ಮುಂಗಾರು ಮಳೆಯಲ್ಲಿ ಪಶ್ಚಿಮ ಘಟ್ಟದ ತೊಯ್ದ ಅರಣ್ಯ ಭೂಮಿಯಲ್ಲಿ ತ್ರತ್ಯಕ್ಷವಾಗುವ ವಿವಿದ ಅಣಬೆಗಳು ಇದರಲ್ಲಿ ಕೆಲವೇ ಕೆಲವು ಮಾತ್ರ ತಿನ್ನಲು ಯೋಗ್ಯ ಮತ್ತು ವಿಬಿನ್ನ ರುಚಿ ಇರುವುದು
#ಮಲೆನಾಡಿನ_ಸಂಪ್ರದಾಯಿಕ_ಆಹಾರ_ಕೂಡ
#ಕಳಲೆ_ಮರ_ಕೆಸ_ಅಣಬೆ_ಹೀಗೆ.
#ಇವತ್ತಿನ_ಉಪಹಾರ_ರೊಟ್ಟಿ_ಮತ್ತು_ಅಣಬೆ_ಪಲ್ಯ
ಪಶ್ಚಿಮ ಘಟ್ಟದಲ್ಲಿ 51 ವಿದದ ಅಣಬೆಗಳಲ್ಲಿ 8 ವಿದದ ಅಣಬೆ ಮಾತ್ರ ತಿನ್ನಲು ಯೋಗ್ಯವಂತೆ. ತರಕಾರಿ ಗುಂಪಿನ ಸಸ್ಯ ವರ್ಗಕ್ಕೆ ಸೇರಿದ ಶಿಲೀಂದ್ರ ಈ ಅಣಬೆ ಉತ್ತಮ ಆಹಾರ ಮತ್ತು ಇದರಲ್ಲಿ ಶರ್ಕರ ಪಿಷ್ಟ ಕಡಿಮೆ ಇರುವುದರಿಂದ ಡಯಾಬಿಟೀಸ್ ಇರುವವರಿಗೆ ಒಳ್ಳೆಯ ಆಹಾರ ಇದು.
ನಾನು ನೋಡಿದ್ದು ಇದರಲ್ಲಿ ಕೆಲವೇ ಕೆಲವು ಮತ್ತು ತಿಂದಿದ್ದು ಇನ್ನೂ ಕೆಲವು ಮಾತ್ರ.
ನಮ್ಮಲ್ಲಿ ಹೆಚ್ಚಾಗಿ ಸಿಗುವುದು ಹೆಗ್ಗಲಾಣಬೆ ಅಂತ( ಇದನ್ನು ಬೇರೆ ಹೆಸರಲ್ಲೂ ಕರೆಯುತ್ತಾರೆ) ಇದರಲ್ಲಿ ಕಪ್ಪು ಮೊಗ್ಗು ಮತ್ತು ಬಿಳಿ ಮೊಗ್ಗು ಎಂಬ ಎರೆಡು ವಿದವಿದೆ.
ಮುಂಗಾರು ಮಳೆ ಪ್ರಾರಂಭದಲ್ಲಿ ಮತ್ತು ಮುಕ್ತಾಯದ ದಿನಗಳಲ್ಲಿ ಅರಣ್ಯ ಪ್ರದೇಶದಲ್ಲಿ ದೊರೆಯುತ್ತದೆ ಇದಕ್ಕೆ ಬೇಡಿಕೆ ಜಾಸ್ತಿ ರುಚಿ ಜಾಸ್ತಿ ಆದ್ದರಿಂದ ಕೆಜಿಗೆ 300 ಕ್ಕೂ ಹೆಚ್ಚು ಬೆಲೆಗೆ ಮಾರಾಟ ಆಗುತ್ತೆ.
