ಭಾಗ-41, ಆನಂದಪುರಂ ಇತಿಹಾಸ, ಕುಪ್ಪಣ್ಣ ಆನಂದಪುರಂನ ಸಜ್ಜನ ಸಂಪನ್ನ ಸ್ವಚ್ಚತಾಗಾರ ಮತ್ತು ಬದರಿನಾರಾಯಣ ಅಯ್ಯಂಗಾರ್ ಕುಟುಂಬದ ಕೃಪ ಕಟಾಕ್ಷ ಹೊಂದಿದ್ದ ಕುಟುಂಬ
#ಆನಂದಪುರಂ_ಇತಿಹಾಸ.
#ಆನಂದಪುರಂ_1960ರಿಂದ_ನಿರಂತರ_ಸ್ವಚ್ಚತಾ_ಕೆಲಸಗಾರ_ಕುಪ್ಪಣ್ಣ .
#ಮ೦ತ್ರಿ_ಬದರಿನಾರಾಯಣಅಯ್ಯಂಗಾರ್_ಮತ್ತು_ವೆಂಕಟಾಚಲಯ್ಯಂಗಾರ್_ಕೃಪಕಟಾಕ್ಷ_ಇದ್ದ_ಕುಟುಂಬ.
#ಗ್ರಾಮಪಂಚಾಯತ್_ಗರಿಷ್ಟ_ಸಂಬಳ_ಮಾಸಿಕ_ಒಂದು_ಸಾವಿರ_ಮಾತ್ರ
#ಇವತ್ತೂ_ಆನಂದಪುರಂನಲ್ಲಿ_ಘನತೆ_ಗೌರವ_ಗಳಿಸಿಕೊಂಡ_ಕುಪ್ಪಣ್ಣ_ಕುಟುಂಬ.
1960 ರಲ್ಲಿ ಬದರಿನಾರಾಯಣ ಅಯ್ಯಂಗಾರ್ ಸಹೋದರ ವೆಂಕಟಾಚಲ ಅಯ್ಯಂಗಾರರು ವಿಲೇಜ್ ಪಂಚಾಯತ್ ನಿರಂತರ ಅಧ್ಯಕ್ಷರು. ಜಮೀನ್ದಾರರು, ಕೊಡುಗೈ ದಾನಿಗಳು ಅಯ್ಯಂಗಾರ್ ಕುಟುಂಬದ ಯಜಮಾನರು ಕೂಡ ಮತ್ತು ಸಹೋದರ ಬದರಿನಾರಾಯಣ ಅಯ್ಯಂಗಾರ್ ಈ ಕ್ಷೇತ್ರದ ಶಾಸಕರು.
ಹೀಗಿರುವಾಗ ಆನಂದಪುರಂ ಸ್ವಚ್ಚತೆಗೆ ಅವರದ್ದು ಮೊದಲ ಆಧ್ಯತೆ ಆಗ ಈ ವೃತ್ತಿ ಮಾಡುತ್ತಿದ್ದ ಚಿನ್ನಸ್ವಾಮಿ ಒಳ್ಳೆಯ ಮನುಷ್ಯನೇ ಆದರೆ ದಿನೇ ದಿನೇ ಕುಡಿತದ ಹವ್ಯಾಸ ಹೆಚ್ಚು ಮಾಡಿ ವೃತ್ತಿ ಅಸಡ್ಡೆ ಮಾಡುತ್ತಾ ಇದ್ದಿದ್ದರಿಂದ ವೆಂಕಟಾಚಲ ಅಯ್ಯಂಗಾರರಿಗೆ ಚಿಂತೆ ಆಗುತ್ತದೆ.
