ಭಾಗ -33, ಆನಂದಪುರಂ ಇತಿಹಾಸ, ಪ್ರಖ್ಯಾತ ದಕ್ಷಿಣ ಭಾರತದ ನರಭಕ್ಷಕ ಹುಲಿ ಶಿಕಾರಿದಾರ ಕೆನತ್ ಆಂಡರ್ಸನ್ ಈ ಭಾಗದ ಎರೆಡು ನರಭಕ್ಷಕ ಹುಲಿ ಕೊಲ್ಲುತ್ತಾರೆ.
#ಆನಂದಪುರಂ_ಇತಿಹಾಸ
#ನರಭಕ್ಷಕ_ಹುಲಿ_ಶಿಕಾರಿದಾರ_ಕೆನೆತ್_ಅಂಡರಸನ್_ಆನಂದಪುರಂನಲ್ಲಿ.
#ಪೂರ್ಣಚಂದ್ರ_ತೇಜಸ್ಸಿ_ಕಾಡಿನಕಥೆಗಳಲ್ಲಿ_ಆನಂದಪುರಂ_ಸುತ್ತಲಿನ_ಪರಿಸರದ_ಬಗ್ಗೆ_ಕೆನೆತ್_ಅನುಭವಗಳಿದೆ.
#ಬೆಳಂದೂರಿನ_ನರಭಕ್ಷಕ_ಮತ್ತು_ಬಾಳೆಕೊಪ್ಪದ_ಪಟ್ಟಿಹುಲಿಗಳು_ನರಭಕ್ಷಕವಾಗಿ_ಈ_ಭಾಗದಲ್ಲಿ_ಅನೇಕರನ್ನು_ತಿಂದಿತ್ತು.
ಆ ಕಾಲದಲ್ಲಿ ಅಂದರೆ ನೂರು ವರ್ಷದ ಹಿಂದೆ ಆನಂದಪುರಂ ದಟ್ಟ ಕಾಡು ಪ್ರದೇಶವಾಗಿತ್ತು, ಕಾಡು ಪ್ರಾಣಿಗಳ ಹಾವಳಿ ಕೂಡ ಅಷ್ಟೇ ಇತ್ತು.
ಈ ನರಭಕ್ಷಕನ ಕಾರ್ಯ ಕ್ಷೇತ್ರ ಕುಂಸಿಯ ಬಾಳೆಕೊಪ್ಪದಿಂದ ಚೊರಡಿ,ಆನಂದಪುರಂ, ಅಡೂರು, ಗೌತಮಪುರದಿಂದ ಅಂಬ್ಲಿಗೋಳದ ತನಕವಿತ್ತು, ಈ ಹುಲಿಗೆ ಸಿಂಹಕ್ಕೆ ಇರುವಂತೆ ಕುತ್ತಿಗೆಯಲ್ಲಿ ನೀಳ ಕೇಶವಿದೆ ಅದನ್ನು ನೋಡಿದವರು ಹೇಳಿದ್ದರಿಂದ ಮತ್ತು ಅದು ಮನುಷ್ಯರನ್ನು ತಿಂದ ಪ್ರದೇಶದಲ್ಲಿ ಈ ಕಾರಣದಿಂದ ಸುಲಭವಾಗಿ ಗುರುತಿಸಲಾಗಿದ್ದರಿಂದ ಈ ಹುಲಿಗೆ ಬಾಳೆಕೊಪ್ಪದ ಪಟ್ಟಿ ಹುಲಿ, ಕೇಸರಿ ಪಟ್ಟೆ ನರಭಕ್ಷಕ ಅಂತ ಜನ ಕರೆಯುತ್ತಿರುತ್ತಾರೆ. ಆನಂದಪುರಂ ಸಮೀಪದ ಹೆಬ್ಬೋಡಿಯಲ್ಲಿ ಎರೆಡು ಜನರನ್ನು ತಿಂದಿತ್ತಂತೆ, ಇದರ ವಿಸ್ತಾರಕಾಯ೯ ಕ್ಷೇತ್ರದಲ್ಲಿ ಅನೇಕರನ್ನು ತಿಂದಿದ್ದರಿಂದ ಬ್ರಿಟೀಷ್ ಸರ್ಕಾರ ಆಗಿನ ಪ್ರಖ್ಯಾತ ನರಭಕ್ಷಕ ಹುಲಿ ಶಿಕಾರಿದಾರ ಕೆನೆತ್ ಅಂಡರ್ಸನ್ ಗೆ ಆಹ್ವಾನಿಸುತ್ತದೆ ಆಗ ಆಗಮಿಸುವ ಅವರು ಆನಂದಪುರಂನ ಪ್ರವಾಸಿ ಮಂದಿರದಲ್ಲಿ
ಅನೇಕ ದಿನ ತಂಗಿರುತ್ತಾರೆ ಅಂತೂ ಕೊನೆಗೆ ಅಂಬ್ಲಿಗೋಳದ ಅರಣ್ಯ ಇಲಾಖೆ ವಿಶ್ರಾಂತಿ ಗೃಹದ ಹಿಂಭಾಗದ ಹಳ್ಳದ ಕೋವಿನಲ್ಲಿ ಈ ನರಭಕ್ಷಕನನ್ನು ಕೊಲ್ಲುತ್ತಾರೆ ಆ ಹುಲಿಯ ಕುತ್ತಿಗೆಯಲ್ಲಿ ಸಿಂಹದಂತೆ ಕೇಶವಿದ್ದದ್ದನ್ನು ಕೆನೆತ್ ಅಂಡರ್ಸ್ನ್ ಇಂಗ್ಲೀಷ್ ಭಾಷೆಯಲ್ಲಿ ಪುಸ್ತಕ ಬರೆದಿದ್ದಾರೆ ಅದನ್ನು ತೇಜಸ್ವಿಯವರ ಕಾಡಿನ ಕಥೆ ಪುಸ್ತಕ ಭಾಗ 1 - 2 - 3 - 4 ರಲ್ಲಿ ಸುಂದರವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಇದೇ ರೀತಿ ಇನ್ನೊಂದು ನರಭಕ್ಷಕ ತ್ಯಾಗರ್ತಿ ಸಮೀಪದಲ್ಲಿ ಅನೇಕರನ್ನು ತಿನ್ನುತ್ತಿತ್ತು ಇದಕ್ಕೆ ಬೆಳ್ಳಂದೂರಿನ ನರಭಕ್ಷಕನೆಂದೆ ಹೆಸರಾಗಿತ್ತು ಇದನ್ನು ಕೆನೆತ್ ಅಂಡರ್ಸಸ್ ಕೊಲ್ಲುತ್ತಾರೆ (ಬೆಳಂದೂರಿನ ನರಭಕ್ಷಕ )
ಇವರ ಜನನ 8- ಮಾರ್ಚ್ - 1910 ಬೆಂಗಳೂರು ಮರಣ 30 - ಆಗಸ್ಟ್ - 1974.
ಇವರು ವಿಶೇಷವಾಗಿ ದಕ್ಷಿಣ ಭಾರತದ ಅನೇಕ ನರಭಕ್ಷಕ ಹುಲಿಗಳನ್ನು ಸಂಹರಿಸಿ ಜನರ ಕಷ್ಟ ಪರಿಹರಿಸುತ್ತಾರೆ ಆ ಕಾಲದಲ್ಲಿ ಸ್ಟಡಿ ಬೇಕರ್ ಕಾರು ಹೊಂದಿದ್ದರು ಮತ್ತು ಶಿಕಾರಿಗೆ 405 ವಿಂಚೆಸ್ಟರ್ ಮಾಡೆಲ್ (1895) ರೈಪಲ್ ಬಳುಸುತ್ತಿರುತ್ತಾರೆ.
ಇವರು ತಾವು ಕೊಂದಿದ್ದ ನರಭಕ್ಷಕ ಹುಲಿಗಳ ಶಿಕಾರಿಯ ರೋಚಕ ಅನುಭವಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಬರೆದು ಪ್ರಕಟಿಸಿದ್ದರಿಂದ ಇವರ ಶಿಕಾರಿ ಪುಸ್ತಕಗಳು ಯೂರೋಪಿನಲ್ಲಿ ತುಂಬಾ ಪ್ರಸಿದ್ದಿ ಆಗುತ್ತದೆ ಈ ಪುಸ್ತಕದಲ್ಲಿ ಆನಂದಪುರಂ ಭಾಗದ ಎರೆಡು ನರಭಕ್ಷಕ ಕೊಂದಿದ ವೃತ್ತಾಂತ, ಆನಂದಪುರಂನಲ್ಲಿನ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಘಟನೆಗಳ ವಿವರ ಪೂರ್ಣಚಂದ್ರ ತೇಜಸ್ವಿಯವರು ಇವರ ಪುಸ್ತಕ ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ತನಕ ಆನಂದಪುರಂ ಭಾಗದವರಿಗೆ ಮರೆತು ಹೋದ ಘಟನೆ ಆಗಿತ್ತು.
ಆಗಿನ ದಟ್ಟ ಕಾಡು, ಕಾಡುಪ್ರಾಣಿಗಳು, ನರಭಕ್ಷಕ ಆಗಿದ್ದ ಹುಲಿ ಶಿಕಾರಿಗೆ ಬ್ರಿಟೀಷ್ ಸರ್ಕಾರ ಆಗಿನ ಪ್ರಖ್ಯಾತ ಶಿಕಾರಿದಾರ ಕೆನತ್ ಆಂಡರ್ಸನ್ ಕಳಿಸುವುದು ಅವರು ಅದನ್ನು ಸಂಹರಿಸಿದ್ದು ಎಲ್ಲಾ ಈಗ ನಂಬಲಾಗದ ಇತಿಹಾಸ ಕಾರಣ ಈಗ ಆನಂದಪುರಂ ಭೌಗೋಳಿಕವಾಗಿ ತನ್ನ ದಟ್ಟ ಅರಣ್ಯದಿಂದ ಬಯಲು ನಾಡಾಗಿ ಬದಲಾಗಿದೆ.
(ನಾಳೆ ಭಾಗ- 34)
Comments
Post a Comment