#ಕೊಲ್ಲೂರು ದೇವಾಲಯದ ಜನ ಸಾಮಾನ್ಯರ ಅನ್ನದಾನದ ಪಂಕ್ತಿಯಲ್ಲಿ ನಾವೆಲ್ಲ ಉOಡು ಬಿಸಾಕಿದ ಎಂಜಲೆಲೆಯ ಸಮಾನರು. ಸಹ ಪಂಕ್ತಿಯ ವ್ಯಾಖ್ಯಾನವೇನೊ? ನಿನ್ನೆ 5- ಪೆಬ್ರವರಿ-2018 ಸೋಮವಾರ ಕೊಲ್ಲೂರು ಮೂಕಾ೦ಬಿಕ ಸನ್ನಿದಾನಕ್ಕೆ ಹೋಗಿದ್ದೆ, ಮದ್ಯಾನ್ನ 12ರ ಪೂಜೆ ನಂತರ ಅನ್ನ ಸಂತಪ೯ಣೆ ಜಾಗಕ್ಕೆ ಹೋದೆ ಅಲ್ಲಿ VIPಗಳಿಗೆ ಮತ್ತು ಬ್ರಾಹಮಣರಿಗೆ ಪ್ರತ್ಯೇಕ ವ್ಯವಸ್ಥೆ ಇದೆ ಅಂತ ಗೊತ್ತಿತ್ತು, ನಮ್ಮOತ ಶೂದ್ರರಿಗೆ ಜನಸಾಮಾನ್ಯರಿಗೆ ಮೀಸಲಾದ ಜಾಗದಲ್ಲಿ ಊಟದ ಪಂಕ್ತಿಯಲ್ಲಿ ಕುಳಿತೆ. ದಮ೯ಸ್ಥಳದಲ್ಲಿ, ಉಡುಪಿಯಲ್ಲಿ, ಹೊರನಾಡು ಹಾಗು ಪಂಜಾಬಿನ ಅಮೃತಸರದ ಸ್ವಣ೯ ದೇಗುಲದಲ್ಲಿ ಸಹಪಂಕ್ತಿ ಬೋಜನ ಮಾಡಿದ ಅನುಭವ ನನ್ನದು. ಆದರೆ ನಿನ್ನೆ ಕೊಲ್ಲೂರಿನಲ್ಲಿನ ಅನುಭವ ಅದ್ಬುತ ಆಗಿತ್ತು, ಒಬ್ಬ ಬಾಳೆ ಎಲೆ ನಿರಾಸಕ್ತಿಯಿ೦ದ ಒಗೆಯುತ್ತಾ ಬಂದ ಅವನ ಹಿಂದಿನಿಂದ ಬಂದವ ದುರಂಹOಕಾರಿ ನೆಲದ ಮೇಲೆ ಬಾಳೆ ಎಲೆ ಹಾಸುವ ಮುನ್ನವೇ ನೀರಿನ ಜಗ್ಗಲ್ಲಿ ನೀರು ದಬದಬ ಸುರಿಯುತ್ತಾ ಬಂದ ಎಲೆ ಒರೆಸುವ ನೀರು ನೆಲಕ್ಕೂ ಬಿದ್ದು ಉಟ್ಟ ಬಟ್ಟಿ, ಸೀರೆಯಲ್ಲ ಒದ್ದೆ ಮಾಡಿದ ಅವನ ಹಿಂದೆ ಬಂದವ ಅನ್ನ ಬಡಿಸುವವ ಎಲೆಗಿಂತ ನೆಲದ ಮೇಲೆ ಅನ್ನ ಚೆಲ್ಲಿ ಓಡಿದ ಅವನ ಹಿಂದೆ ಬಂದ ಸಾರು ಬಡಿಸುವವ ಅನ್ನದ ಮೇಲೆ ಸಾರು ಬಡಿಸಿದ್ದಲ್ಲ ಎತ್ತರದಿಂದ ಸುರಿದು ನೀರಿನವನಂತೆ ಬಟ್ಟೆಗೆಲ್ಲ ಸಾರು ಸಾರಿದ ಇದೇ ರೀತಿ ಪಾಯ...