Skip to main content

Posts

Showing posts with the label Padavagodu Subrav 1977 Leader of Sagar taluk young brigade

Blog number 1129.ಇಂದಿರಾ ಗಾಂಧಿ ಬಂದನದ ದಿನ ಸಾಗರ ಪೇಟೆಯಲ್ಲಿನ ಘಟನಾವಳಿಗಳು, 25 ಕಿ.ಮಿ.ನಡೆದೇ ಆ ದಿನ ಆನಂದಪುರಂ ಸೇರಿದ ನಾನು ಮತ್ತು ನನ್ನ ಗೆಳೆಯ ಪುಪ್ಪಾ. ಆದಾ ರೋಟಿ ಕಾಯೆಂಗೆ.. ಇಂದಿರಾ ಗಾಂಧಿ ಬಚಾಯೆಂಗೆ ಘೋಷಣೆಯ ಸಂಜಯ್ ಗಾಂಧಿ ಯಂಗ್ ಬ್ರಿಗೇಡ್ ನ ಆಗಿನ ಯುವ ಮುಖಂಡ ಪಡವಗೋಡು ಸುಬ್ರಾವ್.

#ಇ೦ದಿರಾಗಾಂಧಿ_ಬಂದಿಸಿದ_ಆ_ದಿನ. #ಸಾಗರದಿಂದ_ಆನಂದಪುರಂಗೆ_25_ಕಿಮಿ_ನಡೆದು_ಬಂದಿದ್ದೆ. #ಕಾ೦ಗ್ರೇಸ್_ಇಡೀ_ಸಾಗರ_ಪೇಟೆ_ಬಂದ್_ಮಾಡಿಸಿತ್ತು #ಕಾಗೋಡು_ನೇತೃತ್ವದಲ್ಲಿ_ಬಂದ್_ವಿರೋದಿಸಿ_ಮೆರವಣಿಗೆ #ಲಾಠಿ_ಚಾಜ್೯_ಕಾಗೋಡರ_ಕೈಯಿಗೆ_ಪೋಲಿಸರ_ಲಾಠಿಯಿಂದ_ಹಲ್ಲೆ_ಎಂಬ_ಸುದ್ದಿ. #ಆಗ_ಸಾಗರದ_ಶಾಸಕರು_ಕಾಗೋಡು_ತಿಮ್ಮಪ್ಪನವರು. #ಸಂಜಯ್_ಗಾಂಧಿ_ಯಂಗ್_ಬ್ರಿಗೇಡ್_ಪಡವಗೋಡು_ಸುಬ್ರಾವ್ #ಅವರ_ಘೋಷಣೆ_ಆದಾ_ರೋಟಿ_ಕಾಯೇoಗೆ_ಇಂದಿರಾ_ಗಾಂಧಿ_ಬಚಾಯೆಂಗೆ       ಆನಂದಪುರಂ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ 600 ಅ೦ಕಕ್ಕೆ 520 ಅಂಕ ಪಡೆದದ್ದರಿಂದ ನಮ್ಮ ತಂದೆ ನನ್ನನ್ನು 8 ನೇ ತರಗತಿಗೆ ಇಂಗ್ಲೀಷ್ ಮೀಡಿಯಂಗೆ ಸಾಗರದ ಮುನ್ಸಿಪ್ ಹೈಸ್ಕೂಲ್ ಗೆ ಸೇರಿಸಿದ್ದರು.   ಆನಂದಪುರಂನಿಂದ ಪ್ರತಿ ನಿತ್ಯ ರೈಲಿನ ಪ್ರಯಾಣ ಮೂರು ತಿಂಗಳಿಗೆ ವಿದ್ಯಾರ್ಥಿಗಳಿಗೆ ಹತ್ತೊಂಬತ್ತು ರೂಪಾಯಿಗೆ ಪಾಸ್ ನೀಡುತ್ತಿದ್ದರು.    1977 ರ ಅಕ್ಟೋಬರ್ 4 ನೇ ತಾರೀಖು ಮಂಗಳವಾರ ಸಾಗರದಲ್ಲಿ ರೈಲು ಇಳಿದು ಬಸ್ ಸ್ಟಾಂಡ್ ಹತ್ತಿರ ಬ೦ದಾಗಲೇ ಗೊತ್ತಾಗಿದ್ದು ಅವತ್ತು ಸಾಗರ ಪೇಟೆ ಬಂದ್ ಅಂತ, ಎಲ್ಲಾ ಅಂಗಡಿ ಮುಂಗಟ್ಟುಗಳುಗಳು ಬಾಗಿಲು ಮುಚ್ಚಿತ್ತು, ಬಸ್ ಸಂಚಾರ ಇರಲಿಲ್ಲ, ಶಾಲೆ ಹತ್ತಿರ ಹೋದರೆ ಶಾಲೆಗೆ ರಜೆ.   ಹಿಂದಿನ ರಾತ್ರಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಮೊರಾ...