ಭಾಗ -42, ಆನಂದಪುರಂ ಇತಿಹಾಸ, ಆನಂದಪುರ೦ನ ಒಂದು ಕಾಲದಲ್ಲಿ ಸುಮಾರು ನಾಲ್ಕು ದಶಕ ನಡೆದ ಪ್ರಖ್ಯಾತ ಪ್ರಸಿದ್ದ ಹೋಟೆಲ್ ಕೋಮಲಾ ವಿಲಾಸ್
#ಆನಂದಪುರಂ_ಇತಿಹಾಸ
#ಆ_ಕಾಲದ_ಸುಪ್ರಸಿದ್ಧ_ಹೋಟೆಲ್_ಕೋಮಲವಿಲಾಸ್
#ಜಯವೀರನಾಯಕ್_ತಂದೆ_ಆನಂದನಾಯಕರಿಂದ_ಪ್ರಾರಂಭ.
#ಜಯವೀರನಾಯಕ್_ಮಾವ_ರಾಮಕಿಣಿಯಿಂದ_ಉತ್ತುಂಗಕ್ಕೆ.
#ಶುಚಿ_ರುಚಿಯ_ಅದುನಿಕ_ರೆಸ್ಟೋರೆಂಟ್.
ಆನಂದನಾಯಕರು ಆನಂದಪುರಂಗೆ ಬಂದು ಅಯ್ಯಂಗಾರ್ ಕುಟುಂಬದ ಬಸ್ ಸ್ಟ್ಯಾಂಡ್ ಎದುರಿನ ಜಾಗದಲ್ಲಿ ವೆಜ್ ರೆಸ್ಟೋರೆಂಟ್ ಮಾಡಲು ವೆಂಕಟಾಚಲಯ್ಯಂಗಾರರಲ್ಲಿ ವಿನಂತಿಸಿದಾಗ ಅವರು ಅಭಿವೃದ್ದಿ ಹೊಂದಲಿರುವ ಆನಂದಪುರಂಗೆ ಹೋಟೆಲ್ ಅವಶ್ಯವಿರುವುದು ಅರಿತಿರುತ್ತಾರೆ.
ಆಗಲೇ ಅವರ ತಾಯಿ ಸ್ಮರಣಾರ್ಥ ನಿರ್ಮಿಸಿದ ಕನಕಮ್ಮಾಳ್ ಆಸ್ಪತ್ರೆಗೆ ಬರುವವರಿಗಾಗಿ ಒಂದು ಸುಸಜ್ಜಿತ ರೆಸ್ಟೋರಂಟ್ ಕೊರತೆ ಇತ್ತು ಹಾಗಾಗಿ ತಮ್ಮ ತಂದೆ ರಾಮಕೃಷ್ಣ ಅಯ್ಯಂಗಾರರಿಗೆ ಮತ್ತು ಸಹೋದರ ಬದರಿನಾರಾಯಣ ಅಯ್ಯಂಗಾರರಿಗೆ ಮನ ಒಲಿಸಿ ಆನಂದಪುರಂ ಬಸ್ ಸ್ಟಾಂಡ್ ಎದುರಿನ ಮತ್ತು ತಮ್ಮ ಮನೆಯ ಹಿಂಬಾಗದ ಕೊಟ್ಟಿಗೆಯ ಎದುರಿನ ಚಿಲುಮೆ ಎದುರಿನ ಜಾಗ ಬಾಡಿಗೆಗೆ ನೀಡುತ್ತಾರೆ.
ಅದೇ #ಕೋಮಲ_ವಿಲಾಸ್ ಆನಂದಪುರಂನ ಸುಮಾರು 40 ವರ್ಷ ಸುಪ್ರಸಿದ್ದ ಹೋಟೆಲ್ ಆಗಿ ವಿಜೃಂಬಿಸಿತು, ಕೋಮಲ ವಿಲಾಸ್ ಗೆ ಹೋಗಿ ಮಸಾಲೆ ತಿಂದು ಕಾಫಿ ಟೀ ಕುಡಿಯುವುದು ಆ ಕಾಲಕ್ಕೆ ಒ0ದು ಪ್ರತಿಷ್ಟೆಯ ವಿಚಾರ.
