Skip to main content

Posts

Showing posts with the label Famous hunter of man eater tigers of South India keneth underdone killed two man-eater tigers in Anandapuram region

ಭಾಗ -33, ಆನಂದಪುರಂ ಇತಿಹಾಸ, ಪ್ರಖ್ಯಾತ ದಕ್ಷಿಣ ಭಾರತದ ನರಭಕ್ಷಕ ಹುಲಿ ಶಿಕಾರಿದಾರ ಕೆನತ್ ಆಂಡರ್ಸನ್ ಈ ಭಾಗದ ಎರೆಡು ನರಭಕ್ಷಕ ಹುಲಿ ಕೊಲ್ಲುತ್ತಾರೆ.

#ಭಾಗ_33. #ಆನಂದಪುರಂ_ಇತಿಹಾಸ #ನರಭಕ್ಷಕ_ಹುಲಿ_ಶಿಕಾರಿದಾರ_ಕೆನೆತ್_ಅಂಡರಸನ್_ಆನಂದಪುರಂನಲ್ಲಿ. #ಪೂರ್ಣಚಂದ್ರ_ತೇಜಸ್ಸಿ_ಕಾಡಿನಕಥೆಗಳಲ್ಲಿ_ಆನಂದಪುರಂ_ಸುತ್ತಲಿನ_ಪರಿಸರದ_ಬಗ್ಗೆ_ಕೆನೆತ್_ಅನುಭವಗಳಿದೆ. #ಬೆಳಂದೂರಿನ_ನರಭಕ್ಷಕ_ಮತ್ತು_ಬಾಳೆಕೊಪ್ಪದ_ಪಟ್ಟಿಹುಲಿಗಳು_ನರಭಕ್ಷಕವಾಗಿ_ಈ_ಭಾಗದಲ್ಲಿ_ಅನೇಕರನ್ನು_ತಿಂದಿತ್ತು.    ಆ ಕಾಲದಲ್ಲಿ ಅಂದರೆ ನೂರು ವರ್ಷದ ಹಿಂದೆ ಆನಂದಪುರಂ ದಟ್ಟ ಕಾಡು ಪ್ರದೇಶವಾಗಿತ್ತು, ಕಾಡು ಪ್ರಾಣಿಗಳ ಹಾವಳಿ ಕೂಡ ಅಷ್ಟೇ ಇತ್ತು.   ಇಂತಹ ದಿನದಲ್ಲಿ ಈ ಭಾಗದ ಹುಲಿಯೊಂದು ನರಭಕ್ಷಕನಾಗಿ ಈ ಭಾಗದ ಜನರಲ್ಲಿ ಭಯ ಮತ್ತು ಆತಂಕಕ್ಕೆ ಕಾರಣ ಆಗಿತ್ತು.     ಈ ನರಭಕ್ಷಕನ ಕಾರ್ಯ ಕ್ಷೇತ್ರ ಕುಂಸಿಯ ಬಾಳೆಕೊಪ್ಪದಿಂದ ಚೊರಡಿ,ಆನಂದಪುರಂ, ಅಡೂರು, ಗೌತಮಪುರದಿಂದ ಅಂಬ್ಲಿಗೋಳದ ತನಕವಿತ್ತು, ಈ ಹುಲಿಗೆ ಸಿಂಹಕ್ಕೆ ಇರುವಂತೆ ಕುತ್ತಿಗೆಯಲ್ಲಿ ನೀಳ ಕೇಶವಿದೆ ಅದನ್ನು ನೋಡಿದವರು ಹೇಳಿದ್ದರಿಂದ ಮತ್ತು ಅದು ಮನುಷ್ಯರನ್ನು ತಿಂದ ಪ್ರದೇಶದಲ್ಲಿ ಈ ಕಾರಣದಿಂದ ಸುಲಭವಾಗಿ ಗುರುತಿಸಲಾಗಿದ್ದರಿಂದ ಈ ಹುಲಿಗೆ ಬಾಳೆಕೊಪ್ಪದ ಪಟ್ಟಿ ಹುಲಿ, ಕೇಸರಿ ಪಟ್ಟೆ ನರಭಕ್ಷಕ ಅಂತ ಜನ ಕರೆಯುತ್ತಿರುತ್ತಾರೆ.  ಆನಂದಪುರಂ ಸಮೀಪದ ಹೆಬ್ಬೋಡಿಯಲ್ಲಿ ಎರೆಡು ಜನರನ್ನು ತಿಂದಿತ್ತಂತೆ, ಇದರ ವಿಸ್ತಾರಕಾಯ೯ ಕ್ಷೇತ್ರದಲ್ಲಿ ಅನೇಕರನ್ನು ತಿಂದಿದ್ದರಿಂದ ಬ್ರಿಟೀಷ...