#ಅಡಿಕೆ
ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದ ಸರಣಿ ಲೇಖನ ಭಾಗ-9.
ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಮಾವೇಶದ ಉದ್ದೇಶ
ತುರ್ತಾಗಿ ತೆಗೆದು ಕೊಳ್ಳಬೇಕಾದ ತೀರ್ಮಾನಗಳು
ಅಡಿಕೆ ಬೆಳೆಗಾರರಿಗೆ ಸಿಗಬೇಕಾದ ಭರವಸೆಗಳು.
ಬಹುತೇಕ ಅಡಿಕೆ ಬೆಳೆಗಾರರಿಗೆ ಪ್ರಸಕ್ತ ಅಡಿಕೆ ಬೆಳೆಯ ಸಮಸ್ಯೆ ಏನು ಎನ್ನುವುದು ಅರಿವು ಮೂಡಿಸುವ ಕೆಲಸ ಮೊದಲು ಆಗ ಬೇಕಾಗಿದೆ.
ತಕ್ಷಣ ಅಡಿಕೆ ಕ್ಲೀನಿಕಲ್ ಟ್ರಯಲ್ ಪ್ರಾರಂಬಿಸಿದರೂ ಅಂತಿಮ ಪಲಿತಾಂಶ ಪಡೆಯಲು ಕನಿಷ್ಟ 10 ವರ್ಷ ಬೇಕು.
ಅಡಿಕೆಗೆ ಬಂದ ಗಂಡಾಂತರ ಭಾರತದ ಸಂಸತ್ ಅಥವ ಸರ್ವೋಚ್ಚ ನ್ಯಾಯಾಲಯದಿಂದ ಬಗೆಹರಿಯುವುದಿಲ್ಲ ಎನ್ನುವುದು ಪ್ರತಿಯೊಬ್ಬ ಅಡಿಕೆ ಬೆಳೆಗಾರರಿಗೆ ತಿಳಿದಿರಲಿ.
#arecanut #arecafarmers #malenadu #panmasala #gutka #CancerCare #Cancerawareness #shivamogga #sagar #campco
9-ಅಕ್ಟೋಬರ್- 2024ರಂದು ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಕ್ಯಾನ್ಸರ್ ಕಾರಕ ಘೋಷಣೆ ಮಾಡಿದೆ ಇದರ ಪರಿಣಾಮಗಳು ಅಡಿಕೆ ಬೆಳೆ ಮತ್ತು ಬಳಕೆ ಮೇಲೆ ಯಾವ ರೀತಿ ಆಗಲಿದೆ?....
ಸುಪ್ರಿಂ ಕೋರ್ಟ್ ನಲ್ಲಿ ಅಡಿಕೆ ಬಗ್ಗೆ ಇದ್ದ ವ್ಯಾಜ್ಯ ಯಾವುದು? 2014 ರಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್ ನಲ್ಲಿ ಏನಿದೆ? .....
ಸಂಸದ್ ಅದಿವೇಶನದಲ್ಲಿ ಸರ್ಕಾರ ನೀಡಿದ ಉತ್ತರ ಏನು?...
ಇವುಗಳನ್ನ ವಿವರಿಸಬೇಕು.
ಅಡಿಕೆ ಬೆಳೆಗಾರರ ಹಿತ ಕಾಪಾಡಲು ಕ್ಯಾಂಪ್ಕೊ , ಮಾಮ್ಕೋಸ್, ಅಪ್ಸ್ಕೋಸ್ ಕಳೆದ 20 ವರ್ಷದಲ್ಲಿ ಮಾಡಿದ ಪ್ರಯತ್ನಗಳ ದಾಖಲೆಗಳು ಏನು ಎಂಬುದು ತಿಳಿದು ಕೊಳ್ಳಬೇಕು.
ಸದ್ಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ WHO ಗೆ ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬ ಸಂಶೋದನಾ ವರದಿ ಸಲ್ಲಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ ಅದು ಅಮೇರಿಕಾದ FDA (Food & Drug Administration Authority) ಅಪ್ರೂವ್ ಮಾಡಿದ ಲ್ಯಾಬ್ ನಿಂದಲೇ ಕ್ಲೀನಿಕಲ್ ಟ್ರಯಲ್ ವರದಿ ನೀಡಬೇಕಾಗಿದೆ.