ಪ್ರತಿ ದಿನ ಸಂಜೆ ಆನಂದಪುರಂ ಪೋಲಿಸ್ ಠಾಣೆಯಿಂದ ವಿಲೇಜ್ ಪಂಚಾಯತ್ ಕಛೇರಿ ತನಕ ಕೋಮಲ ವಿಲಾಸ್ ನ ಮಸಾಲೆದೋಸೆ ಸುವಾಸನೆ ಇಲ್ಲಿ ಸಾಗುತ್ತಿದ್ದ ಜನರ ಮೂಗು ಅರಳಿಸುತ್ತಿತ್ತು ಮತ್ತು ಬಾಯಿ ನೀರು ತರಿಸುತ್ತಿತ್ತು.
ಬಸ್ ಸ್ಟಾಂಡ್ ಎದರು ಮುಖ್ಯ ರಸ್ತೆಯಿಂದ ಹೆಜ್ಜೆ ಎತ್ತಿಟ್ಟರೆ ಕೋಮಲ್ ವಿಲಾಸ್ ಬಾಗಿಲು, ಒಳಗೆ ಪಳ ಪಳ ಹೊಳೆಯುವ ಗಾಜಿನ ಕೌಂಟರ್ ಅಲ್ಲಿ ದೇಶದ ಪ್ರಖ್ಯಾತ ಬ್ರಾಂಡ್ ನ ಚಾಕಲೇಟ್ ಬಿಸ್ಕಿಟ್ ಗಳು, ಸಿಹಿ ತಿಂಡಿಗಳು.
ಸದಾ ಸುವಾಸನೆಯ ಅಗರ್ ಬತ್ತಿ ಪರಿಮಳ, ಗ್ರಾಹಕರ ಬಿಲ್ ಪಡೆಯುವ ಎತ್ತರದ ಟೇಬಲ್ ಹಿಂಬಾಗದಲ್ಲಿ ಯುರೋಪಿಯನ್ ಬಿಳಿ ಬಣ್ಣದ ಹಸನ್ಮುಖಿ ಮಿತಭಾಷಿ ಜಯ ವೀರ ನಾಯಕರು ಇರುತ್ತಿದ್ದರು.
ಆನಂದ ನಾಯಕ್ ಮತ್ತು ಶಾಂತಮ್ಮ ದಂಪತಿಗಳಿಗೆ ಜಯ ವೀರ ನಾಯಕ್ ಏಕೈಕ ಪುತ್ರ ಮತ್ತು ಲತಾ, ಸುವರ್ಣಾ, ಮುಕ್ತಾ ಮತ್ತು ಯಶೋದ ಎಂಬ ನಾಲ್ವರು ಪುತ್ರಿಯರು ಇವರ ಮನೆ ಆಸ್ಪತ್ರೆ ಎದರು ರಂಗನಾಥ ಸ್ವಾಮಿ ದೇವಾಲಯ ರಸ್ತೆಯಲ್ಲಿತ್ತು.
ಈ ಕುಟುಂಬದ ಯಜಮಾನ ಆನಂದ ನಾಯಕರು ಅವರ ಕೋಮಲ ವಿಲಾಸ್ ಹಿಂಬಾಗದಲ್ಲಿದ್ದ ನೀರಿನ ಚಿಲುಮೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಮಕ್ಕಳೆಲ್ಲ ಚಿಕ್ಕವರು ಆಗಲೇ ಆನಂದ ನಾಯಕರ ಪತ್ನಿ ಶಾಂತಮ್ಮ ತಮ್ಮ ಸಹೋದರ ರಾಮಕಿಣಿಯವರನ್ನು ಇಡೀ ವ್ಯವಹಾರ ನಿರ್ವಹಿಸಲು ಕುಟುಂಬ ಸಮೇತ ಕರೆಸಿಕೊಳ್ಳುತ್ತಾರೆ.
ಒಂದು ವಿಶೇಷ ಅಂದರೆ ಆನಂದಪುರಂ ನಲ್ಲಿ ಪ್ರಾರಂಭ ಆದ ಕೋಮಲಾ ವಿಲಾಸ್ ಮತ್ತು ಸಿಂಗಾಪುರದಲ್ಲಿ ಪ್ರಾರಂಭ ಆದ ಕೋಮಲಾ ವಿಲಾಸ್ ಪ್ರಾರಂಭದ ವರ್ಷ ಒಂದೇ, ಸಿಂಗಾಪುರದ ಕೋಮಲಾ ವಿಲಾಸ್ ಈಗಲೂ ವಿಶ್ವ ವಿಖ್ಯಾತ.