ನುಚ್ಚಾಣುಬೆ ಹೆಸರು ಹೇಳುವಂತೆ ಸಣ್ಣ ಗಾತ್ರದ್ದು, ರುಚಿ ಜಾಸ್ತಿ ಆದರೆ ಇದನ್ನು ಕಿತ್ತು ತಂದು ಸ್ವಚ್ಚ ಮಾಡುವುದು ಮೈತುಂಬಾ ಕೆಲಸವಾದ್ದರಿಂದ ಇದರ ಬಳಕೆ ಸಲೀಸಲ್ಲ. (ಸಣ್ಣವನಾಗಿದ್ದಾಗ ತಿಂದ ನೆನಪು)
ಎಣ್ಣಾಣುಬೆ (ಮೇಲ್ಪದರ ಎಣ್ಣೆ ಇದ್ದ೦ತೆ ಇರುತ್ತದೆ) ಕೂಡ ಅತ್ಯಂತ ರುಚಿಕರವಾದ ಅಣುಬೆ ಹೆಚ್ಚು ಜನ ಬಳಸುತ್ತಾರೆ.
ರಾಣಿ ಬೆನ್ನೂರು ಹುಬ್ಬಳಿ ಬಾಗದಲ್ಲಿ ಹುತ್ತದ ಮಣ್ಣಿನಲ್ಲಿ ಹೆಚ್ಚು ಬೆಳೆಯುವ ಹುತ್ತದ ಅಣಬೆ ಬಳಕೆಯಲ್ಲಿದೆ. (ನಾನು ರುಚಿ ನೋಡಿಲ್ಲ)
ದೂಪದ ಮರದ ಬುಡದಲ್ಲಿ ಬೀಳುವ ಒಣ ಎಲೆ ಮರೆಯಲ್ಲಿ ಬರುವ ಕಪ್ಪು ಬಣ್ಣದ ತಲೆಯ ಮಣ್ಣು ಆಣಬೆ ಅತ್ಯಂತ ರುಚಿಕರ ಅಂತೆ ಆದರೆ ಇದು ಸಾವಿರ ರೂಪಾಯಿ ಕೊಟ್ಟರು ಸಿಗುವುದಿಲ್ಲ. (ಪ್ರಯತ್ನ ಪಟ್ಟರು ಸಿಕಿಲ್ಲ)
ಕೂಗಲು ಅಣಬೆ ಕೋಳಿ ಮಾಂಸದ ರುಚಿ ಇರುತ್ತದೆ, ಕಿತ್ತಳೆ ಹಣ್ಣಿನ ಗಾತ್ರದ ಮೇಲು ಬಾಗ ಅರಿಶಿಣ ಬಣ್ಣ ಒಳಗೆ ಕಪ್ಪು ಮತ್ತು ಬಿಳಿ ಬಣ್ಣದ ಈ ಅಣಬೆಗೆ ಬಾರೀ ಬೇಡಿಕೆ ಇದೆ. (ಗೆಳೆಯರ ಅನುಭವ)
ಕೊಡಗಿನ ಮ್ಯಾಜಿಕ್ ಮಷ್ರೂ೦ ತಿಂದರೆ 24 ಗಂಟೆ ಅಮಲು ಇರುತ್ತದೆ ಎನ್ನುವ ಸುದ್ದಿ ಇದೆ. (ಪ್ರವಾಸೋದ್ಯಮ ಲೇಖನದಲ್ಲಿ ಮಾತ್ರ ನೋಡಿದ್ದು)
ಕೃತಕವಾಗಿ ಬೆಳೆದು ಮಾರಾಟ ಮಾಡುವ ಅಣಬೆ ಉದ್ಯಮವೂ ಬೆಳೆದಿದೆ ಆದರೆ ಪಶ್ಚಿಮ ಘಟ್ಟದ ಮುಂಗಾರು ಮಳೆ ಅವಲಂಬಿಸಿ ನೈಸರ್ಗಿಕವಾಗಿ ಬೆಳೆಯುವ ಅಣಬೆ ರುಚಿ ಮಾತ್ರ ವಿಶಿಷ್ಟ ಇವತ್ತು ಈ 2021ರ ಮುಂಗಾರಿನ ಮೊದಲ ಅಣಬೆ ರುಚಿ ಅಕ್ಕಿ ರೊಟ್ಟಿಯೊಂದಿಗೆ ತಿಂದೆ.
Comments
Post a Comment