ಭಾಗ-37, ಆನಂದಪುರಂ ಇತಿಹಾಸ, ಶಿವಮೊಗ್ಗ ಜಿಲ್ಲೆಯ ಪ್ರಭಾವಿ ಕಾಂಗ್ರೇಸ್ ರಾಜಕಾರಣಿ ಬದರಿನಾಯಣ ಅಯ್ಯಂಗಾರರು ದೇವರಾಜು ಅರಸರ ಮಂತ್ರಿ ಮಂಡಲದಲ್ಲಿ ವಿದ್ಯಾ ಮಂತ್ರಿ ಆಗಿದ್ದವರಿಂದ ರಾಜಿನಾಮೆ ಪಡೆಯುವ ಷಡ್ಯಂತ್ರ
*#ಆನಂದಪುರಂ_ಇತಿಹಾಸ.*
*#ವಿದ್ಯಾಮಂತ್ರಿ_ಬದರಿನಾರಾಯಣರ_ರಾಜಿನಾಮೆ.*
*#ಇಂದಿರಾಗಾಂಧಿಗೆ_ಸುಳ್ಳು_ಮಾಹಿತಿ_ನೀಡಿದ_ಪ್ರಕರಣ*
*#ರಾಜಿನಾಮೆ_ಬೇಡ_ಕಾಲಾವಕಾಶ_ಕೊಡಿ_ಎಂದು_ಮುಖ್ಯಮಂತ್ರಿ_ದೇವರಾಜ್_ಅರಸ್*
*#ಶಿವಮೊಗ್ಗದ_ಹೊಸನಗರದ_ಶಾಸಕರಾಗಿದ್ದ_ಶಿರ್ನಾಳಿ_ಚಂದ್ರಶೇಖರ್_ಕಾರಣ.*
*ಆನಂದಪುರಂನ ಬದರಿನಾರಾಯಣ ಅಯ್ಯಂಗಾರರರು ಕರ್ನಾಟಕ ಪ್ರದೇಶ ಕಾಂಗ್ರೇಸ್ ನ ಆಗಿನ ಖಾಯಂ ಖಜಾಂಚಿಗಳು, ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಶಾಸಕರಾಗಿ ವಿದ್ಯಾ ಮಂತ್ರಿ ಆಗಿದ್ದು ಅವತ್ತಿನ ಕಾಲದಲ್ಲಿ ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಬದರಿನಾರಾಯಣ ಅಯ್ಯಂಗಾರ್ ಎಷ್ಟು ಪ್ರಬಾವಶಾಲಿ ಅನ್ನುವುದು ಅಂದಾಜಿಸಬಹುದು.*
*ಮುಖ್ಯಮ೦ತ್ರಿ ನಿಜಲಿಂಗಪ್ಪರ ವಿರುದ್ಧ ದೇವರಾಜ ಅರಸರ ಬಂಡಾಯಕ್ಕೆ ನೀರು ಗೊಬ್ಬರ ಹಾಕಿ ಪೋಷಿಸಿದವರೇ ಬದರಿನಾರಾಯಣ್ ಅಯ್ಯಂಗಾರರು, ಮುಂದೆ ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಅವಧಿಯಲ್ಲೂ ಹಿರಿಯ ಶಾಸಕರೂ ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಮುಖಂಡರಾಗಿದ್ದ ಬದರಿ ನಾರಾಯಣ ಅಯ್ಯಂಗಾರರಿಗೆ ದೇವರಾಜ ಅರಸರ ಗುಂಪು ಎಂಬ ಕಾರಣದಿಂದ ಮಂತ್ರಿ ಸ್ಥಾನ ಸಿಗುವುದಿಲ್ಲ.*
*ದೇವರಾಜ್ ಅರಸರು ಮುಖ್ಯಮಂತ್ರಿ ಆದ ಮೇಲೆ ಬದರಿನಾರಾಯಣ ಅಯ್ಯಂಗಾರರಿಗೆ ಕ್ಯಾಬಿನೆಟ್ ದರ್ಜೆ ವಿದ್ಯಾ ಮಂತ್ರಿ ಸ್ಥಾನ ಸಿಗುತ್ತದೆ ಇದು ಇಡೀ ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಕ್ಷದಲ್ಲಿ ಸಂಚಲನ ಉಂಟು ಮಾಡುತ್ತದೆ.*
