Skip to main content

Posts

Showing posts with the label Qwality of construction only by awareness of local instead of ground breaking circulating work plan and estimate

Blog number 1053. ಕಾಮಗಾರಿ ಎಸ್ಪಿಮೇಟ್ ಗೆ ಗ್ರಾಮಸ್ಥರು ಕೈ ಹಾಕಿದರೆ ಗುಣಮಟ್ಟದ ಕಾಮಗಾರಿ ಸಾಧ್ಯವಿದೆ, ಗುದ್ದಲಿ ಪೂಜೆ ಗುಣಮಟ್ಟದ ಕಾಮಗಾರಿಯ ಜನಜಾಗೃತಿ ವೇದಿಕೆ ಆಗಲಿ

#ಸಮಸ್ಯೆ_ಪರಿಹಾರ_ಮಾರ್ಗ_ಯೋಚಿಸಬೇಕು. #ಸರ್ಕಾರಿ_ಕಾಮಗಾರಿ_ಗುಣಮಟ್ಟ_ಕಾಪಾಡುವ_ಸುಲಭ_ಉಪಾಯವಿದೆ #ಪ್ರತಿ_ಸರ್ಕಾರಿ_ಕಾಮಗಾರಿ_ಎಸ್ಟಿಮೇಟ್_ಗ್ರಾಮಸ್ಥರಿಗೆ_ನೀಡುವುದು #ಗುದ್ದಲಿ_ಪೂಜೆ_ಕೈಬಿಟ್ಟು_ಕಾಮಗಾರಿ_ಎಸ್ಟಿಮೇಟ್_ಗ್ರಾಮಸ್ಥರ_ಕೈಗಿಡುವ_ಮೂಲಕ_ಕಾಮಗಾರಿ_ಉಧ್ಘಾಟನೆ. #ಮಾಹಿತಿ_ಹಕ್ಕಿನಲ್ಲಿ_ಎಸ್ಟಿಮೇಟ್_ಪಡೆಯ_ಬಹುದು. #ನನ್ನ_ಜಿಲ್ಲಾಪಂಚಾಯಿತಿ_ಆವದಿಯಲ್ಲಿ_14_ಇಂಜಿನಿಯರ್_ನನ್ನ_ಕ್ಷೇತ್ರದಿಂದ_ಹೊರಹೋಗಿದ್ದರು. #ಕಳಪೆ_ಕಾಮಗಾರಿ_ಮಾಡುವ_ದುರಾಸೆಯ_ಗುತ್ತಿಗೆದಾರರು_ನನ್ನ_ವಿರುದ್ಧ_ಕತ್ತಿ_ಮಸೆಯುತ್ತಿದ್ದರು. ' #ರಾಜಕಾರಣಿ_ಕಂ_ಗುತ್ತಿಗೆದಾರರು_ಆಗಿನ_ಮಂತ್ರಿ_ಕಾಗೋಡು_ತಿಮ್ಮಪ್ಪರಿಗೆ_ದೂರು_ನೀಡಿದ್ದರು.    ಜನಪ್ರತಿನಿದಿಗಳು ಆಯ್ಕೆ ಆಗಿ ಶಾಸನ ಸಭೆಯಲ್ಲಿ ಶಾಸನ ಮಾಡುವ ಕಾಲ ಈಗಿಲ್ಲ, ವಿವಿದ ಯೋಜನೆಗಳಲ್ಲಿ ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ಹೆಚ್ಚು ಕಾಮಗಾರಿ ಮಾಡಿಸಬೇಕು ಇದಕ್ಕಾಗಿ ಹೆಚ್ಚು ಅನುದಾನ ತರಬೇಕು ಈ ಮೂಲಕ ತಮ್ಮ ಜನಪ್ರಿಯತೆ ಉಳಿಸಿಕೊಳ್ಳುವ ಪ್ರಯತ್ನ ಈಗಿನ ಎಲ್ಲಾ ಜನಪ್ರತಿನಿದಿಗಳದ್ದು.    ಹೆಚ್ಚಾಗಿ ತಮ್ಮ ಪರವಾಗಿ ಚುನಾವಣೆಯಲ್ಲಿ ಸಹಾಯ ಮಾಡುತ್ತಾರೆಂಬ ನಿರೀಕ್ಷೆಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕಾಮಗಾರಿ ಗುತ್ತಿಗೆ ಕೊಡಿಸುತ್ತಾರೆ.   ಹೆಚ್ಚು ಲಾಭದ ನಿರೀಕ್ಷೆಯಲ್ಲಿ ಮತ್ತು ಮದ್ಯವರ್ತಿಗಳ ಕಮೀಷನ್ ಗಳು, ರಾಜಕೀಯ ಪಕ್ಷದ ಸ್ಥಳಿಯರಿಗೆ ದೇಣಿಗೆ...