https://www.facebook.com/share/p/19mGDWNFE8/
*ಖ್ಯಾತಸಾಹಿತಿ,ಅಂಕಣಕಾರಶಿಕ್ಷಣತಜ್ಞ*
*#ಅರವಿಂದ_ಚೊಕ್ಕಾಡಿಯವರು*
*ನನ್ನ ಎರೆಡು ಪುಸ್ತಕಗಳ ಅವಲೋಕನ ಮಾಡಿದರು*
*ದಿನಾಂಕ :11-ಡಿಸೆಂಬರ್-2022*
*ಸ್ಥಳ: ಆನಂದಪುರಂ ಕೃಷ್ಣ ಸರಸ ಕನ್ವೆನ್ಷನ್ ಹಾಲ್*
*ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ*
*ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ.* *#ಬೆಸ್ತರರಾಣಿ_ಚಂಪಕಾ*
*ಅವಲೋಕನ ಈ ಭಾಗದಲ್ಲಿದೆ.*
*ಸ್ಟಾರ್ ವ್ಯಾಲ್ಯೂ ಇರುವ ಲೇಖಕರ ಪುಸ್ತಕಗಳಿಗೆ ಅವಲೋಕನದ ಭಾಗ್ಯ ಇರುವುದು ಸಹಜ ಆದರೆ ಸಾಹಿತಿ ಅಲ್ಲದ ಹವ್ಯಾಸಿ ಬರಹಗಾರನಾದ ನನ್ನ ಪುಸ್ತಕದ ಅವಲೋಕನ ಮಾಡಿಸಬೇಕೆಂಬ ಒತ್ತಾಸೆ ತಂದವರು ನನ್ನ ಊರಾದ ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ಡಿ.ರವಿಕುಮಾರ್ ಮತ್ತು ಸಾಗರ ತಾಲ್ಲೂಕ್ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿ.ಟಿ. ಸ್ಟಾಮಿಯವರು.*
*ಅವರಿಗೆ ಪ್ರೋತ್ಸಾಹಿಸಿ ಭಾಗವಹಿಸಿದ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ್.*
*ವಿಶ್ವದಾಖಲೆಯ ಹಬ್ಬು ಸಾಹಿತ್ಯ ಕುಟುಂಬದ ಜೊತೆ ಸಂವಾದ ಸನ್ಮಾನದ ಜೊತೆ ನಡೆದ ನನ್ನ ಪುಸ್ತಕಗಳ ಅವಲೋಕನ ಮಾಡಿದವರು ಖ್ಯಾತ ಸಾಹಿತಿ, ಅಂಕಣಕಾರ, ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿಯವರು ಇದಕ್ಕಿಂತ ಹೆಚ್ಚಿನ ಸಂತೋಷ ತೃಪ್ತಿ ನನಗೆ ಬೇಕಾಗಿಲ್ಲ ಇದಕ್ಕಾಗಿ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ.*
*ಅರವಿಂದ ಚೊಕ್ಕಾಡಿ ಇತಿಹಾಸ - ಸಾಹಿತ್ಯದ ನಡೆದಾಡುವ ವಿಶ್ವಕೋಶ ಅವರು #ಬೆಸ್ತರ_ರಾಣಿ_ಚಂಪಕಾ ದ ಪ್ರೇಮ ಸಂಕೇತವಾದ ರಂಗೋಲಿ ಬಗ್ಗೆ, ಸವತಿ ಬಂದರೆ ಬೇಸರ ಆದರೆ ಇಲ್ಲಿ ಸವತಿಯ ಆಹಾರ ಬೇಸರಕ್ಕೆ ಕಾರಣ - ನವ್ಯ ಮತ್ತು ನವೋದಯದಲ್ಲಿ ಜನರಿಗೆ ತಲುಪುವುದು ಯಾವುದು? .......ಮಾತಾಡಿದ್ದಾರೆ ಕೇಳಿ.*
