https://www.facebook.com/share/p/1K7HpYdw59/
*#ಆನಂದಪುರಂ_ಆನೆಕಾರಿಡಾರ್*
*#Elephant_corridor*
*ಇವತ್ತು ಮಂಗಳವಾರ (10 - ಡಿಸೆಂಬರ್ -2024 ) ಮತ್ತು ನಿನ್ನೆ ಸೋಮವಾರ ಕಾಡಾನೆಗಳು ಆನಂದಪುರಂ ಹೋಬಳಿಯ ಆಚಾಪುರ ಗ್ರಾಮ ಪಂಚಾಯಿತಿಯ ಕೊಲ್ಲಿಬಚ್ಚಲು ಡ್ಯಾಮಿನ ಸುತ್ತ ಮುತ್ತದಲ್ಲೆ ತಿರುಗಾಡುವ ವರದಿ ಬಂದಿದೆ.*
#wildlife #wildlifeplanet #shivamogga #Anandapuram #sagar #ripponpet #shikaripura #arasalu #corridor
*ಸೋಮವಾರ ರಾತ್ರಿ ತಂಗಳವಾಡಿಯ ರಾಮಚಂದ್ರ, ಮೋಹನ್,ಸಂಗಪ್ಪ ಗೌಡರ ಮನೆ ಹತ್ತಿರ ಇದ್ದ ಆನೆ ಇವತ್ತು ಮಂಗಳವಾರ ಬೆಳಗಿನ ಜಾವ ಕಣ್ಣೂರು ಮೋರಿ ಮಂಜಪ್ಪ ( MC ಮಂಜಪ್ಪ ) ಅವರ ಕಬ್ಬಿನ ತೋಟದಲ್ಲಿ ಕಬ್ಬು ತಿಂದು ಹೋಗಿದೆ.*
*ಕಳೆದ ವರ್ಷ ತಂಗಳವಾಡಿಯ ಚೆಂದಾಳದ ರಂಗನಾಥರ ಮನೆ ಹತ್ತಿರ ಬಂದಿದ್ದ ಕಾಡಾನೆ ಈ ವರ್ಷ ಸ್ವಲ್ಪ ದೂರದಲ್ಲೇ ಸಾಗಿ ಹೋಗಿದೆ.*
*ಬಹುಶಃ ಮಂಗಳವಾರ ರಾತ್ರಿಯಿಂದ ನಾಳೆ ಬುಧವಾರ ರಾತ್ರಿ ತನಕ ಈ ಕಾಡಾನೆಗಳು ಅಂಬ್ಲಿಗೋಳ ಡ್ಯಾಮಿನ ಹಿನ್ನೀರಿನ ಪ್ರದೇಶಕ್ಕೆ ಸಾಗಿ ಹೋಗ ಬಹುದು.*
*ಉದನೂರು- ಕಂಚಾಳಸರ- ಹಿರಿಯರಕ- ಬೈರಾಪುರ ಮಾರ್ಗದಲ್ಲಿ ಸಾಗುವ ನಿರೀಕ್ಷೆ ಇದೆ.*
*ಈ ಪ್ರದೇಶದ ಜನರು ಜಾಗೃತರಾಗಿರಬೇಕು ಆನೆಗಳು ಬೆಳಿಗ್ಗೆ 4 ರಿಂದ 10 ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ ಸಂಚಾರ ಮಾಡುವುದರಿಂದ ಈ ಸಮಯದಲ್ಲಿ ಸಂಚಾರ ಮಾಡಬಾರದು.*
*#ಈ_ವರ್ಷದ_ಕಾಡಾನೆ_ಸಂಚಾರದ_ಅಪ್ಡೇಟ್ಗಳು ...*
*1 ) ದಿನಾಂಕ 7 - ಡಿಸೆಂಬರ್- 2024 ಶನಿವಾರ ಬೆಳಿಗ್ಗೆ ಶಿವಮೊಗ್ಗ ತಾಲ್ಲೂಕಿನ ಚೋರಡಿ ಶೆಟ್ಟಿಕೆರೆ ಹತ್ತಿರ ಕಾಣಿಸಿಕೊಂಡ ಮೂರು ಕಾಡಾನೆಗಳು ಸಂಜೆ ಸೂಡೂರು ಗೇಟ್ ಹತ್ತಿರ ಕಾಣಿಸಿಕೊಂಡಿತ್ತು.*