ಪಕ್ಕದ ರಿಪ್ಪನ್ ಪೇಟೆ ಹೊಸನಗರ ತಾಲ್ಲೂಕಿಗೆ ಸೇರಿದ್ದರು ಸಾಗರ - ಹೊಸನಗರ- ತೀರ್ಥಹಳ್ಳಿ ತಾಲ್ಲೂಕ್ ಸೇರಿ ಒಂದು ವಿದಾನ ಸಭಾ ಕ್ಷೇತ್ರ ಆಗಿತ್ತು ಮತ್ತು ಈ ಕ್ಷೇತ್ರದ ಶಾಸಕ ಬದರಿನಾರಾಯಣ ಅಯ್ಯಂಗಾರರನ್ನು ಗೆಲ್ಲಿಸಲು ವೆಂಕಟಾಚಲ ಆಯ್ಯಂಗಾರರ ಶ್ರಮವೇ ಹೆಚ್ಚಿನದ್ದು ಹಾಗಾಗಿ ಆಗ ರಿಪ್ಪನ್ ಪೇಟೆಯ ವಿಲೇಜ್ ಪಂಚಾಯತ್ ಅಧ್ಯಕ್ಷರು ಸುಲೇಮಾನ್ ಸಾಹೇಬರು ಅಲ್ಲಿನ ವಿಲೇಜ್ ಪಂಚಾಯತ್ ಕಾರ್ಯದಶಿ೯ ಕಂ ವಿಲೇಜ್ ಅಕೌಂಟೆಂಟ್ ಆಗಿದ್ದವರು ಆನಂದಪುರಂನ ವೇದನಾರಾಯಣ ಭಟ್ಟರ ಪುತ್ರ ಸುಂದರೇಶ್ (ರಂಗನಾಥ ಭಟ್ಟರ ಸಹೋದರ ಮತ್ತು ಕಂಪ್ಯೂಟರ್ ದೀಪು ತಂದೆ) ಇವರೆಲ್ಲ ಸೇರಿ ಅವರಲ್ಲಿನ ಸ್ವಚ್ಚತಾ ಸಿಬ್ಬ೦ದಿಗೆ ಮನ ಒಲಿಸಿ ಮೈಸೂರಿನ ಕೊಳ್ಳೆಗಾಲದಿಂದ ಅವರ ಪತ್ನಿ ಅಣ್ಣನ ಕುಟುಂಬ ಆನಂದಪುರಂಗೆ ಕರೆಸುತ್ತಾರೆ.
ಅದೇ ಕುಪ್ಪಣ್ಣ ಮತ್ತು ರಂಗಮ್ಮ ದಂಪತಿಗಳು ಮತ್ತು ಕುಪ್ಪಣ್ಣ ಸಹೋದರ ಅಮಾಸೆ ಕುಟುಂಬ ಆನಂದಪುರಂಗೆ ಬರುತ್ತಾರೆ, ಇವರಿಗೆ ವೆಂಕಟಾಚಲ ಅಯ್ಯ೦ಗಾರರ ತಂದೆ ತಮ್ಮ ಪುತ್ರ ಜಗನ್ನಾಥರ ಸ್ಮರಣಾರ್ಥ ನಿಮಿ೯ಸಿದ್ದ ಜಗನ್ನಾಥ ಸ್ಮಾರಕ ಪಶು ವೈದ್ಯ ಶಾಲೆ ಹಿಂಭಾಗದ ತಮ್ಮ ಸ್ವಂತ ಜಾಗ ನೀಡುತ್ತಾರೆ.
ಕುಪ್ಪಣ್ಣ ಕುಟುಂಬ ಅಯ್ಯಂಗಾರರ ನಿಷ್ಟಾವಂತ ಕಾಮಿ೯ಕರಾಗಿ ಅಯ್ಯ೦ಗಾರರ ಕುಟುಂಬದ ಕೃಪಕಟಾಕ್ಷ ಪಡೆಯುತ್ತದೆ, ಕುಪ್ಪಣ್ಣ ವಿಲೇಜ್ ಪಂಚಾಯತ್ ಸ್ವಚ್ಚತಾ ಸಿಬ್ಬಂದಿ ಆಗಿ ಅತಿ ಕನಿಷ್ಟ ಸಂಬಳದಲ್ಲಿ ಊರಿನ ಸ್ವಚ್ಚತೆಯ ಗರಿಷ್ಟ ಕೆಲಸ ನಿರಂತರವಾಗಿ ಮಾಡುತ್ತಾರೆ, ಮಂಡಲ್ ಪಂಚಾಯತ್ ನಂತರ ಗ್ರಾಮ ಪಂಚಾಯತ್ ಆಗಿ ಪರಿವರ್ತನೆ ಆಗುವವರೆಗೆ ಕೆಲಸ ಮಾಡಿ ನಿವೃತ್ತರಾಗುವಾಗ ಇವರ ಸಂಬಳ ಒಂದು ಸಾವಿರ ಮಾತ್ರ.
ಕಳ್ಳತನ ಸುಳ್ಳು ತನ ಮಾಡದ ಗೌರವಾನ್ವಿತ ಜೀವನ ಮಾಡಿದ ಕುಪ್ಪಣ್ಣ ಕುಟುಂಬ ಆನಂದಪುರಂನಲ್ಲಿ ಘನತೆ ಗೌರವ ಉಳಿಸಿಕೊಂಡು ಬಂದಿದೆ ಈಗಲೂ ಈ ಕುಟುಂಬದವರು ಶ್ರಮದಿಂದ ಉದ್ಯೋಗ ಮಾಡಿ ಜೀವನ ಮಾಡುತ್ತಿದೆ, ತೆಲಗು ಮತ್ತು ತಮಿಳು ಎರೆಡೂ ಬಾಷೆ ಇವರದ್ದು.
