Blog number 1809. ಭಾಗ - 1 . ಸಂದಿಗ್ದತೆಯಲ್ಲಿ ಅರಣ್ಯ ಅಧಿಕಾರಿಗಳು... ವನ್ಯಜೀವಿ ಕಾಯ್ದೆ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ, ಅರಿವಿಲ್ಲದ ಮಲೆ ನಾಡಿಗರನ್ನು ಜೈಲಿಗೆ ಕಳಿಸುವುದು ವಿರೋದಿಸ ಬೇಕು, ಸರ್ಕಾರ ಮಧ್ಯ ಪ್ರವೇಶಿಸಲಿ, ಮಲೆನಾಡ ಶಾಸಕರು ಈ ಬಗ್ಗೆ ಜವಾಬ್ದಾರಿ ವಹಿಸಲಿ.
#ಭಾಗ_1 #ನಕಲಿ_ಬಂಗಾರ_ಧರಿಸಿ_ಅಸಲಿ_ಬಂಗಾರ_ಅನ್ನುತ್ತಿದ್ದ_ಕಾಲ_ಇತ್ತು. #ಈಗ_ಆಸಲಿ_ಹುಲಿಯುಗುರನ್ನು_ನಕಲಿ_ಹುಲಿಯುಗುರು_ಎನ್ನುವ_ಕಾಲ #ಮಲೆನಾಡಿನ_ಮನೆಗಳಲ್ಲಿರುವ_ಕಾಡು_ಪ್ರಾಣಿಯ_ಕೊಡು_ಚರ್ಮ_ಉಗುರು_ಜೈಲಿಗೆ_ಕಳಿಸುತ್ತದೆ. #ಹಳ್ಳಿ_ಮನೆಯವರ_ಹಿತಶತ್ರುಗಳೇ_ಮೂಕರ್ಜಿ_ವೀರರು. #ಸಂದಿಗ್ದತೆಯಲ್ಲಿ_ಅರಣ್ಯ_ಅಧಿಕಾರಿಗಳು. #ಮಲೆನಾಡಿಗರು_ಎಚ್ಚರವಾಗಿರಿ #ಮಲೆನಾಡ_ಜನಪ್ರತಿನಿಧಿಗಳು_ಮುಖ್ಯಮಂತ್ರಿಗಳಿಂದ_ಸರ್ಕಾರದ_ಮಟ್ಟದಲ್ಲಿ_ಪರಿಹಾರ_ತರಬಾರದೇಕೆ ? ಮಲೆನಾಡಿನ ಹಳ್ಳಿಗಳಲ್ಲಿ ಬೀಟೆ ಮರ, ಸಾಗುವಾನಿ ಮರಗಳಿಂದ ಬಾಗಿಲು - ಕಿಟಕಿ- ಮುಚ್ಚಿಗೆ ಮತ್ತು ಪೀಠೋಪಕರಣ ಮಾಡಿಸುವುದು ಆ ಕಾಲದ ಶ್ರೀಮಂತಿಕೆಯ ಪ್ರದರ್ಶನಕ್ಕೆ ಅನಿವಾಯ೯ ಆಗಿತ್ತು. ಅದರಂತೆ ಆನೆ ದಂತ, ಕಾಡು ಎಮ್ಮೆ ಕೋಡು, ಜಿಂಕೆ - ಕಡದ ಕೋಡುಗಳಿಂದ ಮಾಡಿದ ಟ್ರೋಪಿ ಮನೆ ಪ್ರವೇಶ ದ್ವಾರದಲ್ಲಿ ಅಲಂಕರಿಸಿದರೆ ತಮ್ಮ ಕುಟುಂಬದ ಪ್ರತಿಷ್ಟೆ ಹೆಚ್ಚಾಗುತ್ತದೆ ಎಂಬ ನಂಬಿಕೆ ಇತ್ತು. ಹುಲಿ ಉಗುರ ಲಾಕೇಟಿನ ಬಂಗಾರದ ಸರ ಕೊರಳಲ್ಲಿ, ಆನೆ ಬಾಲದ ಕೂದಲ ಉಂಗುರ - ಬ್ರೇಸ್ ಲೆಟ್ ಕೈಯಲ್ಲಿ ಧರಿಸುವ ಶೋಕಿ ಈಗಲೂ ಇದೆ. ಹದ ಮಾಡಿದ ಹುಲಿ ಚರ್ಮ - ಜಿಂಕೆ ಚರ್ಮದ ಮೇಲೆ ವಿರಾಜಮಾನವಾಗಿ ತಮ್ಮ ಭಕ್ತರಿಗೆ ದರ್ಶನ ನೀಡುವ ಸ್ವಾಮೀಜಿಗಳು ಇದ್ದಾರೆ. ದೇವರ ಕೋಣೆಯಲ್ಲಿ ಮತ್ತು ದೇವಾಲಯದ ಗರ್ಭಗುಡಿಯ...