿರಿಯನು ಧರಿಸಲು ಬದಲಾಗುತ್ತಿತ್ತು,
ಅವತ್ತು ಚಿತ್ರದಲ್ಲಿದ್ದ ಮಕ್ಕಳೆಲ್ಲ ಈಗ ಅಜ್ಜOದಿರಾಗಿದ್ದಾರೆ ಅಂದರೆ ಸಣ್ಣ ವಯಸ್ಸಲ್ಲೇ ಮದುವೆ ಮಾಡುತ್ತಾರೆ ಅವರಲ್ಲಿ.
ಇವರೆಲ್ಲ ಆಗಾಗ್ಗೆ ಬಂದು ಬೇಟಿ ಮಾಡಿ ಅವರ ದರ್ಶನ ನನಗೆ ನೀಡಿದ್ದಕ್ಕೆ ಭಕ್ಷೀಸು ಪಡೆಯುತ್ತಾರೆ.
Comments
Post a Comment