ಭಾಗ-40, ಆನಂದಪುರಂ ಇತಿಹಾಸ, ಸ್ವಾತಂತ್ರ್ಯ ಪೂರ್ವದ ಆನಂದಪುರಂನ ಏಕೈಕ ಖಾಲಿ ದೋಸೆ ಕಾಯಿ ಚಟ್ನಿಯ ಪ್ರಖ್ಯಾತಿಯ ಕಾಮತ್ ಹೋಟೆಲ್ (ಗೋವಿಂದಣ್ಣನ ಹೋಟೆಲ್ )
#ಆನಂದಪುರಂ_ಇತಿಹಾಸ
#ಸ್ವಾತಂತ್ರ್ಯ_ಪೂರ್ವದಿಂದ_ಇರುವ_ಕಾಮತ್_ಹೋಟೆಲ್
#ಮೂಲ_ಮಾಲಿಕರು_ಲಕ್ಷ್ಮಣ್_ಕಮ್ತಿ
#ಖಾಲಿದೋಸೆ_ಇಡ್ಲಿ_ಕಾಯಿಚಟ್ನಿ_ಇವತ್ತಿಗೂ_ಪ್ರಸಿದ್ಧ.
ಆನಂದಪುರಂನ ಹೋಟೆಲ್ ಉದ್ಯಮದಲ್ಲಿ ಅತ್ಯಂತ ಹಳಬರು ಮತ್ತು ಸ್ವಾತಂತ್ರ್ಯ ಪೂರ್ವದ ಏಕೈಕ ಹೋಟೆಲ್ ಕಾಮತ್ ಹೋಟೆಲ್, ಖಾಲಿ ದೋಸೆ ಕಾಯಿ ಚಟ್ನಿಗೆ ಆ ಕಾಲದಿಂದಲು ಇದು ಪೇಮಸ್ ಹೋಟೆಲ್.
ಜನ ಲಕ್ಷ್ಮಣ್ ಕಮ್ತಿ ಅಂತ ಕರೆಯುತ್ತಿದ್ದ ಲಕ್ಷ್ಮಣ ಕಾಮತರ ದಿನಸಿ ಅಂಗಡಿ ಜೊತೆಗಿನ ಈ ಹೋಟೆಲ್ ಉದ್ಯಮ ಮೊದಲು ಆಸ್ಪತ್ರೆ ಎದರು ಇತ್ತಂತೆ ಇವರು ಮೂಲ ಅಯನೂರಿನಿಂದ ಇಲ್ಲಿಗೆ ಬರುತ್ತಾರೆ.
ಲಕ್ಷ್ಮಣ ಕಾಮತರ ನಂತರ ಅವರ ಮಗ ಗೋವಿಂದ್ ಕಾಮತ್ ರು ಈ ಉದ್ಯಮ ಮುಂದುವರಿಸುತ್ತಾರೆ ಈ ಹೋಟೆಲ್ ಬೋರ್ಡ್ ಕಾಮತ್ ಹೋಟೆಲ್ ಆದರೂ ಅದು ಪ್ರಸಿದ್ದಿಯಾಗಿ ಜನರ ಬಾಯಲ್ಲಿ ಗೋವಿಂದಣ್ಣನ ದೋಸೆ ಹೋಟೆಲ್ ಅಂತಲೇ ಪ್ರಸಿದ್ಧವಾಗಿದೆ.
ಗೋವಿಂದ್ ಕಾಮತ್ರಿಗೆ ಏಳು ಗಂಡು ಮತ್ತು ಇಬ್ಬರು ಪುತ್ರಿಯರು ಹಿರಿಯ ಪುತ್ರಿ ರಮಾಬಾಯಿ, ರಾಮದಾಸ್ ಕಾಮತ್, ವಿಷ್ಣು ಕಾಮತ್, ಗಣಪತಿ ಕಾಮತ್, ಮಾರುತಿ ಕಾಮತ್, ಗೋಪಾಲ್ ಕಾಮತ್, ಜಗದೀಶ್ ಕಾಮತ್, ಶ್ರೀನಿವಾಸ್ ಕಾಮತ್ ಮತ್ತು ಕಿರಿಯ ಪುತ್ರಿ ಕಸ್ತೂರಿ ಕಾಮತ್.
ರಾಮದಾಸ ಕಾಮತ್ ಬಸ್ ಅಪಘಾತದಲ್ಲಿ ಮೃತರಾಗಿದ್ದು ಈ ಕುಟುಂಬಕ್ಕೆ ದೊಡ್ಡ ಆಘಾತ ಆಗಿದ್ದ ಘಟನೆ, ಗೋವಿಂದಪ್ಪರ ಮಕ್ಕಳಲ್ಲಿ ಗಣಪತಿ ಕಾಮತ್ ಮತ್ತು ಮಾರುತಿ ಕಾಮತ್ ಆನಂದಪುರಂನಲ್ಲೇ ಹೋಟೆಲ್ ಉದ್ಯಮ ಮುಂದುವರಿಸಿದ್ದಾರೆ.
ಒಂದು ವಿಶೇಷ ಅಂದರೆ ಅವತ್ತಿಂದ ಇವತ್ತಿನವರೆಗೆ ಮನೆಯವರೇ ಸಂಪೂರ್ಣ ಹೋಟೆಲ್ ಕೆಲಸ ನಡೆಸುವುದು ಈ ಹೋಟೇಲ್ ನಡೆದು ಬಂದ ಪದ್ಧತಿ.
Comments
Post a Comment