https://www.facebook.com/share/p/15J7zxaaT9/
*#ಕಾಗೋಡು_ತಿಮ್ಮಪ್ಪನವರು*
*ಕಾಗೋಡು ತಿಮ್ಮಪ್ಪನಂತವರು ಇರ ಬೇಕು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಆದರೆ ಇವರೇ ಕೊನೆಯವರು*
*1999 ರಿಂದ ನನಗೂ ಅವರಿಗೂ ರಾಜಕಾರಣ ಸಂಬಂದ ಇಲ್ಲದೆಯೂ ಅವರನ್ನ ಈ ಮೂಲಕ ಶ್ಲಾಘಿಸುತ್ತೇನೆ.*
*ಕಾಗೋಡು ತಿಮ್ಮಪ್ಪನವರು ನನ್ನನ್ನ ವಿರೋದಿಸಿದರೂ ನಾನು ಅವರನ್ನ ಶ್ಲಾಘನೆ ಮಾಡಲು ಕಾರಣ ಅವರ ವ್ಯಕ್ತಿತ್ವ.*
#KagoduThimmappa #ExMinister #Exspeaker #govtofkarnataka #ಕಾಂಗ್ರೆಸ್ #sagarvidanasabha
#ಶಿವಮೊಗ್ಗ #sagar #arunprasad #malenadu
#LandReforms #bagarhukum #kagoduhorata
#Tenancy
*ಕಾಗೋಡು ಡಾ.ರಾಮಮನೋಹರ ಲೋಹಿಯ ಚಿಂತನೆಯಲ್ಲಿ, ಶಾಂತವೇರಿ ಗೋಪಾಲಗೌಡರ ಮೂಸೆಯಲ್ಲಿ ಬಂದವರು.*
*ಸಮಾಜವಾದಿ ಪಕ್ಷದಿಂದ- ಜನತಾ ಪಕ್ಷದಿಂದ ಮುಂದೆ ಗುಂಡೂರಾಯರ ಪ್ರೇರಣೆಯಿಂದ ಸಾರೆಕೊಪ್ಪದ ಬಂಗಾರಪ್ಪನವರ ವಿರೋಧ ರಾಜಕಾರಣ ಮಾಡಲು ಕಾಂಗ್ರೆೇಸ್ ಸೇರಿದರು.*
*ಕಾಗೋಡು ತಿಮ್ಮಪ್ಪರ ವಿರುದ್ಧ 1999ರ ವಿಧಾನ ಸಭಾ ಚುನಾವಣೆಯಲ್ಲಿ ನಾನು ಪಕ್ಷೇತರನಾಗಿ ಸ್ಪದಿ೯ಸಿ ಶೇಕಡ 10 ಮತ ಪಡೆದದ್ದರಿಂದ ನನ್ನ ಮೇಲೆ 22 ಕ್ರಿಮಿನಲ್ ಕೇಸುಗಳು, ಗೂಂಡಾ ಕಾಯ್ದೆಯಲ್ಲಿ ರೌಡಿ ಶೀಟರ್ ಆಗಿ ನನ್ನನ್ನ ಅವರು ಸಿಲುಕಿಸಿದರೂ ಅವರ ಬಗ್ಗೆ ನನ್ನ ಅಭಿಪ್ರಾಯ ಕೇಳಿ.*
*ಅವರಿಗೆ ಬಡವರ, ರೈತರ ಬಗ್ಗೆ ನೈಜ ಕಾಳಜಿ ಇದೆ, ಮೂಗಿಗೆ ತುಪ್ಪ ಹಚ್ಚುವ ಬೇರೆ ರಾಜಕಾರಣಿಗಿಂತ ಬಿನ್ನ ಮತ್ತು ಬೇರೆ.*
*ನಿತ್ಯ ಎಲ್ಲಾ ಪತ್ರಿಕೆ ಸ್ವತಃ ಓದುತ್ತಾರೆ, ಹೊಗಳಿದರೆ ಉಬ್ಬುವುದಿಲ್ಲ, ಮಲೆನಾಡಿನ ರೈತರ ಸಮಸ್ಯೆ ಬೇರೆಯವರಿಗೆ ಅಥ೯ವಾಗುವುದಿಲ್ಲ, ಪರಿಸರ ವಿರೋದಿ ಅಲ್ಲ, ಲಂಚಕ್ಕೆ ಬೆಂಬಲ ಇಲ್ಲ ಆದರೆ ರೈತನನ್ನ ಒಕ್ಕಲೆಬ್ಬಿಸುವುದಕ್ಕೆ ಅವರ ವಿರೋದ ಯಾವತ್ತೂ ಇದೆ.*