ರಾಮಕಿಣಿಯ ಮೊದಲ ಪತ್ನಿ ಶ್ರೀಮತಿ ಜಯಶೀಲರಿಗೆ ಏಕೈಕ ಪುತ್ರ ಪಾಂಡುರಂಗ, ಆ ಪತ್ನಿ ಮೃತರಾದ್ದರಿಂದ ಎರಡನೆ ವಿವಾಹ ಮೂಗುಡ್ತಿ ಶ್ಯಾಂ ರಾಯರ ಗೋಕರ್ಣದ ಸಹೋದರಿ ಸಂಬಂದಿ ಶ್ರೀಮತಿ ಸರೋಜಿನಿಯವರೊಡನೆ ಆಗುತ್ತದೆ ಇವರಿಗೆ ನಿಮ೯ಲ, ನಳಿನಿ ಮತ್ತು ನಯನ ಎಂಬ ಮೂವರು ಹೆಣ್ಣು ಮಕ್ಕಳು.
ಕೋಮಲ ವಿಲಾಸ್ ಅತ್ಯಂತ ಲಾಭದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ ಇದೇ ಸಂದರ್ಭದಲ್ಲಿ ರಾಮಕಿಣಿಯವರು ಟಿಂಬರ್ ವ್ಯವಹಾರ ಕೂಡ ನಡೆಸಿ ಅನೇಕ ಆಸ್ತಿಗಳನ್ನು ಈ ಕುಟುಂಬಗಳು ಗಳಿಸುತ್ತದೆ ಈ ಸಂದರ್ಭದಲ್ಲೇ ದಂತ ವಿಜ್ಞಾನದ ವಿದ್ಯಾರ್ಥಿ ಆಗಿದ್ದ ಜಯವೀರನಾಯಕ್ ಕುಟುಂಬ ನಿರ್ವಹಣೆಯ ಜವಾಬ್ದಾರಿ ವಹಿಸಲು ವಿದ್ಯಾಭ್ಯಾಸ ಮೊಟಕುಗೊಳಿಸಿ ಮಾವ ರಾಮಕಿಣಿಯವರ ಜೊತೆ ಕೈ ಜೋಡಿಸುತ್ತಾರೆ.
ಜಯವೀರ್ ನಾಯಕ್ ಮತ್ತು ಸಾವಿತ್ರಿ ದಂಪತಿಗಳಿಗೆ ಜಯಾನಂದ ಎಂಬ ಪುತ್ರ ಮತ್ತು ಜೋತ್ಸ್ನಾ ಎಂಬ ಪುತ್ರಿ ಇದರಲ್ಲಿ ಪುತ್ರ ಜಯಾನಂದ ಹೃದಯಾಘಾತದಿಂದ ಅಕಾಲ ಮೃತ್ಯುವಶ ಆಗಿದ್ದು ಈ ದಂಪತಿಗಳಿಗೆ ದೊಡ್ಡ ಆಘಾತ, ನಂತರ ಮಗಳು ಜೋತ್ಸ್ನಾ ಮತ್ತು ಅಳಿಯ ಅಮೃತ್ ಜೊತೆ ಮುಂಬಾಯಿಯಲ್ಲಿ ಜಯ ವೀರ್ ನಾಯಕ್ ದಂಪತಿ ನೆಲೆಸುತ್ತಾರೆ ಎರೆಡು ವರ್ಷದ ಹಿಂದೆ ಜಯ ವೀರ್ ನಾಯಕರು ಹೃದಯಾಘಾತದಿಂದ ನಿಧನರಾದರು.
ಜಯ ವೀರ ನಾಯಕರ ಪತ್ನಿ ಅಕ್ಕನ ಮಗ ಪ್ರಸಿದ್ದ ಜಾದುಗಾರ್, ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿದ #ಪ್ರಶಾಂತ್_ಹೆಗಡೆ_ಜಾದುಗಾರ್ ಬಾಲ್ಯದಲ್ಲಿ ಆನಂದಪುರಂಗೆ ಚಿಕ್ಕಮ್ಮನ ಮನೆಗೆ ಬರುತ್ತಿದ್ದದ್ದು ಆಗ ಚಂಪಕ ಸರಸ್ಸು, ಆನಂದಪುರಂ ಕೋಟೆ, ರೈಲು ನಿಲ್ದಾಣದ ವಾಸಣ್ಣರ ವಡೆ ಎಲ್ಲಾ ನೆನಪಿಸಿಕೊಳ್ಳುತ್ತಾರೆ.
