2014ರಲ್ಲಿ ಮೋದಿ ಪ್ರದಾನಿ ಆಗಲಿ ಎಂದು ಬಿಜೆಪಿ ಸೇರಿದ್ದ ಏಳು ವರ್ಷದ ಹಿಂದಿನ ಯಡೂರಪ್ಪರ ಪರ ಈಶ್ವರಪ್ಪರ ಜೊತೆ ಚುನಾವಣಾ ಪ್ರಚಾರ ಸಭೆಯ ನೆನಪಿಸಿದ ಈ ಪೋಟೋ.
#ಏಳು_ವರ್ಷದ_ಹಿಂದಿನ_ನೆನಪಿನ_ರಾಜಕಾರಣದ_ಚಿತ್ರ.
#ಮೋದಿ_ಸರ್ಕಾರಕ್ಕೆ_ಏಳು_ವರ್ಷ.
ಆಗಷ್ಟೆ ವಿಧಾನ ಸಭಾ ಚುನಾವಣೆ ಮುಗಿದಿತ್ತು, ಆ ಚುನಾವಣೆಯಲ್ಲಿ ನಾನು ಸಾಗರ ವಿಧಾನ ಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳದ ಅಧ್ಯಕ್ಷನಾಗಿದ್ದೆ. (ಎರಡನೆ ಬಾರಿಗೆ , ಅದೂ ವಿಧಾನ ಸಭಾ ಚುನಾವಣೆ ನಂತರ ವೈಯಕ್ತಿಕ ಕಾರಣದಿಂದ ರಾಜಕೀಯದಿಂದ ದೂರ ಇರುವ ಕರಾರಿನ ಮೇಲೆ) ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಕಾಗೋಡು ತಿಮ್ಮಪ್ಪನವರು ಗೆದ್ದು ನಮ್ಮ ಅಭ್ಯಥಿ೯ ಬೇಳೂರು ಗೋಪಾಲಕೃಷ್ಣ ( ಎರೆಡು ಬಾರಿ ಬಿಜೆಪಿ ಶಾಸಕರಾಗಿದ್ದವರು) ವೈಯಕ್ತಿಕ ಸಾಮರ್ಥ್ಯದಿಂದ ಎರಡನೆ ಸ್ಥಾನದಲ್ಲಿ ಪರಾಜಿತರಾದರು, ನಂತರ ನಾನು ರಾಜಕೀಯ ಬಿಟ್ಟು ಬಿಟ್ಟಿದ್ದೆ.
ಹೀಗಿದ್ದಾಗಲೇ 2014ರ ಲೋಕಸಭಾ ಚುನಾವಣೆ ಘೋಷಣೆ ಆಯಿತು, ಯಡೂರಪ್ಪನವರು ಬಿಜೆಪಿಯಿಂದ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಆದರು, ಆಗ ಬೇಳೂರು ಗೋಪಾಲಕೃಷ್ಣ ಪುನಃ ಮಾತೃ ಪಕ್ಷದ ಸೇರ್ಪಡೆ ತೀರ್ಮಾನಗಳಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕ್ ಜೆಡಿಎಸ್ ಅಧ್ಯಕ್ಷನಾದ ನಾನು ಮತ್ತು ಸಾಗರ ಟವನ್ ಜೆಡಿಎಸ್ ಅಧ್ಯಕ್ಷರಾದ ಮಂಜುನಾಥರು ಗೋಪಾಲಕೃಷ್ಣರ ಗೆಳೆತನದ ಒತ್ತಾಯದಿಂದ ಬಿಜೆಪಿ ಸೇರಿದೆವು, ಆಗ ನಮ್ಮ ಮನಸ್ಸಿನಲ್ಲೂ ಮೋದಿ ಪ್ರದಾನಿ ಆದರೆ 24 ಗಂಟೆ ವಿದ್ಯುತ್, ನಿರುದ್ಯೋಗ ನಿವಾರಣೆ, ಒಂದು ರೂಪಾಯಿ ಲಂಚ ಇಲ್ಲದ ಸರ್ಕಾರಿ ಕಚೇರಿ, ಎಲ್ಲರಿಗೂ ಉಚಿತ ಚಿಕಿತ್ಸೆ, ಬಡವರ ಮಕ್ಕಳಿಗೆ ಉಚಿತವಾಗಿ ಇಂಜಿನಿಯರ್, ವೈದ್ಯಕೀಯ ಸೀಟು ಇತ್ಯಾದಿ ಭರವಸೆ ಮೂಡಿಸುವಂತೆ ಜನಾಕರ್ಷಿಸುವ ಮೋಡಿ ಉಂಟು ಮಾಡುವ ಮಾತುಗಾರ ಆಯನೂರು ಮಂಜುನಾಥ ರ ಪ್ರಚಾರದ ಭಾಷಣದಿಂದ ಕನಸು ಕಂಡಿದ್ದು ಸತ್ಯ.
ಸಾಗರ ತಾಲ್ಲೂಕಿನಾದ್ಯಂತ ಮಾಜಿ ಉಪ ಮುಖ್ಯಮ೦ತ್ರಿ ಈಶ್ವರಪ್ಪರ ಜೊತೆ ಅನೇಕ ಸಾರ್ವಜನಿಕ ಪ್ರಚಾರ ಸಭೆಗಳನ್ನು ಬೇಳೂರು ಗೋಪಾಲಕೃಷ್ಣರ ಸಂಗಡ ನಾವೆಲ್ಲ (ಆಗಿನ ನಗರಸಭಾ ಸದಸ್ಯ ಮಂಜುನಾಥ, ಬಿ.ಆರ್. ಜಯಂತ್ ) ಭಾಗವಹಿಸಿದ್ದು ನೆನಪುಗಳು.
ಯಡೂರಪ್ಪನವರು ದಾಖಲೆಯ ಅಂತರದಲ್ಲಿ ಗೆದ್ದರು ಮೋದಿಯವರು ಪ್ರದಾನಿ ಆದರು ನಾನು ಮೊದಲೇ ನಿರ್ದರಿಸಿದಂತೆ ನನ್ನ ಕ್ಷೇತ್ರ ರಾಜಕೀಯ ಹೊರತು ಪಡಿಸಿ ಬದಲಿಸಿಕೊಂಡೆ.
ಇವತ್ತು 7 ವರ್ಷದ ಹಿಂದಿನ ಈ ಚುನಾವಣಾ ಪ್ರಚಾರದ ಪೋಟೋ ಆ ದಿನ ನೆನಪಿಸಿತು (ಯಡಜಿಗಳೆಮನೆ ಪ್ರಚಾರ ಸಭೆ ) ಅವತ್ತು ಮಧ್ಯಾಹ್ನ ವಾ ಶಂ ರಾಮಚಂದ್ರರ (ಈಗಿನ ಬೀಮನ ಕೋಣೆ PLDB ಅಧ್ಯಕ್ಷರು) ಸಹೋದರರ ಮನೆಯಲ್ಲಿ ಬೋಜನ ಮುಗಿಸಿದ ನಂತರದ ಪ್ರಚಾರ ಸಭೆ ಇದು.
ಈಗ ಬೇಳೂರು ಕಾಂಗ್ರೇಸ್ ಸೇರಿದ್ದಾರೆ.
Comments
Post a Comment