ಭಾಗ -31, ಆನಂದಪುರಂನಲ್ಲಿ ವಿದ್ಯಾ ಮಂತ್ರಿ ಬದರಿನಾರಾಯಣ್ ಅಯ್ಯಂಗಾರರು ಶಿಕ್ಷಣ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಕೃಷ್ಣ ಮೂರ್ತಿ ಮಾಸ್ಟರ್
#ಭಾಗ_31.
#ಕೃಷ್ಣಮೂರ್ತಿ_ಮಾಸ್ಟರ್_ನಮ್ಮ_ತಂದೆಗೆ_ಪ್ರಾಥಮಿಕ_ಶಿಕ್ಷಣ_ನೀಡಿದವರು.
#ವಿದ್ಯಾಮಂತ್ರಿ_ಬದರಿನಾರಾಯಣ್_ಅಯ್ಯಂಗಾರರು_ಓದಿದ_ಪ್ರಾಥಮಿಕ_ಶಾಲೆಯಲ್ಲಿ_ಶಿಕ್ಷಕರು.
#ಸ್ವಾತಂತ್ರ_ಸಂಗ್ರಾಮಕ್ಕೂ_ಮುಮುಕಿದ್ದರು.
#ಖಾಧೀದಾರಿ_ಗಾಂಧೀವಾದಿ_ಶಿಸ್ತಿನ_ಶಿಕ್ಷಕರು.
ಶಿಕ್ಷಣದಿಂದ ದೇಶ ಅಭಿವೃದ್ಧಿ, ಶಿಕ್ಷಣದಿಂದ ದೇಶಕ್ಕೆ ಸ್ವಾತಂತ್ರ, ಖಾದಿ ಸ್ವದೇಶಿ ಅನ್ನುವ ಮಂತ್ರಗಳಿಂದ ನಮ್ಮ ಹಿರಿಯರು ಸ್ವಾತಂತ್ರ ಪೂರ್ವದಲ್ಲಿ ನಿಸ್ವಾಥ೯ವಾಗಿ ಶಿಕ್ಷಣ ನೀಡುತ್ತಿದ್ದರು ಇದರಿಂದ ಅವರಿಗೆ ಸರಿಯಾದ ಪ್ರತಿಫಲ ದೊರೆಯುತ್ತಿರಲಿಲ್ಲ ಆದರೆ ಅದು ಹಣದಿಂದ ಬೆಲೆ ಕಟ್ಟಲಾಗದ ಸೇವಾವೃತ್ತಿಯ ದ್ಯೇಯ ಸಿದ್ದಾಂತದ ಕೃಷ್ಣಮೂರ್ತಿ ಮಾಸ್ಟರ್ ಆನಂದಪುರಂನ ಸ್ವಾತಂತ್ರ್ಯ ಪೂರ್ವದ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಶಿಕ್ಷಣ ಶಿಕ್ಷಣ ನೀಡಿದ ಅಗ್ರಗಣ್ಯರು.
ನಮ್ಮ ತಂದೆ ಇವರಿಂದ ಶಿಕ್ಷಣ ಪಡೆದವರು, ನಮ್ಮ ತಂದೆಯು ಬುದ್ದಿವಂತರೆಂಬ ಬಗ್ಗೆ ಹೆಮ್ಮೆ ಮತ್ತು ನಮ್ಮ ತಂದೆಯ ಬಡತನದ ಬಗ್ಗೆ ಅನುಕಂಪ ಇವರಿಗೆ.
ನನ್ನಣ್ಣನಿಗೂ ಒಂದು ವರ್ಷ ಶಿಕ್ಷಕರಾಗಿದ್ದರು, ಆರು ಅಡಿ ಉದ್ದದ ನೀಳಕಾಯ ಶರೀರದ ಸ್ಪುರದೃಪ ಅವರದ್ದೆಂದು ಅವರನ್ನು ನೋಡಿದವರು ನೆನಪಿಸಿ ಕೊಳ್ಳುತ್ತಾರೆ.
ಗಾಂಧಿವಾದಿಗಳಾಗಿ, ಖಾಧಿ ವಸ್ತ್ರದಾರಿಗಳಾಗಿ ಆ ಕಾಲದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ನಮ್ಮ ಊರಿನಲ್ಲಿನ ಕೆಲವೇ ಕೆಲವರಲ್ಲಿ ಕೃಷ್ಣಮೂರ್ತಿ ಮಾಸ್ಟರ್ ಒಬ್ಬರು.
ಇವರು ವಿದ್ಯಾಮಂತ್ರಿ ಬದರಿನಾರಾಯಣ್ ಅಯ್ಯಂಗಾರರು ಓದಿದ ಪ್ರಾಥಮಿಕಶಾಲೆ ಮತ್ತು ದಾಸಕೊಪ್ಪದ ಶಾಲೆಯಲ್ಲಿ ವೃತ್ತಿ ಮಾಡಿದ್ದರು, ಯಾವಾಗಲು ಸೈಕಲ್ ನಲ್ಲೇ ಪ್ರಯಾಣಿಸುತ್ತಿದ್ದರು.
ಹೊಸನಗರ ಮೂಲದ ಇವರು ಇಲ್ಲೇ ವೃತ್ತಿ ಮಾಡಿ ನಂತರ ಆನಂದಪುರಂನಲ್ಲೇ ನೆಲೆಸಿ ಖ್ಯೆರಾ ಎಂಬ ಹಳ್ಳಿಯಲ್ಲಿ ಕೃಷಿ ಭೂಮಿ ಹೊಂದಿ ಕೃಷಿ ಕೂಡ ಮಾಡಿದ್ದರು.
ಕೃಷ್ಣ ಮೂರ್ತಿ ಮಾಸ್ಟರ್ ರುಕ್ಮಿಣಿಯಮ್ಮ ದಂಪತಿಗಳಿಗೆ ಚಂದ್ರಶೇಖರ್, ಜಯರತ್ನ, ರವೀಂದ್ರನಾಥ, ಸರಸ್ವತಿ, ಪುಷ್ಪಲತಾ ಮತ್ತು ಲಕ್ಷ್ಮೀಷ್ ಕುಮಾರ ಎಂಬ ಮೂರು ಪುತ್ರರು ಮತ್ತು ಮೂವರು ಪುತ್ರಿಯರಿದ್ದಾರೆ.
ಈಗ ಇವರ ಪತ್ನಿ ಮತ್ತು ಕೊನೆಯ ಪುತ್ರ ಲಕ್ಷ್ಮೀಷ್
ಆನಂದಪುರಂನಲ್ಲಿದ್ದಾರೆ, ಇವರ ಮೊದಲ ಪುತ್ರ ಚಂದ್ರಶೇಖರ್ ಉಡುಪಿ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಮಂತ್ರಿಗಳಿಗೆ ಆಪ್ತ ಸಹಾಯಕರು ಆಗಿ ಈಗ ನಿವೃತ್ತರಾಗಿ ಅಲ್ಲೇ ನೆಲೆಸಿದ್ದಾರೆ.
ಇಬ್ಬರು ಪುತ್ರಿಯರಲ್ಲಿ ಕೊನೆಯ ಪುತ್ರಿ ಸರಸ್ವತಿ ಅತ್ಯುತ್ತಮ ಕ್ರೀಡಾಪಟುಗಳಾಗಿದ್ದು ರಾಜ್ಯ ಮಟ್ಟದ ಪ್ರಶಸ್ತಿ ವಿಜೇತರು ಈಗ ಶಿವಮೊಗ್ಗದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ ಆಗಿದ್ದಾರೆ.
Comments
Post a Comment