FDA ವಿಶ್ವ ದರ್ಜೆಯಲ್ಲಿ ಎಲ್ಲಾ ಔಷದಿ ಬಳಕೆಗೆ ಅಂತಿಮ ಅನುಮತಿ ನೀಡುವ ವೈಜ್ಞಾನಿಕ ಸಂಸ್ಥೆ ಆಗಿದೆ.
ಇದಕ್ಕಾಗಿ ಕನಿಷ್ಟ 10 ರಿಂದ 12 ವರ್ಷ ಪರಿಣಾಮಕಾರಿಯಾಗಿ ವಿಶ್ವದರ್ಜೆಯಲ್ಲಿ ಸಂಶೋಧನೆ ಮೂಲಕ ನಾವು ಪ್ರಯತ್ನಿಸಿದರೆ ಮಾತ್ರ ಅಂತಿಮ ತೀರ್ಪು ಅಡಿಕೆ ಪರವಾಗಿ ದೊರೆಯುತ್ತದೆ.
ಇದಕ್ಕೆ ಬೇಕಾದ ಆರ್ಥಿಕ ಸಹಾಯ 10 ರಿಂದ 15 ಕೋಟಿ ರೂಪಾಯಿಗಳು ಆಗಲಿದೆ.
ಈ ಬಗ್ಗೆ ಅಡಿಕೆ ಬೆಳೆಗಾರರು ತುರ್ತು ನಿರ್ಧಾರಕ್ಕೆ ಬರಬೇಕಾಗಿದೆ ಇದಕ್ಕೆ ಬೇಕಾಗುವ ಹಣ ಅಡಿಕೆ ಬೆಳೆಗಾರರಿಂದ ಪರೋಕ್ಷವಾಗಿ ಮತ್ತು ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆಗಳಿಂದ ನೇರವಾಗಿ ಸಂಗ್ರಹಿಸುವ ಕೆಲಸ ಆಗಬೇಕು.
ಸಂಶೋದನಾ ಕೆಲಸ ಪ್ರಾರಂಭ ಮಾಡಿದ ನಂತರವೇ ಹೆಚ್ಚಿನ ಸಹಾಯಕ್ಕೆ ಸರ್ಕಾರದಿಂದ ನಿರೀಕ್ಷೆ ಮಾಡ ಬೇಕು ಇಲ್ಲದಿದ್ದರೆ ಸರ್ಕಾರಕ್ಕೆ ಸಲ್ಲಿಸುವ ಆರ್ಥಿಕ ಸಹಾಯ ಕೇಳುವ ಕಡತಗಳು ಮುಂದಿನ 5 ವರ್ಷದಲ್ಲೂ ಬಗೆಹರಿಯುವ ಸಾಧ್ಯತೆ ನಂಬಲು ಸಾಧ್ಯವಿಲ್ಲ.
ತಕ್ಷಣ ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂದು ಸಾಬೀತುಪಡಿಸಲು ಕ್ಲೀನಿಕಲ್ ಟ್ರಯಲ್ ವಿಳಂಬವಾದರೆ? ರಾಜಕಾರಣಿಗಳ ಸುಳ್ಳು ಭರವಸೆ ನಂಬಿದರೆ ಮುಂದೆ ತಂಬಾಕಿಗೆ ಇರುವಂತ ನಿಯಂತ್ರಣ ಅಡಿಕೆಗೆ ಬರಲಿದೆ.
ತಂಬಾಕು ಉತ್ಪನ್ನದ ಪೊಟ್ಟಣಗಳ ಮೇಲೆ ಅಚ್ಚುಹಾಕುವಂತೆ ಅಡಿಕೆ ಮತ್ತು ಅದರ ಬಳಕೆಯ ಪ್ಯಾಕ್ ಮೇಲೆ ಶಾಸನ ವಿದಿಸಿದ ಎಚ್ಚರಿಕೆ "ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಕ್ಯಾನ್ಸರ್ ಕಾರಣ" ಎಂದು ಕಡ್ಡಾಯವಾಗಿ ನಮೂದು ಮಾಡಬೇಕಾಗುತ್ತದೆ.
ಆಮದು ರಪ್ತು ನಿಯಂತ್ರಣ, ದುಬಾರಿ ತೆರಿಗೆಗಳಿಂದ ಅಡಿಕೆ ಬಳಕೆ ಕಡಿಮೆ ಆಗಲಿದೆ, ಮುಂದೆ ತಂಬಾಕು ಮಂಡಳಿ ಅನುಮತಿ ಪಡೆದು ತಂಬಾಕು ಕೃಷಿ ಮಾಡಿದಂತೆ ಅಡಿಕೆ ಕೃಷಿ ಮಾಡಬೇಕಾದೀತು.
ಈ ರೀತಿಯ ನಿಯಂತ್ರಣಗಳಿಂದ ಅಡಿಕೆ ಕೃಷಿಗೆ ಹೆಚ್ಚು ವೆಚ್ಚಗಳಾದರೆ ಲಾಭ ಕಡಿಮೆ ಆದರೆ ಕೃಷಿಕರು ಅನಿವಾರ್ಯವಾಗಿ ಅಡಿಕೆಯಿಂದ ಪರ್ಯಾಯ ಕೃಷಿ ಕಡೆ ಗಮನ ಹರಿಸ ಬೇಕಾದೀತು.
ಇಂತಹ ಸಾಧ್ಯಾ ಸಾಧ್ಯತೆ ಬಗ್ಗೆ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ವಿವರಿಸುವಂತ ಸಂಪನ್ಮೂಲ ವ್ಯಕ್ತಿಗಳನ್ನ ಆಮಂತ್ರಿಸ ಬೇಕು ಈ ಬಗ್ಗೆ ಸಮಾವೇಶದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು.
ಕನ್ನಡಿಗರೇ ಅಡಿಕೆ ಬೆಳೆಗಾರರೇ ಆದ WHO ಸಂಸ್ಥೆ ಜೊತೆ FDA ಅನುಮೋದಿಸಿದಂತ ಲ್ಯಾಬ್ ಮುಖಾಂತರ ಸಂಶೋಧನೆ ಕ್ಲೀನಿಕಲ್ ಟ್ರಯಲ್ ಮಾಡಿಸುವ ಅಡಿಕೆಗೆ ನ್ಯಾಯ ಕೊಡಿಸುವಂತ ಕುಮಾರ್ ಕುಂಠಿಕಾನಮಠ ಮತ್ತು ಕುಮಾರ ಸುಬ್ರಮಣ್ಯ ಮುಲಿಯಾಲ ಅಂತವರನ್ನ ಅಡಿಕೆ ಬೆಳೆಗಾರರ ಸಮಾವೇಶಕ್ಕೆ ಆಮಂತ್ರಿಸಿ ಅವರಿಂದ ಅಡಿಕೆ ಬೆಳೆಗಾರರಿಗೆ ಪ್ರಸಕ್ತ ಸಮಯದಲ್ಲಿ ಐಸಿಯುನಲ್ಲಿರುವ ಅಡಿಕೆ ಬದುಕಿಸುವ ಬಗ್ಗೆ ಸಮಾಲೋಚಿಸ ಬೇಕಾಗಿದೆ.
ಅಡಿಕೆಗೆ ಬಂದ ಗಂಡಾಂತರ ಭಾರತದ ಸಂಸತ್ ಅಥವ ಸರ್ವೋಚ್ಚ ನ್ಯಾಯಾಲಯದಿಂದ ಬಗೆಹರಿಯುವುದಿಲ್ಲ ಎನ್ನುವುದು ಪ್ರತಿಯೊಬ್ಬ ಅಡಿಕೆ ಬೆಳೆಗಾರರಿಗೆ ತಿಳಿದಿರಲಿ ಅದು ವಿಶ್ವ ಆರೋಗ್ಯ ಸಂಸ್ಥೆ (WHO) ಅಂಗಳದ ಚೆಂಡು ಆಗಿ ಹೋಗಿದೆ 2014ರಲ್ಲೇ ನಮ್ಮ ಸರ್ಕಾರಗಳು ಮತ್ತು ಅಡಿಕೆ ಬೆಳೆಗಾರರ ಸಂಘಟನೆಗಳ ಕೈ ತಪ್ಪಿ ಹೋಗಿದೆ.
ಕುಮಾರ್ ಕುಂಠಿಕಾನ ಮಠ ಸಂಪರ್ಕ ಸಂಖ್ಯೆ
+44 7715673881.
ಕುಮಾರ್ ಸುಬ್ರಮಣ್ಯ ಮುನಿಯಾಲರ ಸಂಪರ್ಕ ಸಂಖ್ಯೆ
6362175696.
Comments
Post a Comment