*2). ದಿನಾಂಕ 8 - ಡಿಸೆಂಬರ್- 2024 ಬಾನುವಾರ ಬೆಳಿಗ್ಗೆ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿಯ ಆಲವಳ್ಳಿ ಸಮೀಪದ ಕಮದೂರಿನ ಕಾಡು ಸಿದ್ದೇಶ್ವರ ಗುಡಿ ಮೇಲಿನ ಕಾಡಿನಲ್ಲಿರುವ ತೋಟದಕೆರೆಗೆ ಬಂದಿದೆ ಅಲ್ಲಿರುವ ಭೋಜಪ್ಪ ಗೌಡರ ಲಿಂಗರಾಜರ ಜಮೀನಿನಲ್ಲಿ ಆನೆ ಹೆಜ್ಜೆಗಳಿದೆ.*
*3) ದಿನಾಂಕ 9 ಮತ್ತು 10-ಡಿಸೆಂಬರ್-2024 ಸೋಮವಾರ ಮತ್ತು ಮಂಗಳವಾರ ಬೆಳಿಗ್ಗೆ ತನಕ ಕೊಲ್ಲಿಬಚ್ಚಲು ಡ್ಯಾಮ್ - ತಂಗಳವಾಡಿ - ಕಣ್ಣೂರು ಭಾಗದಲ್ಲಿದೆ.*
*ಇವತ್ತು ರಾತ್ರಿ ಮತ್ತು ನಾಳೆ ಇದೇ ಮಾರ್ಗದಲ್ಲಿ ಅಂಬ್ಲಿಗೋಳ ಡ್ಯಾಮಿನ ಪ್ರದೇಶದ ಕಡೆ ಸಾಗುವ ಸಾಧ್ಯತೆಗಳಿದೆ.*
*#ಕಳೆದ_ವರ್ಷದ_ಕಾಡಾನೆ_ಸಂಚಾರದ_updateಗಳು*
*1) 2023 - ಅಕ್ಟೋಬರ್ -15 ರಂದು ಹೊಸನಗರ ತಾಲೂಕಿನ ಕೆಂಚನಾಲದಲ್ಲಿ ಮರಿ ಮತ್ತು ತಾಯಿ ಆನೆ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು.*
*2) 2023 - ಡಿಸೆಂಬರ್-16 ರಂದು ಸಾಗರ ತಾಲೂಕಿನ ಪತ್ರೆಹೊಂಡದಲ್ಲಿ.*
*3) 2023- ಡಿಸೆಂಬರ್- 22ರವರೆಗೆ ಅಂಬ್ಲಿಗೋಳದವರೆಗೆ*
*4) 2023 - ಡಿಸೆಂಬರ್ - 24 ರಾ.ಹೆ 69 ವಾಹನ ಸಂಚಾರ ನಿರ್ಬಂದಿಸಿ ಕೊಲ್ಲಿಬಚ್ಚಲು ಡ್ಯಾಮಿನ ಭಾಗದಿಂದ ರಾಷ್ಟ್ರೀಯ ಹೆದ್ದಾರಿ ದಾಟಿಸಿದ್ದರು ಅರಣ್ಯ ಇಲಾಖೆಯವರು.*
*5) 2023- ಡಿಸೆಂಬರ್- 28ರ ಬೆಳಗಿನ ಜಾವ ಹೊಸನಗರ ತಾಲೂಕಿನ ಅರಸಾಳು ರಿಪ್ಪನ್ ಪೇಟೆ ಮಾರ್ಗದ 9ನೇ ಮೈಲಿ ಕಲ್ಲಿನಲ್ಲಿ ಈ ಭಾಗದಿಂದ ದಾಟಿ ವಾಪಾಸು ಹೋಗಿತ್ತು.*
Comments
Post a Comment