ರಾಮಕಿಣಿಯವರ ಸಹೋದರಿ ಸುನಂದಾರ ಪತಿ ರಿಪ್ಪನ್ ಪೇಟೆ ಸಮೀಪದ ಮೂಗುಡ್ತಿ ಶ್ಯಾಮರಾಯರು ಆ ಕಾಲದಲ್ಲಿ ಭದ್ರಾವತಿ ಪೇಪರ್ ಮಿಲ್ ಗೆ ಬೊಂಬಿನ ಸರಬರಾಜುದಾರರು ನಂತರ ಕೃಷಿ ಮಾಡುತ್ತಾರೆ, ಭೂ ಸುದಾರಣ ಕಾಯ್ದೆ ಬಂದಾಗ ಬಡ ರೈತರಿಗೆ ತುಂಬಾ ಸಹಾಯ ಮಾಡುತ್ತಾರೆ, ಊರಿನ ವ್ಯಾಜ್ಯಗಳನ್ನು ಪಂಚಾಯಿತಿ ಮಾಡಿ ಪೋಲಿಸ್ ಸ್ಟೇಷನ್ ಗೆ ಹೋಗದಂತೆ ಬಗೆಹರಿಸುತ್ತ ಈ ಭಾಗದಲ್ಲಿ ಪ್ರಸಿದ್ಧರಾಗಿದ್ದರು.
ಇವರ ಮಗ ರಘುನಾಥ ಶೆಣೈ
ಆನಂದಪುರಂನಲ್ಲೇ ಮಾಧ್ಯಮಿಕ ಶಾಲಾ ವಿದ್ಯಾಬ್ಯಾಸ ಮಾಡುತ್ತಾರೆ, ಮುಂದೆ ರಿಪ್ಪನ್ ಪೇಟೆಯಲ್ಲಿ ಶಾಂಭವಿ ಪೈನಾನ್ಸ್ ಮಾಡುತ್ತಾರೆ ಈಗ ಬೆಂಗಳೂರಿನ ಬುಲ್ ಟಿಂಪಲ್ ರಸ್ತೆಯಲ್ಲಿ ಟೆಂಪಲ್ ಆಪ್ ಸಕ್ಸಸ್ ಎಂಬ ಆಶ್ರಮದಲ್ಲಿ #ರಘುನಾಥ_ಗುರೂಜಿ ಎಂದು ಪ್ರಖ್ಯಾತ ಗುರೂಜಿ ಆಗಿದ್ದಾರೆ, ಇನ್ನೊಬ್ಬ ಪುತ್ರ ರಮಾನಾಥ ಶಾನುಬೋಗ್ ಎಂಟನೆ ತರಗತಿ ಆನಂದಪುರ೦ನಲ್ಲೇ ಓದುತ್ತಾರೆ ನಂತರ ಪ್ರತಿಷ್ಟಿತ ಮಣಿಪಾಲ್ ಸಂಸ್ಥೆಯ ಪತ್ರಿಕಾ ಕ್ಷೇತ್ರದಲ್ಲಿ ಕಾಯ೯ನಿರ್ವಹಿಸಿದರು.
1998 ರಲ್ಲಿ ವಯೋವೃದ್ದರಾದ ರಾಮಕಿಣಿ ಆನಂದಪುರಂಗೆ ನನ್ನ ಹುಡುಕಿಕೊಂಡು ಬಂದಿದ್ದರು ಅವರ ಹೆಸರಿನಲ್ಲಿ ತಾವರೇ ಹಳ್ಳಿ ಸ.ನಂ.44 ರಲ್ಲಿ ನಾಲ್ಕು ಎಕರೆ ಖುಷ್ಕಿ ಭೂಮಿ ಇವರಿಗೆ 1972 ರಲ್ಲಿ ಮಂಜುರಾಗಿತ್ತು ಆದರೆ ಅದು ಈಗ ಯಾರದೋ ವಶದಲ್ಲಿದೆ ಈಗ ರಾಮಕಿಣಿಯವರು ಇಲ್ಲ ಮಕ್ಕಳೆಲ್ಲ ಬೆಂಗಳೂರಲ್ಲಿ ನೆಲೆಸಿದ್ದಾರೆ.
ಆನಂದಪುರಂನಲ್ಲಿದ್ದ #ಕೋಮಲ_ವಿಲಾಸ್ ಹೋಟೆಲ್ ಈ ಕಾಲದಲ್ಲೂ ನೆನಪಿಸಿಕೊಂಡರೆ ಅದು ಅತ್ಯುತ್ತಮ ರೆಸ್ಟೋರಾಂಟ್ ಈಗಲೂ ಅಂತಹ ಹೋಟೆಲ್ ನಾನು ನೋಡಿಲ್ಲ.
Comments
Post a Comment