*ಮುಖ್ಯ ಮಂತ್ರಿಗಳಾಗಿದ್ದ ಬಂಗಾರಪ್ಪನವರು ಬಗರ್ ಹುಕುಂ ಜಾರಿಗೊಳಿಸಿದಾಗ ರಾಜ್ಯದ ಮೊದಲ ಬಗರ್ ಹುಕುಂ ಹಕ್ಕು ಪತ್ರ ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಂಜೂರು ಮಾಡಲು ಅವರು ನೀಡಿದ ಪ್ರೊತ್ಸಾಹ ಮರೆಯಲಾರೆ.*
*ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯವರಿಗೆ- ಅಲೆಮಾರಿ ಕೊರಮರಿಗೆ-ಕುಂಬಾರರಿಗೆ-ಬಳೆಗಾರ ಜೋಗಿಗಳಿಗೆ - ಕುಣುಬಿ ಸಮಾಜದವರಿಗೆ- ಮುಸ್ಲಿಂ - ಕ್ರೈಸ್ತರಿಗೆ ಸೇರಿ ಎಲ್ಲಾ ಜಾತಿಯವರಿಗೆ ಹಕ್ಕು ಪತ್ರ ನೀಡಿದೆವು.*
*ಇದರಿಂದ ಕಾಗೋಡು ನನಗೆ ಹೊಗಳುತ್ತಿದ್ದರಿಂದ ಅವರ ಬಗಲಿಗಳು ಸಹಿಸಲಿಲ್ಲ ಅವರೆಲ್ಲ ನನ್ನ ವಿರೋದಿಸಲು ಪ್ರಾರಂಬಿಸಿದರು.*
*ಪಿಟ್ಟಿ೦ಗ್ ಇಟ್ಟು ಕಾಗೋಡರಿಂದ ನನ್ನ ದೂರ ಮಾಡಿದರು, ಇದಕ್ಕೆ ಇವರ ಅಣ್ಣನ ಮಗ ಅಣ್ಣಾಜಿ ಕೂಡ ಕೈ ಜೋಡಿಸಿದರು ಹಾಗಾಗಿ ನನ್ನ ಅವರ ಬದ್ಧ ದ್ವೇಷದ ರಾಜಕಾರಣ ಪ್ರಾರಂಭ ಆಯಿತು.*
*ಆದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವರಂತವರು ಬೇಕು ಆದರೆ ಇವರೇ ಕೊನೆಯವರು ಅನ್ನಿಸುತ್ತೆ.*
*ಒಬ್ಬ ರಾಜಕಾರಣಿ ಪ್ರಾಮಾಣಿಕ ಆಗಿದ್ದರೂ ಹಣ, ಪ್ರಭಾವಗಳ ಶಿಷ್ಯ ವ್ಯಂದ ನಾಯಕನ ಹಾದಿ ತಪ್ಪಿಸುವ ನೈಜ ಘಟನೆಗೆ ಕಾಗೋಡು ಉಧಾಹರಣೆ ಆದರು.*
*ಏನೇ ಆಗಲಿ ವಯೋವೃದ್ದ ಸಮಾಜವಾದಿ ಸಿದ್ದಾಂತದ ಕಾಗೋಡು ತಿಮ್ಮಪ್ಪರನ್ನ ಗೌರವಿಸಲು ಸಾವಿರಾರು ಕಾರಣ ಇದೆ, ಮೂಡನಂಬಿಕೆ ವಿರೋದಿ, ಹೊಗಳಿಕೆ ಜನರಿಂದ ದೂರ, ಸ್ವತಃ ಕಾನೂನು ತಿಳುವಳಿಕೆ ಇವರಿಗಿದೆ.*
*1999 ರಿಂದ ನನಗೂ ಅವರಿಗೂ ರಾಜಕಾರಣ ಸಂಬಂದ ಇಲ್ಲದೆಯೂ ಅವರನ್ನ ಈ ಮೂಲಕ ಶ್ಲಾಘಿಸುತ್ತೇನೆ.*
Comments
Post a Comment