https://youtu.be/7iVgJRaPlZA?feature=shared
*ಪ್ರೇಮ ಸಂಕೇತವಾಗಿ ಬಳಕೆ ಆದ ರಂಗೋಲಿ ಬಗ್ಗೆ ನಾನು ಬರೆದ ಆ ಒಂದು ಅಧ್ಯಾಯ ಅರವಿಂದ ಚೊಕ್ಕಾಡಿ ಅವರಿಗೆ ಇಷ್ಟವಾಗಲು ಕಾರಣ ..... ನಿಮಗಾಗಿ.*
*#ರOಗೋಲಿ_ಏನಿದರ_ಮಹತ್ವ?*
*ನಾನು ಬರೆದಿರುವ ಬೆಸ್ತರ ರಾಣಿ ಚಂಪಕಾ ಪುಸ್ತಕದಲ್ಲಿ ಚಂಪಕಾ ರಂಗೋಲಿ ಪ್ರವೀಣೆ, ರಾಜ ವೆಂಕಟಪ್ಪ ನಾಯಕರು ಅವಳು ಬಿಡಿಸುವ ರಂಗೋಲಿ ನೋಡಿಯೇ ಅವಳ ಮೇಲೆ ವ್ಯಾಮೋಹಗೊ೦ಡು ವಿವಾಹ ಆಗುತ್ತಾರೆ.*
*ಈ ಕಾದಂಬರಿಯಲ್ಲಿ ರಂಗೋಲಿಯ ಬಗ್ಗೆ ಒಂದು ಅಧ್ಯಾಯದಲ್ಲಿ .....*
*"ಚಂಪಕಾಳ ರಂಗೋಲಿಯಲ್ಲಿ ಅದೆಂತಹ ಆಕಷ೯ಣೆ ಇದೆ"*
*ರಂಗೋಲಿಯ ಬಗ್ಗೆ ಆಸ್ಥಾನದ ಪಂಡಿತರ ಹತ್ತಿರ ಒಮ್ಮೆ ಚಚಿ೯ಸಿದಾಗ ಅವರು ಹೇಳಿದ್ದು ಅರುಣೋದಯದಲ್ಲಿ ಲಲನೆಯರು ತಮ್ಮ ಮನೆಯಂಗಳದಲ್ಲಿ ವಿವಿದ ರೀತಿಯ ರಂಗೋಲಿಯನ್ನ ರಚಿಸುವುದು ಭಾರತೀಯ ಸಂಸ್ಕೃತಿಯ ಒಂದು ಪ್ರಾಚೀನ ಸಂಪ್ರದಾಯವಾಗಿದೆ.ರಂಗೋಲಿಯು ಶಿಲ್ಪ ಕಲೆಗೂ ಆದಾರವಾಗಿತ್ತೆ೦ದು ತಿಳಿದು ಬಂದಿದೆ, ದೇವಾಲಯಗಳಲ್ಲಿ ದಾಮಿ೯ಕ ವಿಧಿ ವಿಧಾನಗಳಲ್ಲಿ ರಂಗೋಲಿ ಬಿಡಿಸುತ್ತಾರೆ.ಇದರಲ್ಲಿ ನಾನಾ ರೀತಿಯ ಕೋನಗಳು, ಆಕೃತಿಗಳು, ಆಯತಗಳು, ಮಂಡಲಗಳು ಇದೆ. ಸಮೂಹ ಚುಕ್ಕಿಗಳನ್ನ ಹಾಕಿ ಅದಕ್ಕೆ ರೇಖೆಗಳನ್ನ ಕೂಡಿಸಿ ಪ್ರಮಾಣಬದ್ಧವಾದ ರಂಗೋಲಿ ಹಾಕಿದರೆ ಮಾತ್ರ ರಂಗೋಲಿ ಸುಂದರವಾಗುತ್ತದೆ. ರಂಗೋಲಿಯಲ್ಲಿ ಆಧಿಕೃತ ಅಳತೆಗಳಿದೆ, ಈ ಕಲೆಯ ಪ್ರಾಚೀನತೆ ನಿಖರವಾಗಿ ತಿಳಿದಿಲ್ಲ, ವಿನ್ಯಾಸಗಳಂತೂ ಲೆಖ್ಖಕ್ಕೆ ಸಿಗುವುದಿಲ್ಲ.*
*ರಂಗೋಲಿಯು ದೇವರನ್ನ ಒಲಿಸಿಕೊಳ್ಳುವ ಒಂದು ಆರಾದನಾ ಸಂಪ್ರದಾಯವೂ ಆಗಿದೆ, ಬಣ್ಣ ಬಣ್ಣದ ಹಿಟ್ಟುಗಳಿ೦ದ, ಕಲ್ಲಿನ ಪುಡಿಗಳಿಂದ ರಂಗೋಲಿಯನ್ನ ರಂಗು ರOಗಾಗಿಸುವ ಕಲೆ ಹೆಣ್ಣು ಮಕ್ಕಳು ಕಲಿತಿದ್ದಾರೆ, ಇದಕ್ಕೆ ಗೋದಿ, ಜವೆಗೋದಿ, ಅಕ್ಕಿ ಹಿಟ್ಟು, ಕುಂಕುಮ, ಅರಿಶಿಣ ಪುಡಿ, ಶಿಲಾ ಚುಣಾ೯ ಮತ್ತು ನವರತ್ನಪುಡಿಯನ್ನ ತುಂಬಿಸುವುದು ಒಂದು ಕಲೆ. ಹೋಮ ಹವನದಲ್ಲಿ ಮದುವೆಯ ಹಸೆಮಣೆಯಲ್ಲಿ ದೇವರ ಮಂಟಪಗಳಲ್ಲಿ ಪುರೋಹಿತರು ರಂಗೋಲಿ ಬಿಡಿಸುತ್ತಾರೆ, ತಾಂತ್ರಿಕ ಪೂಜೆಯಲ್ಲಿ ಮಂಡಲಗಳನ್ನು ರಂಗೋಲಿಯಲ್ಲೇ ಬಿಡಿಸಲೇ ಬೇಕು. ಎಲ್ಲರೂ ರಂಗೋಲಿಯಲ್ಲಿ ಪರಿಣಿತರಾಗಲು ಸಾಧ್ಯವಿಲ್ಲ. ರಂಗೋಲಿ ಬಿಡಿಸುವುದರಲ್ಲಿ ತಾಳ್ಮೆ ಇರಬೇಕು, ದೂರಾಲೋಚನೆ ಇರಬೇಕು, ಕಲ್ಪನೆ ಇರಬೇಕು, ಚುರುಕುತನ ಇರಬೇಕು ಹಾಗಿದ್ದರೆ ಮಾತ್ರ ಜನಾಕಷ೯ಕ ರಂಗೋಲಿ ರಚಿಸಲು ಸಾಧ್ಯ.ಹುಟ್ಟಿನಿಂದಲೇ ಈ ಚಾಕಚಕ್ಯತೆಯನ್ನ ಕೆಲವರು ತನ್ನ ಹಿಂದಿನ ಜನ್ಮದ ಫಲವಾಗಿ ಪಡೆದಿರುತ್ತಾರೆ.*
*ನಿದಿ೯ಷ್ಟವಾದ ಆಳತೆಯ ಸ್ಪಷ್ಟವಾದ ಗೆರೆಗಳು ಹೊಂದಿರುವ ರಂಗೋಲಿಗೆ ಸೂಕ್ತ ಬಣ್ಣ ತುಂಬುವುದು ಕಲಾಕಾರಿಕೆ, ತಂತ್ರ ವಿದ್ಯೆಯಲ್ಲಿ ಇಂತಹ ರಂಗೋಲಿಗಳು ಸಾಧಕರ ಮನೋಸ್ಥಿಮಿತ ಉ೦ಟು ಮಾಡುತ್ತದೆ, ಅವರನ್ನ ಸಮಾದಿ ಸ್ಥಿತಿಗೂ ಒಯ್ಯುತ್ತದೆ, ತಂತ್ರ ವಿದ್ಯೆಯಿಂದ ಸಾದನೆ ಮಾಡಬೇಕಾದರೆ ಮಂಡಲಗಳು, ರಂಗೋಲಿಗಳು ಬಹುಮುಖ್ಯ.*
*ಸುOದರವಾದ ಸಮಯೋಚಿತವಾದ ರಂಗೋಲಿಯಿಂದ ದೇವರು ಒಲಿಯಲೇ ಬೇಕು ಹಾಗಾಗಿ ರಂಗೋಲಿ ಎಂದರೆ ಅದು ಸಣ್ಣ ಚಿತ್ರವಲ್ಲ ಎಂತಹದೊ ಒಂದು ರೇಖೆಯಲ್ಲ ಯಾವುದೋ ಒಂದು ಪುಡಿಯಲ್ಲ ಇದಕ್ಕೆ ಪ್ರಾಚಿನತೆ ಸ್ಪಶ೯ವಿದೆ, ದೈವ ಶಕ್ತಿಯ ಬಲವಿದೆ, ತಂತ್ರ ವಿದ್ಯೆಯ ಒಲವಿದೆ, ಸಂಸ್ಕೃತಿಯ ಹಿನ್ನೆಲೆಯಿದೆ, ದಾಮಿ೯ಕ ಭಾವನೆಯ ಸೆಳಕಿದೆ, ಸೌ೦ದಯ೯ದ ತಳುಕಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.*
*ಹಾಗಾಗಿ ಸುಂದರವಾದ ರಂಗೋಲಿ ಬಿಡಿಸುವ ಚಂಪಕಾಳ ಮೇಲೆ ರಾಜರ ವ್ಯಾಮೋಹವೂ ಇಮ್ಮಡಿಯಾಯಿತು, ಚಂಪಕಾ ನನ್ನವಳಾಗಿರಬೇಕು ಎಂಬ ಭಾವನೆ ರಾಜರಲ್ಲಿ ಉ೦ಟಾಯಿತು.*
*ಹಾಗಾಗಿ ಚಂಪಕಾಳ ಬೇಟಿ ಮಾಡುವ ಗುರು ಪೂಣಿ೯ಮೆ ಎ೦ಬ ಪವಿತ್ರ ದಿನಕ್ಕಾಗಿ ರಾಜರು ಚಡಪಡಿಸಲು ಶುರು ಮಾಡಿದರು.*
*(ಮುಂದಿನ ಭಾಗದಲ್ಲಿ ನನ್ನ ಕಥಾ ಸಂಕಲನ* *#ಭಟ್ಟರ_ಬೊಂಡಾ_ಬಾಂಡ್ಲಿಯಲ್ಲಿ_ಬಿಲಾಲಿ_ಬಿಲ್ಲಿ_ಅಭ್ಯಂಜನದ_ಬಗ್ಗೆ_ಅವರ_ಅವಲೋಕನ)*
https://youtu.be/7iVgJRaPlZA?feature=shared
Comments
Post a Comment