*ಒಂದೆ ಒಂದು ಪೈಸೆಯ ಭ್ರಷ್ಟಾಚಾರ ಇಲ್ಲದ, ಸಾತ್ವಿಕ ಜೀವನದ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬದರಿನಾರಾಯಣ ಅಯ್ಯಂಗಾರರು ವಿದ್ಯಾ ಮಂತ್ರಿಗಳಾಗಿ ಸುಮ್ಮನೆ ಕೂರಲಿಲ್ಲ ರಾಜ್ಯದದ್ಯಾಂತ ಶಿಕ್ಷಣ ಇಲಾಖೆಯ ಉನ್ನತೀಕರಣಕ್ಕಾಗಿ ಪ್ರವಾಸ, ಅಧ್ಯಯನ ಮಾಡಲು ಪ್ರಾರಂಬಿಸಿದರು.*
*ಶಿಕ್ಷಣ ಇಲಾಖೆಯಲ್ಲಿನ ಇವರ ಶ್ರಮ ಮತ್ತು ಸಾಧನೆ ಮುಖ್ಯಮಂತ್ರಿ ದೇವರಾಜ ಅರಸರಿಗೆ ಸಮಾದಾನ ಮತ್ತು ಸಂತೋಷ ತರಿಸಿತ್ತು ಆದ್ದರಿಂದ ಆಪ್ತ ಗೆಳೆಯ ಬದರಿನಾರಾಯಣರು ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಹೊಸ ಕಾಯ೯ಕ್ರಮ ತರಲು ಮುಂದಾದರೆ ಮುಖ್ಯಮಂತ್ರಿಗಳು ಹಸಿರು ನಿಶಾನೆ ಇರುತ್ತಿತ್ತು.*
*ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ದೇಶದ ಸ್ವಾತಂತ್ರ್ಯ ಹೋರಾಟಗಾರರ ಪರಿಚಯದ ಕಿರುಹೊತ್ತಿಗೆ ನೀಡಬೇಕು ಇದರಿಂದ ಅವರಲ್ಲಿ ದೇಶಾಭಿಮಾನ ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿದರೆ ಮುಂದಿನ ಜನಾಂಗ ಸುಶಿಕ್ಷಿತವಾಗುವ ಜೊತೆ ಸ್ವಾತಂತ್ರ್ಯ ಹೋರಾಟದ ಕಷ್ಟ ಮತ್ತು ಇದಕ್ಕಾಗಿ ಜೀವ ತೇಯ್ದ ಸ್ವಾತಂತ್ರ್ಯ ಸೇನಾನಿಗಳ ನೆನಪು ಉಳಿಯಲಿ ಎಂಬ ಆಸೆ ಆಕಾಂಕ್ಷೆ ಸ್ವತಃ ಸ್ವಾತಂತ್ರ್ಯ ಹೋರಾಟ ಮಾಡಿದ ವಿದ್ಯಾ ಮಂತ್ರಿ ಬದರಿನಾರಾಯಣ ಅಯ್ಯಂಗಾರರದ್ದು ಈಗಿನ ಕಾಲದಲ್ಲಿಯಾದರೆ ಇದು ದೊಡ್ಡ ವಿಚಾರವೇ ಅಲ್ಲ ಆದರೆ 1972 ರಲ್ಲಿ ದೇಶದಲ್ಲಿ ಪ್ರಿಂಟಿಂಗ್ ಟೆಕ್ನಾಲಜಿ ಅತ್ಯಂತ ಹಿಂದುಳಿದ ಕಾಲದಲ್ಲಿ ಈ ಯೋಜನೆ ಮಹತ್ವದ ಯೋಜನೆ ಆಗಿತ್ತು.*
*ವಿದ್ಯಾ ಮಂತ್ರಿ ಬದರಿನಾರಾಯಣರ ದೇಶಭಕ್ತಿಯ ದೂರದೃಷ್ಟಿಯ ಈ ಯೋಜನೆ ಮುಖ್ಯಮಂತ್ರಿ ಮತ್ತು ಮಂತ್ರಿ ಮಂಡಲ ಅನುಮತಿ ನೀಡಿದ ನಂತರ, ಈ ಕಿರು ಹೊತ್ತಿಗೆ ಚಿತ್ರ ಸಹಿತ ಮುದ್ರಿಸಿ ನೀಡುವ ಕೆಲಸ ರಾಷ್ಟ್ರೋತ್ಥಾನ ಪರಿಷತ್ ಗುತ್ತಿಗೆ ಪಡೆಯುತ್ತದೆ ಆಗಲೇ ದೇವರಾಜ ಅರಸರ ವಿರೋದಿ ಕಾಂಗ್ರೇಸ್ ಬಣ ಸಕ್ರಿಯವಾಯಿತು, ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರಲ್ಲಿ ರಾಜ್ಯ ಕಾಂಗ್ರೇಸ್ ಪಕ್ಷದ ಸರ್ಕಾರ ಆರ್.ಎಸ್.