https://www.facebook.com/share/v/14Ubircbve/
*#ಯಡೇಹಳ್ಳಿ*
*ಡ್ರೋನ್ ವಿಡಿಯೋದಲ್ಲಿ ನಮ್ಮ ಊರು ನೋಡಿ.*
*ಇದು ನಮ್ಮ ಯಡೇಹಳ್ಳಿಯ ಮೊಟ್ಟ ಮೊದಲ ಡ್ರೋಣ್ ವಿಡಿಯೋ.*
*ಯಡೇಹಳ್ಳಿ ನನ್ನ ಹುಟ್ಟಿದೂರು ಎಂಬ ಹೆಮ್ಮೆ ನನಗೆ.*
*ಡ್ರೋನ್ ಮಾಡಿದವರು ಖ್ಯಾತ ಡಿಜಿಟಲ್ ಮಾಧ್ಯಮದ ಆಕರ್ಷ್ ಮತ್ತು ನಂದಿನಿ ಪತ್ರಕರ್ತ ದಂಪತಿಗಳು ಅವರಿಗೆ ನಾವೆಲ್ಲರೂ ಚಿರಋಣಿಗಳು.*
https://youtu.be/89faOVlcX_I?si=GTPUoeWQd6VYlqUL
#yadehalli #ಯಡೇಹಳ್ಳಿ #Anandapuram #sagar #Shivamogga #ripponpet #battemallappa #hosanagara #thirthahalli #shikaripura
*ಯಡೇಹಳ್ಳಿ ನನ್ನ ಹುಟ್ಟಿದೂರು ಎಂಬ ಹೆಮ್ಮೆ ನನಗೆ.*
*ಎಲ್ಲರಿಗೂ ಅವರವರ ಹುಟ್ಟಿದ ಊರಿನ ಬಗ್ಗೆ ವಿಶೇಷ ಅಭಿಮಾನ ಸಹಜ.*
*ನನ್ನ ಊರು ಯಡೇಹಳ್ಳಿಯ ಮಾಹಿತಿ ಮತ್ತು ವಿಶೇಷಗಳು ನಿಮಗಾಗಿ.*
*ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿ ಕೇಂದ್ರದ ಯಡೇಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಆಗಿದೆ.*
*ಯಡೇಹಳ್ಳಿ ವೃತ್ತ ಶಿವಮೊಗ್ಗ ಮತ್ತು ಸಾಗರದ ಮಾರ್ಗದಲ್ಲಿ ಪ್ರಮುಖ ಕೇಂದ್ರ ಸ್ಥಳವಾಗಿದೆ.*
*ಶಿವಮೊಗ್ಗದಿಂದ ಬರುವ ರಾಷ್ಟ್ರೀಯ ಹೆದ್ದಾರಿ 69, ರಾಣಿಬೆನ್ನೂರಿನಿಂದ ಶಿಕಾರಿಪುರ ಮಾರ್ಗವಾಗಿ ಬರುವ ರಾಷ್ಟ್ರೀಯ ಹೆದ್ದಾರಿ 766 C ಮತ್ತು ತೀರ್ಥಹಳ್ಳಿ - ರಿಪ್ಪನಪೇಟೆಯಿಂದ ಬರುವ ರಾಜ್ಯ ಹೆದ್ದಾರಿ ರಸ್ತೆ ಹಾಗೂ ಹೊಸನಗರ - ಬಟ್ಟೆಮಲ್ಲಪ್ಪದಿಂದ ಬರುವ ಜಿಲ್ಲಾ ಮುಖ್ಯ ರಸ್ತೆ ಸೇರುವ ವೃತ್ತ ಇದು.*
*ಊರ ಪ್ರಾರಂಭದ ಕೆರೆ ದಂಡೆಯ ಮೇಲೆ ಬೆಂಗಳೂರು ಹೊನ್ನಾವರ ರಸ್ತೆ ಹಾದುಹೋಗಿದೆ ಕೆರೆಯ ಪಶ್ಚಿಮ ಭಾಗದಲ್ಲಿ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಸಾಗಿದೆ.*
*ಈ ಕೆರೆ ಮೂಲ ಹೆಸರು ತಾವರೆ ಕೆರೆ ಇದು ಸಾವಿರ ವರ್ಷಗಳ ಹಿಂದೆ ಚಾಲುಕ್ಯರಿಂದ ನಿರ್ಮಾಣವಾಗಿ ಕೆಳದಿ ಅರಸರ ಕಾಲದಲ್ಲಿ ನವೀಕರಣ ಆದ ಕೆರೆ*