ಕುಪ್ಪಣ್ಣ ಮತ್ತು ರಂಗಮ್ಮ ದಂಪತಿಗೆ ರತ್ನಮ್ಮ, ಗಾಯತ್ರಿ ಮತ್ತು ಮಂಜುಳ ಎಂಬ ಮೂರು ಪುತ್ರಿಯರು, ನಾಗಪ್ಪ, ಬನ್ನು ಸ್ವಾಮಿ, ಮಾರಪ್ಪ, ಚಂದ್ರ ಮತ್ತು ಸುಬ್ರಮಣ್ಯ ಎಂಬ ಐದು ಪುತ್ರರು.
ನಾಗಪ್ಪ ಆನಂದಪುರಂನ ಶುಂಠಿ ವ್ಯಾಪಾರಿ ಪ್ರಹ್ಲಾದರ ಸಹೋದರ ನಾಗಣ್ಣನ ಮನೆ ಎದುರಿನ ಬಾವಿ ಕೆಸರು ತೆಗೆಯುವ ಕೆಲಸದ ಸಂದರ್ಭದಲ್ಲಿ ಉಸಿರುಗಟ್ಟಿ ಮೃತರಾಗಿದ್ದು ಈ ಕುಟುಂಬಕ್ಕೆ ದೊಡ್ಡ ಆಘಾತ, ಇನ್ನೊಬ್ಬ ಪುತ್ರ ಬನ್ನು ಸ್ವಾಮಿ ಕೂಡ ಈಗಿಲ್ಲ ಉಳಿದವರು ಆನಂದಪುರ೦ನ ಮೂಲ ಮನೆಯಲ್ಲಿ ಮತ್ತು ಆನಂದಪುರಂನ ಸಿದ್ದೇಶ್ವರ ಕಾಲೋನಿಯಲ್ಲಿ ನೆಲೆಸಿದ್ದಾರೆ.
ಪುತ್ರಿ ರತ್ನಮ್ಮಳ ಮಗ ಆನಂದ ಅತ್ಯುತ್ತಮ ಕಾರ್ಪೆಂಟರ್ ಆಗಿ ಜೀವನ ಸಾಗಿಸುತ್ತಿದ್ದಾರೆ.
ಕುಪ್ಪಣ್ಣನ ತಮ್ಮ ಅಮಾಸೆ ಮತ್ತು ದಂಪತಿಗಳಿಗೆ ಮೂವರು ಪುತ್ರರು ರಾಜು, ಮಂಜು ಮತ್ತು ಶಂಕರ ಹಾಲಿ ಗ್ರಾಮ ಪಂಚಾಯತ್ ನಲ್ಲಿ ಶಂಕರ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ.
1995ರಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾದಾಗ ಆಗಿನ ಸಂತೆ ಮಾಕೆ೯ಟ್ ರಸ್ತೆಗೆ ಮೊದಲ ಬಾರಿಗೆ ಡಾಂಬರಿಕರಣ ಮಂಜೂರು ಮಾಡಿಸಿದಾಗ ಸದರಿ ಡಾಂಬರಿಕರಣ ಕಾಮಗಾರಿ ಗುದ್ದಲಿ ಪೂಜೆ ನಮ್ಮ ಊರಿನ ಹಿರಿಯ ಸ್ವಚ್ಚತಾ ಕಾರ್ಮಿಕ ಕುಪ್ಪಣ್ಣರಿಂದ ಮಾಡಿಸಿದ್ದು ಈ ಸಂದರ್ಭದಲ್ಲಿ ಕುಪ್ಪಣ್ಣರಿಗೆ ಶಾಲು ಹೊದೆಸಿ ಹಾರ ಹಾಕಿ ಸನ್ಮಾನಿಸಿದಾಗ ವಯೋವೃದ್ಧ ಕುಪ್ಪಣ್ಣನ ಕಣ್ಣಲ್ಲಿ ಬಂದ ಆನಂದಬಾಷ್ಪ ನನಗೆ ಇವತ್ತು ನೆನಪಿದೆ, ಕುಪ್ಪಣ್ಣ 2001 ರಲ್ಲಿ ಇಹಲೋಕ ತ್ಯಜಿಸಿದ್ದರು ಅವರ ನೆನಪು ಆನಂದಪುರಂನಲ್ಲಿ ಸದಾ ಇದೆ.
(ನಾಳೆ ಭಾಗ-42)
Comments
Post a Comment