Skip to main content

Posts

Showing posts with the label Kanwar yatra

4101.ಕನ್ವರ್_ಯಾತ್ರೆ_Kanwar_Yatra. ಇದು ಶಿವನಿಗಾಗಿ ಆಚರಿಸುವ ವಿಶೇಷ ಯಾತ್ರೆ ದಕ್ಷಿಣ ಭಾರತಿಯರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

ಕನ್ವರ್_ಯಾತ್ರೆ_Kanwar_Yatra.   ಇದು ಶಿವನಿಗಾಗಿ ಆಚರಿಸುವ ವಿಶೇಷ ಯಾತ್ರೆ ದಕ್ಷಿಣ ಭಾರತಿಯರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.   ಯಾವುದೇ ಮಧ್ಯವರ್ತಿಗಳಿಲ್ಲದೆ ಭಕ್ತ ಮತ್ತು ದೇವರ ನಡುವೆ ನೇರ ಸಂಪರ್ಕ ಕಲ್ಪಿಸುವ ವಿಶಿಷ್ಟ ಸಂಪ್ರದಾಯ ಕನ್ವರ್ ಯಾತ್ರೆಯಲ್ಲಿದೆ.    ಗಂಗಾ ನದಿಯಿಂದ ಗಂಗಾ ಜಲ ಸಂಗ್ರಹಿಸಿ ಕಾವಡಿಯಲ್ಲಿಟ್ಟು ಎಲ್ಲೂ ನೆಲಕ್ಕೆ ಸ್ಪರ್ಷಿಸದೆ ಶ್ರಾವಣ ಮಾಸದಲ್ಲಿ ಶಿವಮಂದಿರಕ್ಕೆ ತಲುಪಿ ಶಿವನಿಗೆ ಅಭಿಷೇಕ ಮಾಡುವ ಈ ಯಾತ್ರೆ ಉತ್ತರ ಭಾರತದಲ್ಲಿ ಪ್ರಸಿದ್ಧಿ ಪಡೆದಿದೆ ಪ್ರತಿ ವರ್ಷ 4 ರಿಂದ 5 ಕೋಟಿ ಜನ ಭಾಗವಹಿಸುತ್ತಾರೆ.   ಹೆಚ್ಚಿನ ಕನ್ವರಿಯರು ತಮ್ಮ ತಮ್ಮ ಊರುಗಳಿಗೆ (ಉತ್ತರ ಪ್ರದೇಶ, ದೆಹಲಿ, ಹರಿಯಾಣ, ರಾಜಸ್ಥಾನ ಇತ್ಯಾದಿ) ಹರಿದ್ವಾರ ಅಥವಾ ಗಂಗೋತ್ರಿಯಿಂದ ಗಂಗಾಜಲವನ್ನು ಕಾಲ್ನಡಿಗೆಯಲ್ಲಿ ಕೊಂಡೊಯ್ಯುತ್ತಾರೆ.   ​ಸಾಮಾನ್ಯವಾಗಿ ನಡೆದು ಕ್ರಮಿಸುವ ದೂರ: 100 ಕಿ.ಮೀ ನಿಂದ 300 ಕಿ.ಮೀ, ಕನ್ವರ್ ಯಾತ್ರೆಯಲ್ಲಿ ಭಕ್ತರ ನಂಬಿಕೆ ಮತ್ತು ಸಂಕಲ್ಪಕ್ಕೆ ಅನುಗುಣವಾಗಿ ಕೆಲವರು 'ಡಾಕ್ ಕನ್ವರ್' (ನಿಲ್ಲದೆ ಓಡುವುದು/ನಡೆಯುವುದು) ಅಥವಾ 'ಖಡಿ ಕನ್ವರ್' (ಕನ್ವರ್ ಅನ್ನು ನೆಲದ ಮೇಲೆ ಇಡದೆ ಕಷ್ಟಕರ ರೀತಿಯಲ್ಲಿ ಸಾಗುವುದು) ಮೂಲಕವೂ ನೂರಾರು ಕಿಲೋಮೀಟರ್ ದೂರ ಕ್ರಮಿಸುತ್ತಾರೆ.   ಕನ್ವರ್ ಯಾತ್ರೆ ಎಂಬುದು ಉತ್ತರ ಭಾರತದಲ್ಲಿ ಶ್ರಾವಣ ಮಾಸದಲ್ಲಿ (ಆಷಾಢ-ಶ್ರಾವಣ / ಜು...