*ಈ ಕೆರೆ ತೂಬಿನಿಂದ ಹೋಗುವ ನೀರು ಬಂಗಾಳ ಕೊಲ್ಲಿ ಸಮುದ್ರ ಸೇರುತ್ತದೆ, ಕೆರೆ ತುಂಬಿ ಕೋಡಿ ಬಿದ್ದರೆ ಅದರ ನೀರು ಶರಾವತಿ ನದಿ ಸೇರಿ ಜೋಗ್ ಜಲಪಾತ ಮೂಲಕ ಅರಬ್ಬೀ ಸಮುದ್ರ ಸೇರುವ ಸಮುದ್ರ ಸೇತು ಅಥವ ಬ್ಯಾಲೆನ್ಸಿಂಗ್ ಟ್ಯಾಂಕ್ ಬಂಡ್ ಆಗಿದೆ.*
*ಯಡೇಹಳ್ಳಿ ಗ್ರಾಮದ ಇರುವಕ್ಕಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಇದೆ,ಇಲ್ಲಿ ಖಾಸಾಗಿ ಪದವಿ ಕಾಲೇಜ್ - ಪ್ರೌಢ ಶಾಲೆ ಇದೆ, ಸರ್ಕಾರಿ ಅಂಗನವಾಡಿ , ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಇದೆ.*
*ಯಡೇಹಳ್ಳಿಯಲ್ಲಿ ರೈಸ್ ಮಿಲ್ - ಪೆಟ್ರೋಲ್ ಪಂಪ್ - ಎರೆಡು ಬ್ಯಾಂಕುಗಳು ಇದೆ.*
*ನಮ್ಮ ಸಂಸ್ಥೆಯ ಶ್ರೀಕೃಷ್ಣ ಸರಸ ಕನ್ವೆನ್ಷನ್ ಹಾಲ್ ಎಂಬ ಕಲ್ಯಾಣ ಮಂಟಪ, ಹೊಂಬುಜ ರೆಸಿಡೆನ್ಸಿ ಲಾಡ್ಜ್, ಮಲ್ಲಿಕಾ ವೆಜ್ ರೆಸ್ಟೋರಾಂಟ್ ಮತ್ತು ಚಂಪಕಾ ಪ್ಯಾರಾಡೈಸ್ ನಾನ್ ವೆಜ್ ರೆಸ್ಟೋರೆಂಟ್ ಇದೆ.*
*ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯ, ಮಸೀದಿ ಮತ್ತು ಎರೆಡು ಚರ್ಚ್ ಗಳಿದೆ, ಸಮೀಪದಲ್ಲಿ ವಿಜಯನಗರ ಸಂಸ್ಥಾನದ ಗಜ ಬೆಂಟೆಗಾರ ಬಿರುದಿನ ರಾಜ ಪ್ರೌಡದೇವ ಆ ಕಾಲದಲ್ಲಿ ಈ ಭಾಗದ ಕಾಡಿನಲ್ಲಿ ಕಾಡಾನೆ ಶಿಕಾರಿ ಮಾಡಿ ಹಿಡಿದು ಪಳಗಿಸಿ ತನ್ನ ಸೈನ್ಯಕ್ಕೆ ಸೇರಿಸುತ್ತಿದ್ದ ಆ ಸಂದರ್ಭದಲ್ಲಿ ಆತ ಕಟ್ಟಿಸಿದ ಕೆಂಜಿಗಾಪುರದ ವೀರಭದ್ರ ದೇವಾಲಯ ಮತ್ತು ಕೆರೆ ಇಲ್ಲಿದೆ.*
*ಇಲ್ಲಿನ ಈಗಿನ ಪ್ರವಾಸಿ ಮಂದಿರ ಬ್ರಿಟೀಶ್ ಬಂಗಲೆ ಆಗಿತ್ತು 18 ನೆ ಶತಮಾನದಲ್ಲಿ ಆನಂದಪುರಂ ತಾಲ್ಲೂಕು ಕೇಂದ್ರವಾಗಿದ್ದಾಗ ಇದು ತಾಲ್ಲೂಕು ಕಛೇರಿ ಮತ್ತು ಸಾಗರ ತಾಲೂಕಿನ ಮೊದಲ ನ್ಯಾಯಾಲಯ ಆಗಿತ್ತು.*
*ಇಲ್ಲಿಗೆ ಸಮೀಪದಲ್ಲಿ ಭಂಗಿ ನೈವೇದ್ಯ ಮಾಡುವ ಭಂಗಿ ಬೂತಪ್ಪ ಎಂಬ ನಾಥಪಂಥದ ದೇವಾಲಯ ಮತ್ತು ಕಲ್ಯಾಣಿ ಇದೆ.*
*ನಮ್ಮ ಆನಂದಪುರಂ ಎರೆಡು ರಾಷ್ಟ್ರೀಯ ಹೆದ್ದಾರಿ ಸೇರುವ ಅಪರೂಪದ ಊರು (ಬೈಪಾಸ್ ಪ್ಲೈಒವರ್ ಮೂಲಕ ಸಾಗಲಿದೆ).*
*ನಾಲ್ಕು ನೂರು ವರ್ಷಗಳ ಹಿಂದೆ ಇದು ಪ್ರಮುಖ ಸ್ಥಳವಾಗಿತ್ತು ಇಡೀ ಆನಂದಪುರಂ ಪ್ರದೇಶಕ್ಕೆ ಯಡೇಹಳ್ಳಿ ಕೋಟೆ ಎಂದೇ ಹೆಸರಿತ್ತು.*
*ಕೆಳದಿ ಅರಸರ ಕೋಟೆಗೆ ಇದೇ ಪ್ರವೇಶ ದ್ವಾರ ಇಲ್ಲಿ ಎಷ್ಟೋ ಯುದ್ಧಗಳು ನಡೆದು ಹೋದ ಪ್ರದೇಶ.*
Comments
Post a Comment