ಪೇಸ್ ಬುಕ್ ಲೈವ್ ನಲ್ಲಿ ನಂಬರ್ ಒನ್ ಕನ್ನಡಿಗ.ಕರೋನಾ ಕಾಲದಲ್ಲಿ ಜಗತ್ ಪ್ರಸಿದ್ಧರಾದ ಪ್ರತಿಭಾವಂತರು. ಅರವಿ೦ದ್ ವಿವೇಕ್ ಮಂಗಳೂರು
#ಇವರಪೇಸ್_ಬುಕ್_ಲೈವ್_ವೀಕ್ಷಕರು_40_ದೇಶಗಳ_3_ಲಕ್ಷಕ್ಕೂ_ಅಧಿಕ.
#ಮಂಗಳೂರಿನ_ಅರವಿಂದ್_ವಿವೇಕ್
#ಹದಿನೈದು_ಸಾವಿರ_ದಾಟಿದ_ಹಾಡು_ಸುಮಾರು_160_ಎಪಿಸೋಡಗಳು
ಮಂಗಳೂರಿನ ಅರವಿಂದ್ ವಿವೇಕ್ ಮಕ್ಕಿಮನೆ ಅರ್ಕೆಸ್ಟ್ರಾ ಎಂಬ ಹಾಡುಗಾರರ ತಂಡ ಕಟ್ಟಿಕೊಂಡು ಕಾರ್ಯಕ್ರಮಗ ನೀಡುತ್ತಿದ್ದವರು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕೊರಾನಾ ಮೊದಲ ಅಲೆಯಲ್ಲಿ ಪೇಸ್ ಬುಕ್ ಲೈವ್ ಪ್ರೋಗ್ರಾಂ ಪ್ರಾರಂಬಿಸಿದ್ದಾಗಿನಿಂದ ನೋಡುತ್ತಾ ಬಂದಿದ್ದೇನೆ.
ಕೃಷ್ಣ ಸುಂದರ ರಾಜೇಶ್ ಈಗ ಅರವಿಂದ್ ವಿವೇಕ್ ಎಂಬ ಸೆಲೆಬ್ರಿಟಿ ಆಗಿದ್ದಾರೆ, ನಿರಂತರ ನಾನ್ ಸ್ಟಾಪ್ 5 ಗಂಟೆಯಷ್ಟು ದೀರ್ಘಕಾಲ ಯಾವುದೇ ಆಯಾಸ ಇಲ್ಲದೆ ಇವರು ನೀಡುವ ಲೈವ್ ವೀಕ್ಷಿಸುವವರ ಸಂಖ್ಯೆ ಮೂರು ಲಕ್ಷಕ್ಕೂ ಮಿಕ್ಕಿದೆ, ಭಾರತ ಮಾತ್ರವಲ್ಲ ಸುಮಾರು 40 ದೇಶಗಳಲ್ಲಿ ಇವರಿಗೆ ಅಭಿಮಾನಿಗಳಿದ್ದಾರೆ.
ಸುಬ್ರಮಣ್ಯ ಸಮೀಪದ ಪುತ್ತೂರುನ ನೆಬ್ಬಣ ಹುಟ್ಟೂರು ಬಾಲ್ಯದಲ್ಲೇ ತಂದೆ ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆದ ಇವರು ಓದಿದ್ದು ಐಟಿಐ ತನಕ.
ತಾಯಿ ಬೀಡಿ ಕಟ್ಟಿ ಇವರನ್ನ ಸಾಕಿದ್ದು ಮತ್ತು ಇವರು ಕೂಲಿ ಮಾಡುತ್ತಾ ಓದಿದ್ದು, ಚಿತ್ರ ನಟ ಉಪೇಂದ್ರ ಅಭಿಮಾನಿ, ಪ್ರೇಮ ವಿವಾಹ, ಇಬ್ಬರು ಮಕ್ಕಳ ಸುಖಿ ಸಂಸಾರ, ಚಿತ್ರ ನಿರ್ಧೇಶನದ ಗುರಿ ಬಗ್ಗೆ ಮಂಗಳೂರಿನ ಕಹಳೆ ಚಾನಲ್ ಗೆ ಕಳೆದ ವರ್ಷ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪೇಸ್ ಬುಕ್ ಲೈವ್ ನ ಇವರ ಹೊಸ ಹವಾ ಅನೇಕರು ಅನುಕರಿಸುತ್ತಿದ್ದಾರೆ, ಕೊರಾನಾ ಕಾಲ ಹೊಸ ಮನರಂಜನೆಗೆ ದಾರಿ ತೋರಿಸಿದೆ ಪ್ರತಿಭಾವಂತರಿಗೆ ಜಗತ್ಪ್ರಸಿದ್ಧರನ್ನು ಮಾಡುತ್ತಿದೆ ಅದರಲ್ಲಿ ಮಂಗಳೂರಿನ ಅರವಿಂದ್ ವಿವೇಕ್ ಒಬ್ಬರು.
ನಾನು ತಪ್ಪದೆ ಇವರ ಪ್ರತಿ ಪೇಸ್ ಬುಕ್ ಲೈವ್ ವೀಕ್ಷಿಸುವ ಅವರ ಅಭಿಮಾನಿ ಕೂಡ, ಇವತ್ತಿನ ಇವರ ಲೈವ್ ಇಲ್ಲಿದೆ ನೋಡಿ
Comments
Post a Comment