ಎಸ್ ನ್ನು ಪೋಷಿಸುತ್ತದೆ ಎಂಬ ಬಾವನೆ ಉಂಟಾಗುವಂತೆ ಮಾಡುತ್ತಾರೆ ಆದರೆ ಮುಖ್ಯಮಂತ್ರಿ ದೇವರಾಜ ಅರಸರ ಮೇಲೆ ಕ್ರಮ ಕೈಗೊಳ್ಳಲು ಯಾವುದೇ ಸಬೂತು ಇರುವುದಿಲ್ಲ ಆದರೆ ವಿದ್ಯಾ ಮಂತ್ರಿ ಬದರಿನಾರಾಯಣರ ಖಾತೆಗೆ ಸಂಬಂದ ಪಟ್ಟ ವಿಚಾರ ಆದ್ದರಿಂದ ತಕ್ಷಣ ಬದರಿನಾರಾಯಣ ಅಯ್ಯಂಗಾರನ್ನ ಮಂತ್ರಿ ಮಂಡಲದಿಂದ ಕೈ ಬಿಡಲು ದೆಹಲಿ ಹೈಕಮಾಂಡ್ ಆದೇಶ ನೀಡುತ್ತದೆ.*
*ಮುಖ್ಯಮಂತ್ರಿ ದೇವರಾಜ ಅರಸರು ಈ ಎಲ್ಲಾ ಕಾರಣಕ್ಕೆ ಕಾರಣರಾರು ಎಂದು ಅರಿತಿರುತ್ತಾರೆ ಮತ್ತು ಸ್ವತಃ ಪ್ರದಾನ ಮಂತ್ರಿ ಇಂದಿರಾಗಾಂಧಿಯವರಿಗೆ ಮನವರಿಕೆ ಮಾಡಿ ಸರಿಪಡಿಸುವ ಉದ್ದೇಶ ಹೊಂದಿರುತ್ತಾರೆ, ಬದರಿನಾರಾಯಣ ಆಯ್ಯಂಗಾರರು ಸ್ವಾತಂತ್ರ್ಯ ಹೋರಾಟಗಾರರು, ಕಾಂಗ್ರೇಸ್ ನ ಪ್ರಭಲ ಮುಖಂಡರು ಅವರು ಆರ್.ಎಸ್.ಎಸ್ ಸಂಪರ್ಕದವರಲ್ಲ ಎಂದು ಅವರಿಗೆ ಗೊತ್ತಿರುತ್ತದೆ.*
*ಆದರೆ ಅಧಿಕಾರ ಹಣಕ್ಕಿಂತ ಜೀವನದಲ್ಲಿ ವೈಯಕ್ತಿಕ ತತ್ವ ಸಿದ್ದಾಂತವೇ ದೊಡ್ಡದೆಂದು ತೀರ್ಮಾನಿಸಿದ್ದ ಬದರಿನಾರಾಯಣ ಅಯ್ಯಂಗಾರರು ರಾಜಿನಾಮೆ ನೀಡಿದ್ದನ್ನು ಮಂತ್ರಿ ಮಂಡಲದ ಸಹೋದ್ಯೋಗಿಗಳು, ಸ್ವತಃ ಮುಖ್ಯಮಂತ್ರಿ ಒತ್ತಾಯಿಸಿದರು ವಾಪಾಸು ಪಡೆಯುವುದಿಲ್ಲ.*
*ದೇವರಾಜ ಅರಸರ ವಿರೋದಿ ಬಣ ಈ ಕೆಲಸಕ್ಕೆ ಆಯ್ಕೆ ಮಾಡಿಕೊಂಡಿದ್ದು ಆಗ ಶಿವಮೊಗ್ಗ ಜಿಲ್ಲೆಯ ಹೊಸನಗರದ ಶಾಸಕರಾಗಿದ್ದ ಆಗಿನ ಯುವ ವಕೀಲರು, ರಾಷ್ಟ್ರೀಯ ಯುವ ಕಾಂಗ್ರೇಸ್ ಮುಖಂಡರಾಗಿ ರಷ್ಯಾ ಮುಂತಾದ ದೇಶಗಳ ಪ್ರವಾಸ ಮಾಡಿ ಪ್ರಧಾನಿ ಇಂದಿರಾ ಗಾಂದಿಗೆ ನಿಕಟರಾಗಿದ್ದ ಹಿಂದಿ ಇಂಗ್ಲೀಷ್ ಬಾಷೆಯಲ್ಲಿ ಪ್ರಬುದ್ಧತೆ ಪಡೆದಿದ್ದ ಶ್ರೀಮಂತ ಭೂಮಾಲಿಕರು ಮತ್ತು ಬ್ರಾಹ್ಮಣರಾಗಿದ್ದ ಶಿರ್ನಾಳಿ ಮನೆತನದ ಶಿರ್ನಾಳಿ ಚಂದ್ರಶೇಖರ್ ಅವರನ್ನು ಅವರು ವಹಿಸಿಕೊಂಡ ಈ ಕೆಲಸ ಯಶಸ್ವಿ ಆಗಿ ಮಾಡಿ ಮುಗಿಸುತ್ತಾರೆ.*
*ಈ ರೀತಿ ಆನಂದಪುರಂ ಬದರಿನಾರಾಯಣ್ ಅಯ್ಯಂಗಾರ್ ವಿದ್ಯಾ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತಾರೆ.*
(ನಾಳೆ ಮುಂದಿನ ಭಾಗ - 38)
Comments
Post a Comment